ಬೆಂಗಳೂರಿನ ಆಚಾರ್ಯ ಶ್ರೀ ಮಹಾಪ್ರಜ್ಞಾ ಶಾಲೆಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಪ್ರವಚನ !

ಬೆಂಗಳೂರು : ‘ಜೀವನದಲ್ಲಿ ಸಂಸ್ಕಾರವು ತುಂಬ ಮಹತ್ವದ್ದಾಗಿದೆ. ರಾವಣನು ವಿಶ್ರವಾಋಷಿಗಳ ಪುತ್ರನಾಗಿದ್ದನು; ಆದರೆ ಹಿಂದೂ ಧರ್ಮವು ‘ಅವನ ಆದರ್ಶ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ. ಭಕ್ತ ಪ್ರಹ್ಲಾದನು ‘ಹಿರಣ್ಯಕಶ್ಯಪು ಎಂಬ ರಾಕ್ಷಸನ ಪುತ್ರನಾಗಿದ್ದರೂ ಧರ್ಮವು ಅವನ ಆದರ್ಶವನ್ನೇ ತೆಗೆದುಕೊಳ್ಳಲು ಹೇಳಿತು. ಆದ್ದರಿಂದ ಎಲ್ಲಿ ಜನಿಸಿದೆ ಎಂಬು ದಕ್ಕಿಂತಲೂ ಯಾವ ಸಂಸ್ಕಾರವಾಗಿದೆ ಎಂಬುದು ಮುಖ್ಯವಾಗಿದ್ದು, ನಾವೆಲ್ಲರೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ಜುಲೈ ೧೨ ರಂದು ಗುರುಪೂರ್ಣಿಮೆಯ ನಿಮಿತ್ತವಾಗಿ ಇಲ್ಲಿನ ನಂದಿನಿ ಲೇಔಟ್ ನಲ್ಲಿನ ಆಚಾರ್ಯ ಶ್ರೀ ಮಹಾಪ್ರಜ್ಞಾ ಶಾಲೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಗುರುಪೂರ್ಣಿಮೆಯ ಹಾಗೂ ಸುಂಸ್ಕಾರಗಳ ಮಹತ್ವ ತಿಳಿಸುವ ದೃಷ್ಟಿಯಿಂದ ಈ ಮಾರ್ಗದರ್ಶನ ಆಯೋಜಿಸಲಾಗಿತ್ತು. ಈ ವೇಳೆ ಶಾಲೆಯ ಸಂಸ್ಥಾಪಕರು ಮತ್ತು ಪ್ರಾಂಶುಪಾಲರಾದ ಶ್ರೀಮತಿ ಪಾರ್ವತಿ ವಿಶ್ವನಾಥ, ಮುಖ್ಯೋಪಾಧ್ಯಾಯಿನಿ ಸೌ. ಶೋಭಾ ಪ್ರವೀಣ ಮತ್ತು ಶಾಲೆಯ ಸುಮಾರು ೧೫೦ ಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀ. ರಾಧಾಕೃಷ್ಣ ಭಟ್ ಇವರು ವ್ಯಾಸಪೂಜೆಯನ್ನು ಮಾಡಿದರು. ಈ ವೇಳೆ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಪೂಜ್ಯ ರಮಾನಂದ ಗೌಡ ಇವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ವೈಶಿಷ್ಟ್ಯಪೂರ್ಣ ಅಂಶಗಳು :
೧. ಮುಂದಿನ ಶೈಕ್ಷಣಿಕ ವರ್ಷದಿಂದ ಅವರು ಸನಾತನದ ವಹಿಗಳನ್ನು ಶಾಲೆಯ ಮಕ್ಕಳಿಗಾಗಿ ಕೊಡುತ್ತೇವೆ ಎಂದು ಹೇಳಿದರು.
೨. ಶಾಲೆಯ ಪ್ರಾಂಶುಪಾಲರು ಸನಾತನದ ಗ್ರಂಥಗಳು ಉತ್ತಮ ಸಂಸ್ಕಾರವನ್ನು ನೀಡುವ ಗ್ರಂಥಗಳಾಗಿವೆ, ನಾನು ವೈಯಕ್ತಿಕವಾಗಿ ಪ್ರತಿ ವಿದ್ಯಾರ್ಥಿಯ ಮನೆಗೆ ಗ್ರಂಥಗಳ ಮಾಹಿತಿ ತಲುಪಿಸುತ್ತೇನೆ ಎಂದರು.
೩. ಶಾಲೆಯ ಶಿಕ್ಷಕರಿಗಾಗಿ ಇನ್ನು ಪ್ರತಿವಾರ ಧರ್ಮಶಿಕ್ಷಣ ವರ್ಗದ ಆಯೋಜನೆ ಮಾಡುತ್ತೇವೆ ಎಂದು ಶ್ರೀಮತಿ ಪಾರ್ವತಿ ಇವರು ತಿಳಿಸಿದರು.
೪. ಸಂಸ್ಥೆಯಿಂದ ನಡೆಸಲಾಗುವ ಆನ್‌ಲೈನ್ ಬಾಲಸಂಸ್ಕಾರವರ್ಗಕ್ಕೆ ಜೋಡಣೆ ಆಗುತ್ತೇವೆ ಎಂದು ಎಲ್ಲ ವಿದ್ಯಾರ್ಥಿಗಳು ತಿಳಿಸಿದರು.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !