ಭಾರತದಲ್ಲಿ ಇನ್ನೂ ಮಾನವಿಯತೆ ಬಾಕಿ ಉಳಿದಿದೆ, ಎಂಬುದಕ್ಕೆ ಇದೊಂದು ಉದಾಹರಣೆ ! ಇಂತಹ ವೃತ್ತಿಯ ಜನರು ದೇಶದಲ್ಲಿ ವಿರಳವಾಗಿದ್ದಾರೆ ಎಂಬುದು ಅಷ್ಟೇ ಸತ್ಯ !
ಜೈಪುರ (ರಾಜಸ್ಥಾನ) – ಪಾಲಿಯಲ್ಲಿನ ಲೆಹರ ಕಂವಾರ ಎಂಬ ೬೦ ವರ್ಷದ ಕೊರೋನಾ ಪೀಡಿತ ವೃದ್ಧೆಯೊಬ್ಬಳು ಓರ್ವ ಯುವಕನಿಗಾಗಿ ಬಾಂಗರ ಆಸ್ಪತ್ರೆಯಲ್ಲಿ ತನ್ನ ಹಾಸಿಗೆಯನ್ನು ಬಿಟ್ಟುಕೊಟ್ಟಿದ್ದಾಳೆ. ಲೆಹರ ಕಂವರ ಸ್ವತಃ ಆಮ್ಲಜನಕದಲ್ಲಿದ್ದರು; ಆದರೆ, ಯುವಕನಿಗೆ ತುಂಬಾ ತೊಂದರೆ ಆಗುತ್ತಿರುವುದನ್ನು ನೋಡಿದ ತಕ್ಷಣ, ಅವರು ಸ್ವತಃ ಕುರ್ಚಿಯ ಮೇಲೆ ಕುಳಿತುಕೊಂಡು ಆಮ್ಲಜನಕವನ್ನು ತೆಗೆದುಕೊಂಡರು.
೧. ಲೆಹರ ಕಂವಾರ ಅವರಿಗೆ ೪ ಗಂಟೆಗಳ ಕಾಲ ಕಾದ ನಂತರ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಾಗಿತ್ತು. ಅದೇ ಸಮಯದಲ್ಲಿ, ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ ಯುವಕನ ಕಡೆಗೆ ಆಕೆಯ ಗಮನ ಹೋಯಿತು. ಬಾಬುರಾಮ ಎಂಬ ಹೆಸರಿನ ಈ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿ ಅವರ ಸ್ಥಿತಿಯು ಗಂಭೀರವಾಗಿತ್ತು. ಲೆಹರ ಕಂವಾರ ಅವರಿಗೆ ಈ ಮಾಹಿತಿ ಸಿಕ್ಕಿದಾಗ, ಅವರು ತಮ್ಮ ಹಾಸಿಗೆಯನ್ನು ಬಾಬುರಾಮಗೆ ನೀಡುವಂತೆ ಹೇಳಿದರು.
೨. ‘ನಾನು ನನ್ನ ಪಾಲಿನ ಜೀವನವನ್ನು ಜೀವಿಸಿದ್ದೇವೆ’, ನನ್ನ ಮಕ್ಕಳಿಗೆಲ್ಲ ಮದುವೆಯೂ ಅಗಿದೆ; ಆದರೆ ಈ ವ್ಯಕ್ತಿಗೆ ಸಣ್ಣ ಮಕ್ಕಳಿದ್ದಾರೆ. ಆದ್ದರಿಂದ ಅವರಿಗೆ ಚಿಕಿತ್ಸೆ ನೀಡಿ. ನಾನು ಸ್ವಲ್ಪ ಸಮಯದವರೆಗೆ ಗಾಲಿಕುರ್ಚಿಯಲ್ಲಿ ಕಾಯುತ್ತೇನೆ.’ ಎಂದು ಲೆಹರ ಹೇಳಿದರು.