ಅಣುಯುದ್ಧವಾದರೆ ಸೌರಊರ್ಜೆಯು ಉಪಯೋಗಕ್ಕೆ ಬರುವುದೆಂಬುದು ಖಚಿತವಿಲ್ಲ

ಶ್ರೀ. ಶಾನ್ ಕ್ಲಾರ್ಕ್

೧. ಪ್ರಶ್ನೆ

ಅಣುಯುದ್ಧವಾದರೆ ‘ಆ ಸಮಯದಲ್ಲಿ ಸೌರ ಊರ್ಜೆಯನ್ನು ಎಷ್ಟರ ಮಟ್ಟಿಗೆ ಉಪಯೋಗಿಸಬಹುದು ?’ ಎಂಬ ಪ್ರಶ್ನೆಯು ಖಂಡಿತ ಬರುವುದು. ಈ ರೀತಿಯ ಪ್ರಶ್ನೆ ಬರುವುದಕ್ಕೆ ಮುಂದಿನ ೨ ಕಾರಣಗಳಿವೆ.

೧ ಅ. ಸೂರ್ಯಕಿರಣಗಳ ಪ್ರಭಾವವು ಕಡಿಮೆಯಾಗುವುದು : ಸಣ್ಣ ಅಣುಯುದ್ಧದಿಂದಲೂ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಕಪ್ಪು ಹರಡಿ ಅದು ಪೃಥ್ವಿಯ ಸುತ್ತಲೂ ಒಂದು ದಪ್ಪನೆಯ ಆವರಣವನ್ನು ನಿರ್ಮಿಸುತ್ತದೆ. ಅದರಿಂದ ಸೂರ್ಯಕಿರಣವು ಪೃಥ್ವಿಯ ಮೇಲೆ ಬಹಳ ಅಲ್ಪ ಪ್ರಮಾಣದಲ್ಲಿ ತಲುಪಬಹುದು. ಆದುದರಿಂದ ಸೌರ ಊರ್ಜಾ ಯಂತ್ರಗಳ ಕ್ಷಮತೆಯು ಬಹಳ ಕಡಿಮೆಯಾಗುವುದು.

೧ ಆ. ನ್ಯೂಕ್ಲಿಯರ್ ಇಲೆಕ್ಟ್ರೋಮ್ಯಾಗ್ನೇಟಿಕ್ ಪಲ್ಸ : ವಾತಾವರಣದಲ್ಲಿ ಒಂದಿಷ್ಟು ಆಕಾರದ ಅಣ್ವಸ್ತ್ರಗಳ ಸ್ಫೋಟವಾದರೆ ಅದರಲ್ಲಿನ ವಿದ್ಯುತ್ ಚುಂಬಕೀಯ ಉರ್ಜೆಯಿಂದ ‘ಇಲೆಕ್ಟ್ರಾನಿಕ್ ಸರ್ಕಿಟ್’ಅನ್ನು ಬಳಸಿರುವ ಎಲ್ಲ ವಸ್ತುಗಳು ಶಾಶ್ವತವಾಗಿ ನಿರುಪಯುಕ್ತವಾಗಬಹುದು. ಅದರಿಂದ ಚತುಶ್ಚಕ್ರವಾಹನಗಳು, ವಿಮಾನಗಳು, ವಿದ್ಯುತ ತಂತಿಗಳು (ಇಲೆಕ್ಟ್ರಿಕ್ ಗ್ರೀಡ್) ಮತ್ತು ಮನೆಯಲ್ಲಿನ ಸೌರ ಉರ್ಜೆಯ ಯಂತ್ರವು ಕೆಡಬಹುದು. ಅಣು ವಿದ್ಯುತ್ ಚುಂಬಕೀಯ ಉರ್ಜೆಯಿಂದ (ನ್ಯೂಕ್ಲೀಯರ್ ಇಲೆಕ್ಟ್ರೋಮ್ಯಾಗ್ನೆಟಿಕ್ ಪಲ್ಸ್’ನಿಂದ) ಒಂದೊಮ್ಮೆ ಸೌರ ಊರ್ಜೆಯ ಯಂತ್ರಗಳು ಸ್ವಲ್ಪ ಪ್ರಮಾಣದಲ್ಲಿ ಕೆಟ್ಟರೂ ವಿದ್ಯುತ್ ಯಂತ್ರಗಳು ಕೆಡುವ ಸಾಧ್ಯತೆಯು ಹೆಚ್ಚಿರುವುದು.

೨. ಉತ್ತರ

ಅ. ‘ಸಣ್ಣ ಅಣುಯುದ್ಧದಿಂದಲೂ ಸಮಾಜದಲ್ಲೂ ವಿನಾಶಕಾರಿ ಪರಿಣಾಮವಾಗಬಹುದು. ಯಾರು ಅಣುಸ್ಫೋಟ ಆಗಿರುವ ಭಾಗಗಳಲ್ಲಿ ವಾಸಿಸುತ್ತಿರುವವರೋ, ಅವರಿಗೆ ‘ವಿದ್ಯುತ್ ಇಲ್ಲ’, ಎಂಬ ಚಿಂತೆಗಿಂತ ‘ತಾವು ಸಾಯಬಹುದೇ ?’ ಎಂಬ ಚಿಂತೆ ಹೆಚ್ಚಿದೆ.

ಆ. ಆಪತ್ಕಾಲಕ್ಕಾಗಿ ಸೌರ ಮತ್ತು ವಾಯು ಊರ್ಜೆಗಳ ಉಪಾಯವನ್ನು ಹೇಳಿದ್ದರೂ ಇವು ‘ಅಣುಯುದ್ಧವಾದರೆ ನಡೆಯುತ್ತವೆಯೋ ಇಲ್ಲವೋ ?’, ಎಂದು ಖಚಿತವಾಗಿ ಹೇಳಲಾಗದು.

ಇ. ಇಂತಹ ಪ್ರಸಂಗದಲ್ಲಿ ಸ್ಥೂಲದ ಅಪಾಯವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಬುದ್ಧಿಯಿಂದ ಎಷ್ಟೇ ವಿಚಾರವಿನಿಮಯ ಮಾಡಿದರೂ ಅದು ನಿರರ್ಥಕ ಮತ್ತು ನಿರಾಶಾಜನಕವಾಗಿರುವುದು.

ಈ. ಆಪತ್ಕಾಲವನ್ನು ಎದುರಿಸುವುದಕ್ಕಾಗಿ ಮನಸ್ಸಿನಲ್ಲಿ ಆಧ್ಯಾತ್ಮಿಕ ದೃಷ್ಟಿಕೋನವಿಡುವುದು ಆವಶ್ಯಕವಾಗಿದೆ; ಏಕೆಂದರೆ ಆಪತ್ಕಾಲದಲ್ಲಿ ತನ್ನ ರಕ್ಷಣೆಯಾಗುವುದು ಮಹತ್ವದಾಗಿರುವುದರಿಂದ ಮುಂದೆ ಕೊಟ್ಟಿರುವ ಅಂಶಗಳ ವಿಚಾರ ಮಾಡುವುದು ಆವಶ್ಯಕವಾಗಿದೆ.

೧. ಪ್ರತಿಯೊಬ್ಬ ಮನುಷ್ಯನ ಜೀವನವು ಅವನ ಪ್ರಾರಬ್ಧ ಮತ್ತು ಕ್ರಿಯಮಾಣ ಕರ್ಮಗಳ ಮೇಲೆ ಅವಲಂಬಿಸಿರುತ್ತದೆ. ಯಾರಿಗೂ ಪ್ರಾರಬ್ಧವನ್ನು ತಪ್ಪಿಸಲು ಆಗುವುದಿಲ್ಲ. ಅವನಿಗೆ ಅದನ್ನು ಭೋಗಿಸಲೇ ಬೇಕಾಗುತ್ತದೆ. ೨೦೧೯ ರಿಂದ ೨೦೨೩ ನೇ ಇಸವಿಯ ಅವಧಿಯಲ್ಲಿ ಮಾನವನ ಸಮಷ್ಟಿ ಪ್ರಾರಬ್ಧದಿಂದ ವ್ಯಕ್ತಿಯ ಜೀವನದ ಮೇಲೆ ಬಹಳಷ್ಟು ಪ್ರಮಾಣದಲ್ಲಿ ಪರಿಣಾಮವಾಗಲಿದೆ. ಈ ಕಾಲದಲ್ಲಿ ಸಮಷ್ಟಿ ಪ್ರಾರಬ್ಧವು ಬಹಳ ಕಷ್ಟಕರವಾಗಿದ್ದು ಅನೇಕ ಜನರಿಗೆ ಅದರ ತೊಂದರೆಯನ್ನು ಸಹಿಸಬೇಕಾಗುತ್ತದೆ.

೨. ತೀವ್ರ ಪ್ರಾರಬ್ಧವನ್ನು ಕೇವಲ ಸಾಧನೆಯಿಂದಲೇ ಎದುರಿಸಬಹುದು. ಈಗಿನ ಕಾಲದಲ್ಲಿ ಬಹಳಷ್ಟು ಜನರು ಸಾಧನೆ ಮಾಡುವುದಿಲ್ಲ. ಅದರಿಂದ ಜಗತ್ತಿನ ಜನಸಂಖ್ಯೆಯಲ್ಲಿ ಬಹಳಷ್ಟು ಜನರು ಮರಣ ಹೊಂದುವರು.

೩. ಸಾಧನೆಯನ್ನು ಮಾಡುವವರು ಈ ಆಪತ್ಕಾಲದಲ್ಲಿ ಬದುಕುಳಿಯುವರು. ಈ ಆಪತ್ಕಾಲದಲ್ಲಿ ಬದುಕುಳಿಯುವುದಕ್ಕಾಗಿ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವೂ ಅಷ್ಟೇ ಮಹತ್ವದ್ದಾಗಿದೆ.

೪. ಯಾರ ಆಧ್ಯಾತ್ಮಿಕ ಮಟ್ಟವು ಶೇ. ೫೦ ಕ್ಕಿಂತಲೂ ಹೆಚ್ಚಿರುವುದೋ, ಅವರು ದೇವರ ಕೃಪೆಯಿಂದ ಬದುಕುವರು. ಆದುದರಿಂದ ಯಾರಲ್ಲಿ ಸಾಧನೆಯನ್ನು ಮಾಡುವ ಕ್ಷಮತೆ ಇರುವುದೋ, ಅವರಿಗೆ ಸಾಧನೆಯನ್ನು ಕಲಿಸುವುದು ಮಹತ್ವದಾಗಿದೆ; ಇದರಿಂದ ಅವರು ಸಾಧನೆಯನ್ನು ಮಾಡಿ ಶೇ. ೫೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಬಹುದು.

೫. ಅಣುಯುದ್ಧದ ನಂತರ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟಕ್ಕನುಸಾರ ದೇವರು ಅವನ ಸುತ್ತಲಿನ ಪ್ರದೇಶವನ್ನು ಅಣ್ವಸ್ತ್ರದ ಘಾತಕ ಕಿರಣಗಳಿಂದ ರಕ್ಷಿಸುತ್ತಾನೆ. ಈ ಪ್ರದೇಶದ ಕೇವಲ ಸಾಧಕರು ಮಾತ್ರವಲ್ಲ; ಗಿಡಮರಗಳ, ಪ್ರಾಣಿಗಳ ಎಲ್ಲರ ರಕ್ಷಣೆಯಾಗುವುದು.’

– ಶ್ರೀ. ಶಾನ್ ಕ್ಲಾರ್ಕ (ಆಧ್ಯಾತ್ಮಿಕ ಮಟ್ಟ ಶೇ. ೬೪), ಸಂಪಾದಕರು, ಎಸ್.ಎಸ್.ಆರ್.ಎಫ್. ಮತ್ತು ಸಂಶೋಧನೆ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೭.೨೦೨೦)