ಅಸ್ಸಾಂನಲ್ಲಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಲ್ಲಿ ಚುನಾವಣೆಯಲ್ಲಿ ಯಶಸ್ಸು ಸಿಗದೇ ಇದ್ದರಿಂದ ತೆಗೆದುಕೊಂಡ ನಿರ್ಧಾರ !
|
ನವ ದೆಹಲಿ – ಇತ್ತೀಚೆಗೆ ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಿಕ್ಕಿದ್ದರೂ, ಮುಸಲ್ಮಾನ ಬಹುಸಂಖ್ಯಾತರಿರುವ ಎಂಟು ಮತದಾನ ಕ್ಷೇತ್ರಗಳಲ್ಲಿ ಯಾವುದೇ ಮತದಾನ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆದ್ದರಿಂದ ರಾಜ್ಯದ ಅಲ್ಪಸಂಖ್ಯಾತ ಮೋರ್ಚಾದ ಎಲ್ಲಾ ಶಾಖೆಗಳನ್ನು ವಿಸರ್ಜಿಸಲು ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಿರ್ಣಯ ತೆಗೆದುಕೊಂಡಿದೆ.
Assam BJP disbands its minority cell after failing to make inroads in the Muslim-dominated areas in assembly electionshttps://t.co/1LFPLNVwcf
— OpIndia.com (@OpIndia_com) May 5, 2021
೧. ಅಸ್ಸಾಂನಲ್ಲಿ ಬಿಜೆಪಿ ಪ್ರದೇಶಾಧ್ಯಕ್ಷ ರಂಜಿತ ದಾಸ ಮಾತನಾಡಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ, ಜಿಲ್ಲೆ ಮತ್ತು ಮಂಡಳಿ ಮಟ್ಟದಲ್ಲಿಯ ಎಲ್ಲಾ ಶಾಖೆಗಳನ್ನು ತಕ್ಷಣ ವಿಸರ್ಜಿಸಲಾಗುತ್ತಿದೆ. ನಮ್ಮ ಪಕ್ಷದಲ್ಲಿ ಮಹಿಳೆಯರು, ಯುವಕರು ಮತ್ತು ವಿವಿಧ ಕಾರ್ಯಕಾರಣಿಗಳು ಇದ್ದಾರೆ. ಅದೇ ರೀತಿ ಅಲ್ಪಸಂಖ್ಯಾತ ಮೋರ್ಚಾವೂ ಇದೆ. ನಾವು ಕೆಲವು ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು; ಆದರೆ, ಈ ಕ್ಷೇತ್ರಗಳ ಅನೇಕ ಬೂತ್‌ಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ೨೦ ಮತ ಸಹ ಸಿಗಲಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಮುಖ್ಯಸ್ಥ ಮುಖ್ತಾರ ಹುಸೇನ್ ಖಾನ್ ಅವರು ಈ ನಿರ್ಧಾರದ ಹಿಂದಿನ ನಿಖರ ಕಾರಣ ತಿಳಿದಿಲ್ಲ ಎಂದು ಹೇಳಿದರು. ಪಕ್ಷಕ್ಕೆ ಅನೇಕ ಸ್ಥಳಗಳಲ್ಲಿ ನಿರೀಕ್ಷಿಸಿದಷ್ಟು ಮತಗಳನ್ನು ಪಡೆಯಲಿಲ್ಲ ಎಂದು ಅವರು ಹೇಳಿದರು.