ಕೊರೊನಾವನ್ನು ನಿಯಂತ್ರಿಸಲು ಕರ್ನಾಟಕದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದುವಾರ ಧನ್ವಂತರಿ ಹೋಮ !

ಮಂಗಳೂರು – ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮತ್ತು ಜನರ ಕಲ್ಯಾಣಕ್ಕಾಗಿ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಯನ್ನು ಪ್ರಾರಂಭಿಸಲಾಗಿದೆ. ಮೇ ೫ ರಿಂದ ಮೇ ೧೧ ರವರೆಗೆ ಪೂಜೆ, ಹೋಮ-ಹವನ ನಡೆಯಲಿದೆ. ರೋಗ ನಿಯಂತ್ರಣಕ್ಕಾಗಿ ಧನ್ವಂತರಿ ಹೋಮ ಮತ್ತು ಕ್ರಿಮಿಹರ ಸೂಕ್ತವನ್ನು ಜಪ ಸಹಿತ ಹೋಮ-ಹವನ ನಡೆಸಲಾಗುತ್ತಿದೆ.

ಧನ್ವಂತರಿ ಪೂಜೆ ಏಕೆ ?

ಧನ್ವಂತರಿ

ಧನ್ವಂತರಿ ಹೋಮಕ್ಕೆ ವೇದಗಳಲ್ಲಿ ವಿಶೇಷ ಮಹತ್ವವಿದ್ದು, ಇದರಿಂದ ರೋಗಗಳು ನಾಶವಾಗುತ್ತದೆ ಎಂಬ ಶ್ರದ್ಧೆ ಇದೆ. ವಿವಿಧ ದುಷ್ಕೃತ್ಯಗಳಿಂದ ಅನೇಕ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಯು ಧನ್ವಂತರಿ ದೇವತೆಯ ಕೃಪೆಯನ್ನು ಪಡೆದರೆ, ಅವನು ಆರೋಗ್ಯವಂತನಾಗಿ ಸಾಧನೆ ಮಾಡಬಹುದು. ಮುಂದೆ ಅವನು ಭವರೋಗಗಳಿಂದಲೂ ಮುಕ್ತನಾಗುವನು ಎಂದು ಶ್ರದ್ಧೆ ಇದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಅರ್ಚಕರು ವಿಶೇಷ ಪೂಜೆ ನಡೆಸಲಿದ್ದಾರೆ.