
ನಾಗಪುರ – 2008 ರ ಮುಂಬಯಿ ಮೇಲಿನ ಭಯೋತ್ಪಾದಕ ಆಕ್ರಮಣದ ಮುಖ್ಯ ಆರೋಪಿ ಅಜ್ಮಲ್ ಕಸಬ್ ಸೆರೆಮನೆಯಲ್ಲಿ ಮಟನ್ ಬಿರಿಯಾನಿ ಕೇಳಿದ್ದನು ಎಂಬ ಸುದ್ದಿಯನ್ನು ಉದ್ದೇಶಪೂರ್ವಕವಾಗಿ ನಾನೇ ಹರಡಿದ್ದೆ, ಎಂದು ರಾಜ್ಯಸಭಾ ಸದಸ್ಯ ಮತ್ತು ಹಿರಿಯ ನ್ಯಾಯವಾದಿ ಪದ್ಮಶ್ರೀ ಉಜ್ವಲ ನಿಕಮ್ ಅವರು ಹೇಳಿಕೆ ನೀಡಿದ್ದಾರೆ. ಇಲ್ಲಿನ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ಈ ಕುರಿತಾದ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ ಅವರು,
1. ಕಸಬ್ ನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದ್ದಾಗ ರಕ್ಷಾಬಂಧನದ ದಿನವಾಗಿದ್ದರಿಂದ ನನ್ನ ಕೈಗೆ ರಾಖಿ ಕಟ್ಟಲಾಗಿತ್ತು. ಕಸಬ್ ಈ ಬಗ್ಗೆ ವಿಚಾರಿಸಿದಾಗ ನಾನು ಅವನಿಗೆ ರಕ್ಷಾಬಂಧನ ದಿನದ ಮಹತ್ವವನ್ನು ತಿಳಿಸಿದೆ. ಅಷ್ಟರಲ್ಲಿ ನ್ಯಾಯಾಧೀಶರು ನ್ಯಾಯಪೀಠಕ್ಕೆ ಬಂದರು.
2. ನನ್ನ ಮತ್ತು ಕಸಬ್ ನ ನಡುವಿನ ಸಂಭಾಷಣೆಯನ್ನು ಅವರಿಗೆ ತಿಳಿಸಿದ ತಕ್ಷಣ ಕಸಬ್ ತಲೆ ತಗ್ಗಿಸಿ ಕಣ್ಣು ಒರೆಸಿಕೊಂಡಂತೆ ಮಾಡಿದನು. ನ್ಯಾಯಾಲಯದ ಹೊರಗೆ ಉಪಸ್ಥಿತರಿದ್ದ ಮಾಧ್ಯಮಗಳು ತಕ್ಷಣವೇ ‘ಕಸಬ್ ನ ಕಣ್ಣಿನಲ್ಲಿ ನೀರು’ ಎಂದು ಪ್ರಮುಖ ಸುದ್ದಿಯನ್ನು ಬಿತ್ತರಿಸಿದವು. ಕಸಬ್ ನ ಬಗ್ಗೆ ಅನುಕಂಪ ಮೂಡಬಾರದು ಎಂಬ ಕಾರಣಕ್ಕಾಗಿ ನಾನು ಮಾಧ್ಯಮಗಳ ಬಳಿ ಹೋಗಿ, ಕಸಬ್ ಮಟನ್ ಬಿರಿಯಾನಿ ಕೇಳಿದ್ದಾನೆ ಎಂದು ಹೇಳಿದೆ. ಅದರ ಬೆನ್ನಲ್ಲೇ ಆ ಸುದ್ದಿಯನ್ನು ತೋರಿಸಲು ಆರಂಭಿಸಲಾಯಿತು.
3. ಮರುದಿನ ನ್ಯಾಯಾಲಯದಲ್ಲಿ ಕಸಬ್ ನ ವಕೀಲರು ಹಿಂದಿನ ದಿನದ ಘಟನೆಯ ಬಗ್ಗೆ ಕೇಳಿದರು. ಅದಕ್ಕೆ ನಾನು, ‘‘ಅವನು ಪಾಕಿಸ್ತಾನದಿಂದ ಬಂದಿದ್ದಾನೆ, ಪ್ರತಿದಿನ ಮಾಂಸಾಹಾರ ಸೇವಿಸುತ್ತಿರಬಹುದು. ಹಾಗಾದರೆ ಬಿರಿಯಾನಿ ಕೇಳಿರಲಾರನೇ ? ಅವನನ್ನೇ ಕೇಳಿ’’ಎಂದೆ. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಚರ್ಚೆ ಕಸಬ್ ಗೆ ಪೂರ್ತಿಯಾಗಿ ಅರ್ಥವಾಗಿರಲಿಲ್ಲ. ಬಿರಿಯಾನಿ ನೀಡುವ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದು ಭಾವಿಸಿ ಅವನು ತಕ್ಷಣ ತಲೆ ಅಲ್ಲಾಡಿಸಿದನು. ಇದರಿಂದಾಗಿ ‘ಕಸಬ್ ಬಿರಿಯಾನಿ ಕೇಳಿದನು’ ಎಂಬ ಸುದ್ದಿಗಳನ್ನೇ ತೋರಿಸಲಾಯಿತು. ಅವನು ನಿಜವಾಗಿಯೂ ಬಿರಿಯಾನಿ ಕೇಳಿದ್ದನೋ ಇಲ್ಲವೋ ಎಂಬುದು ಕೇವಲ ಅವನಿಗೆ ಮಾತ್ರ ತಿಳಿದಿರುತ್ತದೆ.
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
‘ಒಂದು ವೇಳೆ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ, ಅವರು ಭಾಜಪವನ್ನು ನಿಷೇಧಿಸಲು ಹಿಂಜರಿಯುತ್ತಿರಲಿಲ್ಲ!’
ಕೇರಳ: ಮದರಸಾ ಶಿಕ್ಷಕನೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಬೇಸತ್ತು 19 ವರ್ಷದ ಯುವತಿ ಆತ್ಮಹತ್ಯೆ
ಬಂಗಾಳ ಸೌರಶಕ್ತಿ ಹಗರಣದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ನಗರಾಧ್ಯಕ್ಷನನ್ನು ಕೇರಳದಿಂದ ಬಂಧನ : Bengal Solar Scam