ಭಯಾನಕ ‘ರಣತಾಂಡವ

ಕೊರೋನಾ ವಿಷಾಣು ಜಗತ್ತಿನ ಬಹುತೇಕ ದೇಶಗಳಲ್ಲಿ ಮತ್ತೊಮ್ಮೆ ರಣತಾಂಡವವಾಡುತ್ತಿದೆ. ಸದ್ಯ ಕೊರೋನಾದ ಎರಡನೇಯ ಅಲೆಯು ಭಾರತದಲ್ಲಿ ರಣತಾಂಡವವಾಡಲು ಪ್ರಾರಂಭಿಸಿದೆ. ಈ ಸಾಂಕ್ರಾಮಿಕ ಪಿಡುಗು ಭಾರತದ ಎಲ್ಲೆಡೆ ಹರಡುತ್ತಿರುವ ವೇಗವನ್ನು ನೋಡಿದರೆ, ಮುಂದಿನ ೨ ತಿಂಗಳಲ್ಲಿ ಭಾರತವು ಅಮೇರಿಕಾವನ್ನು ಹಿಂದಿಕ್ಕುವ ಸಾಧ್ಯತೆಯಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪಾಶ್ಚಾತ್ಯರಿಗೆ ಸಂಶೋಧನೆಗಾಗಿ ಯಂತ್ರವು ಬೇಕಾಗುತ್ತದೆ ಋಷಿಗಳಿಗೆ ಹಾಗೂ ಸಂತರಿಗೆ ಬೇಕಾಗುವುದಿಲ್ಲ. ಅವರಿಗೆ ಯಂತ್ರಕ್ಕಿಂತ ಅನಂತ ಪಟ್ಟು ಮಾಹಿತಿಯು ಸಿಗುತ್ತದೆ.

ಸಾಧಕರು, ವಾಚಕರು ಮತ್ತು ಹಿತಚಿಂತಕರಿಗೆ ಕರೆ !

‘ಭಾರತವು ವಿವಿಧತೆಯಿಂದ ಕೂಡಿದ ದೇಶವಾಗಿದೆ. ಈ ದೇಶದಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಲೆಗಳು, ಕಲಾಕೃತಿಗಳು ಮತ್ತು ಕಲವಿದರಿದ್ದಾರೆ. ಅವರ ವಿಷಯದಲ್ಲಿ ತಮಗೇನಾದರೂ ತಿಳಿದಿದ್ದರೆ, ಅದನ್ನು ನಮಗೆ ತಪ್ಪದೇ ತಿಳಿಸಿ.

ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಅವಳ ಮೇಲೆ ಮಾತೃತ್ವವನ್ನು ಹೇರಿದ ಪಾದ್ರಿಯ ಬಂಧನ !

ಪಟ್ಟಣದ ಸಮೀಪದಲ್ಲಿರುವ ‘ಲುಥರನ್ ಮಹಿಳಾ ಸಮಿತಿ’ ಈ ಮಕ್ಕಳ ಶ್ರುಶ್ರೂಷೆ ಗೃಹ ಮತ್ತು ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಮೇಲೆ ಮಾತೃತ್ವವನ್ನು ಹೇರಿದ ಪ್ರಕರಣದಲ್ಲಿ ಕುಂಜ್‌ಬಿಹಾರಿ ದಾಸ ಎಂಬ ೬೦ ವರ್ಷದ ಪಾದ್ರಿಯನ್ನು ಬಂಧಿಸಲಾಗಿದೆ.

ಪ.ಪೂ. ಆಸಾರಾಮಜಿ ಬಾಪೂ ಅವರಿಗೆ ಜಾಮೀನು ನೀಡುವಂತೆ ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ

ಪೂ. ಆಸಾರಾಮಜಿ ಬಾಪೂರವರಿಗೆ ಜೈಲಿನಲ್ಲಿ ಕೊರೋನಾ ಸೋಂಕು ತಗಲಿದ ಮೇಲೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೇ ಇದ್ದರಿಂದ ಅವರನ್ನು ಜೋಧಪುರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಇದರಿಂದ ರಾಜಸ್ಥಾನ ಸರಕಾರದ ದುರ್ಲಕ್ಷತನ ಕಂಡುಬರುತ್ತದೆ.

ಹಮೀರ್‌ಪುರದ (ಉತ್ತರ ಪ್ರದೇಶ) ಯಮುನಾ ನದಿಯಲ್ಲಿ ಅನೇಕ ಶವಗಳು ಪತ್ತೆ !

ಹಮೀರಪುರ ಜಿಲ್ಲೆಯ ಮೂಲಕ ಹರಿಯುವ ಯಮುನಾ ನದಿಯಲ್ಲಿ ಅನೇಕ ಶವಗಳು ಪತ್ತೆಯಾಗಿವೆ. ಇಲ್ಲಿನ ಕಾನಪುರ-ಸಾಗರ ರಸ್ತೆಯಲ್ಲಿರುವ ಸೇತುವೆಯ ಮೂಲಕ ಹಾದುಹೋಗುವ ಜನರು ನದಿಯಲ್ಲಿರುವ ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಪಾಲಿ (ರಾಜಸ್ಥಾನ)ಇಲ್ಲಿನ ಆಸ್ಪತ್ರೆಯಲ್ಲಿ ಯುವಕನಿಗೆ ತನ್ನ ಹಾಸಿಗೆಯನ್ನು ಬಿಟ್ಟುಕೊಟ್ಟ ಆಮ್ಲಜನಕದ ಮೇಲೆ ಅವಲಂಬಿಸಿದ್ದ ಕೊರೋನಾ ಪೀಡಿತ ವೃದ್ಧೆ !

ಪಾಲಿಯಲ್ಲಿನ ಲೆಹರ ಕಂವಾರ ಎಂಬ ೬೦ ವರ್ಷದ ಕೊರೋನಾ ಪೀಡಿತ ವೃದ್ಧೆಯೊಬ್ಬಳು ಓರ್ವ ಯುವಕನಿಗಾಗಿ ಬಾಂಗರ ಆಸ್ಪತ್ರೆಯಲ್ಲಿ ತನ್ನ ಹಾಸಿಗೆಯನ್ನು ಬಿಟ್ಟುಕೊಟ್ಟಿದ್ದಾಳೆ. ಲೆಹರ ಕಂವರ ಸ್ವತಃ ಆಮ್ಲಜನಕದಲ್ಲಿದ್ದರು; ಆದರೆ, ಯುವಕನಿಗೆ ತುಂಬಾ ತೊಂದರೆ ಆಗುತ್ತಿರುವುದನ್ನು ನೋಡಿದ ತಕ್ಷಣ, ಅವರು ಸ್ವತಃ ಕುರ್ಚಿಯ ಮೇಲೆ ಕುಳಿತುಕೊಂಡು ಆಮ್ಲಜನಕವನ್ನು ತೆಗೆದುಕೊಂಡರು.

ಭಾರತದಲ್ಲಿನ ಕೊರೊನಾ ಬಿಕ್ಕಟ್ಟು ದೂರವಾಗಲು ಇಸ್ರೇಲ್‌ನಲ್ಲಿ ಯಹೂದಿಗಳಿಂದ ಪ್ರಾರ್ಥನೆ ಮತ್ತು ‘ಓಂ ನಮಃ ಶಿವಾಯ’ದ ಜಪ !

ಭಾರತದ ಹೆಚ್ಚುತ್ತಿರುವ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ಮತ್ತು ವಿದೇಶಗಳಿಂದ ಸಹಾಯ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನಿಂದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಭಾರತದಲ್ಲಿನ ಬಿಕ್ಕಟ್ಟು ದೂರವಾಗಲು ನೂರಾರು ಸಂಖ್ಯೆಯ ಯಹೂದಿ ನಾಗರಿಕರು ಒಟ್ಟಾಗಿ ಸೇರಿ ‘ಓಂ ನಮಃ ಶಿವಾಯ’ ಜಪ ಮತ್ತು ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ.

ಅಸ್ಸಾಂನಲ್ಲಿ ಬಿಜೆಪಿಯಿಂದ ಅಲ್ಪಸಂಖ್ಯಾತ ಮೋರ್ಚಾದ ಎಲ್ಲಾ ಶಾಖೆಗಳನ್ನು ವಿಸರ್ಜಿಸಲಾಗಿದೆ !

ಇತ್ತೀಚೆಗೆ ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಿಕ್ಕಿದ್ದರೂ, ಮುಸಲ್ಮಾನ ಬಹುಸಂಖ್ಯಾತರಿರುವ ಎಂಟು ಮತದಾನ ಕ್ಷೇತ್ರಗಳಲ್ಲಿ ಯಾವುದೇ ಮತದಾನ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿಲ್ಲ. ಆದ್ದರಿಂದ ರಾಜ್ಯದ ಅಲ್ಪಸಂಖ್ಯಾತ ಮೋರ್ಚಾದ ಎಲ್ಲಾ ಶಾಖೆಗಳನ್ನು ವಿಸರ್ಜಿಸಲು ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಿರ್ಣಯ ತೆಗೆದುಕೊಂಡಿದೆ.

ಕೊರೊನಾವನ್ನು ನಿಯಂತ್ರಿಸಲು ಕರ್ನಾಟಕದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದುವಾರ ಧನ್ವಂತರಿ ಹೋಮ !

ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮತ್ತು ಜನರ ಕಲ್ಯಾಣಕ್ಕಾಗಿ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಯನ್ನು ಪ್ರಾರಂಭಿಸಲಾಗಿದೆ. ಮೇ ೫ ರಿಂದ ಮೇ ೧೧ ರವರೆಗೆ ಪೂಜೆ, ಹೋಮ-ಹವನ ನಡೆಯಲಿದೆ. ರೋಗ ನಿಯಂತ್ರಣಕ್ಕಾಗಿ ಧನ್ವಂತರಿ ಹೋಮ ಮತ್ತು ಕ್ರಿಮಿಹರ ಸೂಕ್ತವನ್ನು ಜಪ ಸಹಿತ ಹೋಮ-ಹವನ ನಡೆಸಲಾಗುತ್ತಿದೆ.