ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗೆ ಮಹತ್ವ ಸೂಚನೆ
ದೊಡ್ಡ ನಗರಗಳಲ್ಲಿ ಜನಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವ ರೋಗರುಜಿನೆಗಳು ಎಲ್ಲರ ಚಿಂತೆಯ ವಿಷಯವಾಗಿವೆ. ನಗರಗಳಲ್ಲಿರುವ ಅಪಾರ ಜನಜಂಗುಳಿ, ಸ್ವಚ್ಛತೆಯ ಅಭಾವ, ಹೆಚ್ಚುತ್ತಿರುವ ಮಾಲಿನ್ಯ, ರಜ-ತಮಗಳ ಅಧಿಕ ಪ್ರಾಬಲ್ಯ ಇತ್ಯಾದಿಗಳ ಕಾರಣಗಳಿಂದ ಅಲ್ಲಿಯ ನಾಗರಿಕರು ಭಯ ಮತ್ತು ಅಸುರಕ್ಷತೆಯ ನೆರಳಿನಲ್ಲಿ ಬದುಕುತ್ತಿರುವುದು ಕಂಡು ಬರುತ್ತದೆ.