ಪಾದ್ರಿಯ ವಾಸನಾಂಧತೆ ತಿಳಿಯಿರಿ ! ಯಾವಾಗಲೂ ಹಿಂದೂ ಸಂತರ ವಿರುದ್ಧ ಸದಾ ಸುಳ್ಳು ಆರೋಪಗಳನ್ನು ಮಾಡುವ ಪ್ರಸಾರ ಮಾಧ್ಯಮಗಳು ಪಾದ್ರಿಗಳ ದುಷ್ಕೃತ್ಯಗಳ ಬಗ್ಗೆ ಮಾತನಾಡುವುದಿಲ್ಲ !
ಕೇಂದ್ರಪಾಡಾ (ಒಡಿಶಾ) – ಪಟ್ಟಣದ ಸಮೀಪದಲ್ಲಿರುವ ‘ಲುಥರನ್ ಮಹಿಳಾ ಸಮಿತಿ’ ಈ ಮಕ್ಕಳ ಶ್ರುಶ್ರೂಷೆ ಗೃಹ ಮತ್ತು ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಮೇಲೆ ಮಾತೃತ್ವವನ್ನು ಹೇರಿದ ಪ್ರಕರಣದಲ್ಲಿ ಕುಂಜ್‌ಬಿಹಾರಿ ದಾಸ ಎಂಬ ೬೦ ವರ್ಷದ ಪಾದ್ರಿಯನ್ನು ಬಂಧಿಸಲಾಗಿದೆ. ಪೀಡಿತ ಮಹಿಳೆ ನಿರ್ಗತಿಕಳಾಗಿದ್ದು ಮತ್ತು ಮಾನಸಿಕವಾಗಿ ದುರ್ಬಲವಾಗಿದ್ದಾರೆ. ಪ್ರೊಟೆಸ್ಟಂಟ್ ಕ್ರೈಸ್ತ ಸಂಘಟನೆಯ ಅಧ್ಯಕ್ಷೆ ಪ್ರಮೀಲಾ ತ್ರಿಪಾಠಿ ಅವರ ಸಹೋದರ ಜಗನ್ನಾಥ ತ್ರಿಪಾಠಿ ಕೂಡ ಅತ್ಯಾಚಾರ ಪ್ರಕರಣದಲ್ಲಿ ಸಹಭಾಗಿಯಾಗಿದ್ದು ಪರಾರಿಯಾಗಿದ್ದಾನೆ. (ಹಿಂದೂಗಳು ಮತಾಂತರಗೊಂಡ ನಂತರ ತಮ್ಮ ಹೆಸರನ್ನು ಬದಲಾಯಿಸುವುದಿಲ್ಲ. ಆದ್ದರಿಂದ ಅವರು ಯಾವುದೇ ದುಷ್ಕೃತ್ಯ ಮಾಡಿದರೂ ‘ಅದನ್ನು ಹಿಂದೂಗಳೇ ಮಾಡಿದ್ದಾರೆ ಎಂದು ಸಮಾಜಕ್ಕೆ ಅನಿಸುತ್ತದೆ ! ಇನ್ನುಮುಂದೆ ಮತಾಂತರಗೊಳ್ಳುವವರು ತಮ್ಮ ಹೆಸರು ಮತ್ತು ಉಪನಾಮಗಳನ್ನು ಬದಲಾಯಿಸಬೇಕು ಎಂದು ಕಾನೂನು ರೂಪಿಸುವುದು ಅವಶ್ಯಕ ! – ಸಂಪಾದಕರು)
ಒಡಿಶಾ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷೆ ಸಂಧ್ಯಾಬತಿ ಪ್ರಧಾನ ಅವರಲ್ಲಿ ದೂರು ಬಂದ ನಂತರ ಅವರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶ ನೀಡಿದರು. ತದನಂತರ ಪಾದ್ರಿಯನ್ನು ಬಂಧಿಸಲಾಯಿತು.
ಸಂತ್ರಸ್ತೆಯ ಪತಿಯು ೨೦೧೪ ರಲ್ಲಿ ಕೊಲೆಗೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಮಹಿಳೆಯು ೨೦೧೬ ಮತ್ತು ೨೦೧೮ ರಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಪ್ರೊಟೆಸ್ಟಂಟ್ ಕ್ರೈಸ್ತ ಸಂಘಟನೆಯ ಅಧ್ಯಕ್ಷೆ ಪ್ರಮಿಲಾ ತ್ರಿಪಾಠಿ ಅವರು ಸಂಬಂಧಪಟ್ಟ ಮಹಿಳೆಯ ಅನುಮತಿಯನ್ನು ಪಡೆಯದೇ ಮಕ್ಕಳನ್ನು ದತ್ತು ನೀಡುವ ಹೆಸರಿನಲ್ಲಿ ಮಾರಾಟ ಮಾಡಿದ್ದರು. (ಮಾನವೀಯತೆಯ ಹೆಸರಿನಲ್ಲಿ ಕ್ರೈಸ್ತರು ನಡೆಸುವ ಸಂಸ್ಥೆಗಳಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು ಕಂಡುಬರುತ್ತವೆ ! ಇಂತಹ ಸಂಸ್ಥೆಗಳನ್ನು ನಿಷೇಧಿಸಬೇಕು ! – ಸಂಪಾದಕರು) ‘ಲುಥರನ್ ಮಹಿಳಾ ಸಮಿತಿ’ ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಯೋಗದಿಂದ ಹಣ ಸಿಗುತ್ತದೆ ಈ ಸಮಿತಿಯು ‘ಫಾರೆನ್ ಕಾಂಟ್ರಿಬ್ಯೂಶನ ರೆಗ್ಯುಲೇಶನ್ ಆಕ್ಟ್’ನ (ಎಫ್. ಸಿ. ಆರ್.ಎ.ಯ) ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ, ಇದಕ್ಕೆ ಅಮೇರಿಕಾ ಮತ್ತು ಇಟಲಿಯಿಂದಲೂ ಹಣ ಸಿಗುತ್ತದೆ.
ಲುಥರನ್ ಮಹಿಳಾ ಸಮಿತಿಯಲ್ಲಿ, ಮಾನಸಿಕವಾಗಿ ದುರ್ಬಲವಾಗಿರುವ ಮಹಿಳೆಯರನ್ನು ಅಪಹರಿಸಿ ‘ಸರೊಗಸಿ ಮದರ’ (ಮಕ್ಕಳನ್ನು ಜನ್ಮ ನೀಡಲು ಮಹಿಳೆಯರ ಗರ್ಭಾಶಯವನ್ನು ಬಾಡಿಗೆಗೆ ತೆಗೆದುಕೊಳ್ಳುವುದು) ಎಂದು ಬಳಸಲಾಗುತ್ತಿದೆಯೇ ಮತ್ತು ಅದೇ ರೀತಿ ಅವರು ಹೆತ್ತ ಮಕ್ಕಳನ್ನು ವಿದೇಶಗಳಿಗೆ ಮಾರಾಟ ಮಾಡಿ ಅದಕ್ಕೆ ಬದಲಾಗಿ ವಿದೇಶದಿಂದ ಹಣವನ್ನು ಪಡೆಯಲಾಗುತ್ತಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಲಾಗುತ್ತಿದೆ.