ಹಮೀರ್‌ಪುರದ (ಉತ್ತರ ಪ್ರದೇಶ) ಯಮುನಾ ನದಿಯಲ್ಲಿ ಅನೇಕ ಶವಗಳು ಪತ್ತೆ !

ಕೊರೊನಾದಿಂದ ಮೃತಪಟ್ಟವರ ದೇಹಗಳನ್ನು ನದಿಗೆ ಎಸೆಯಲಾಗಿದೆ ಎಂಬ ಅನುಮಾನ

ಇದು ಆಡಳಿತವು ಜನರಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ದೇಹಗಳ ಬಗ್ಗೆ ಜಾಗೃತಿ ಮೂಡಿಸದ ಪರಿಣಾಮವಾಗಿದೆ ! ಇದರಿಂದ ನದಿಗಳು ಕಲುಷಿತಗೊಂಡು ಕೊರೋನಾ ಸೋಂಕಿನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಆದ್ದರಿಂದ ಇದನ್ನು ತಡೆಯಲು ಸರಕಾರವು ಈಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು !

ಹಮೀರಪುರ (ಉತ್ತರಪ್ರದೇಶ) – ಹಮೀರಪುರ ಜಿಲ್ಲೆಯ ಮೂಲಕ ಹರಿಯುವ ಯಮುನಾ ನದಿಯಲ್ಲಿ ಅನೇಕ ಶವಗಳು ಪತ್ತೆಯಾಗಿವೆ. ಇಲ್ಲಿನ ಕಾನಪುರ-ಸಾಗರ ರಸ್ತೆಯಲ್ಲಿರುವ ಸೇತುವೆಯ ಮೂಲಕ ಹಾದುಹೋಗುವ ಜನರು ನದಿಯಲ್ಲಿರುವ ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಇದರಲ್ಲಿ ಒಂದು ಶವವು ಅರ್ಧ ಸುಟ್ಟ ಸ್ಥಿತಿಯಲ್ಲಿತ್ತು. ಇವೆಲ್ಲ ಕೊರೊನಾದಿಂದ ಮೃತಪಟ್ಟವರ ಶವಗಳು ಎಂಬ ಸಂದೇಹವು ಪೊಲೀಸ್ ವಿಚಾರಣೆಯ ನಂತರ ವ್ಯಕ್ತವಾಗುತ್ತಿದೆ. ಈ ಶವಗಳನ್ನು ದಹನ ಮಾಡುವ ಬದಲು ನದಿಗೆ ಎಸೆಯಲಾಯಿತು ಎಂದು ಪೊಲೀಸರು ಹೇಳುತ್ತಾರೆ. ಮೃತದೇಹಗಳನ್ನು ಕಾನಪುರ ಮತ್ತು ಹಮೀರಪುರದಲ್ಲಿ ನದಿಗೆ ಎಸೆಯಲಾಗಿದೆ.

ಯಮುನಾ ನದಿಯನ್ನು ಕಾನಪುರ ಮತ್ತು ಹಮೀರಪುರ ಜಿಲ್ಲೆಗಳ ಜನರು ‘ಮೋಕ್ಷದಾಯಿನಿ ಕಾಳಿಂದಿ’ ಎಂದು ನಂಬುತ್ತಾರೆ. ಆದ್ದರಿಂದ ಇಲ್ಲಿ ಸತ್ತವರನ್ನು ಅಂತ್ಯಸಂಸ್ಕಾರ ಮಾಡುವ ಬದಲು ಶವಗಳನ್ನು ನದಿಯಲ್ಲಿ ಪ್ರವಹಿಸಲಾಗುತ್ತದೆ. ಇದು ಹಳೆಯ ಸಂಪ್ರದಾಯವಾಗಿದೆ. ಇಲ್ಲಿ ಯಾವಾಗಲೂ ನದಿಯಲ್ಲಿ ಶವಗಳು ಕಂಡು ಬರುತ್ತದೆ; ಆದರೆ ಕೊರೋನಾದ ಕಾಲಾವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಶವಗಳು ಕಂಡುಬಂದಿದ್ದರಿಂದ ಇವು ಕೊರೋನಾದಿಂದ ಸಾವನ್ನಪ್ಪಿದವರದ್ದು ಎಂದು ಹೇಳಲಾಗುತ್ತದೆ.