ಧಾರವಾಡ ಕೇಂದ್ರ ಕಾರಾಗೃಹದ ಘಟನೆ
ವಾರ್ಡನ್ ಗಂಭೀರ ಗಾಯ
(ಜೈಲು ವಾರ್ಡನ್ ಎಂದರೆ ಜೈಲಿನ ಮುಖ್ಯ ವ್ಯವಸ್ಥಾಪಕರು, ಮೇಲ್ವಿಚಾರಣೆ ಮಾಡುವ ಅಧಿಕಾರಿ)

ಧಾರವಾಡ – ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣದ ಮುಸ್ಲಿಂ ಆರೋಪಿಗಳು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲಿನ ‘ವಾರ್ಡನ್’ ಮೇಲೆ ಭೀಕರ ದಾಳಿ ನಡೆಸಿದ್ದಾರೆ. ಇದರಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕೈದಿಗಳಿಗೆ ಜೈಲು ಆಡಳಿತ ಮಂಡಳಿಯು ತಕ್ಷಣವೇ ಶಿಕ್ಷೆ ವಿಧಿಸಿದೆ.
೧. ಫೆಬ್ರವರಿ ೨೦, ೨೦೨೨ ರಂದು ಶಿವಮೊಗ್ಗದಲ್ಲಿ ಬಜರಂಗದಳದ ೨೬ ವರ್ಷದ ಕಾರ್ಯಕರ್ತ ಹರ್ಷ ಅವರನ್ನು ಕೆಲವು ಮುಸ್ಲಿಂ ಮತಾಂಧರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಪ್ರಕರಣದ ಆರೋಪಿಗಳನ್ನು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
೨. ಜೂನ್ ೧೩ ರಂದು ಸಣ್ಣ ಕಾರಣಕ್ಕಾಗಿ ಈ ಆರೋಪಿಗಳು ಜೈಲಿನ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಇಬ್ಬರೂ ಆರೋಪಿಗಳು ಅಲ್ಲಿ ಕರ್ತವ್ಯದಲ್ಲಿದ್ದ ವಾರ್ಡನ್ ಕಿರಣ್ ಘೋರ್ಪಡೆ ಅವರ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಕಿರಣ ಅವರನ್ನು ತಕ್ಷಣವೇ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
೩. ಜೈಲಿನ ಒಳಗಡೆ ಸರಕಾರಿ ನೌಕರನ ಮೇಲೆ ನಡೆದಿರುವ ಈ ದಾಳಿಯನ್ನು ಜೈಲು ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಿದ್ದು, ಈ ಆರೋಪಿಗಳ ವಿರುದ್ಧ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
೪. ಮುಂದಿನ ಒಂದು ತಿಂಗಳವರೆಗೆ ಈ ಕೈದಿಗಳನ್ನು ಅವರ ಕುಟುಂಬದ ಯಾವುದೇ ಸದಸ್ಯರು ಅಥವಾ ಸಂಬಂಧಿಕರು ಭೇಟಿಯಾಗಲು ಸಾಧ್ಯವಿಲ್ಲ ಎಂಬ ಶಿಕ್ಷೆಯನ್ನು ಅವರಿಗೆ ವಿಧಿಸಲಾಗಿದೆ. (ಇಂತಹವರಿಗೆ ೧ ತಿಂಗಳಲ್ಲ, ಬದಲಿಗೆ ೧ ವರ್ಷದವರೆಗೆ ಅವರ ಕುಟುಂಬಸ್ಥರನ್ನು ಭೇಟಿಯಾಗದಂತೆ ಶಿಕ್ಷೆ ನೀಡಬೇಕು! – ಸಂಪಾದಕರು)
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”