ಉಕ್ರೇನ್‌ನಿಂದ ೧೭ ಸಾವಿರ ಭಾರತೀಯರ ನಿರ್ಗಮನ !

ಉಕ್ರೇನ್‌ನಲ್ಲಿ ಸಿಲುಕಿರುವ ಒಟ್ಟು ಭಾರತೀಯರ ಪೈಕಿ ೧೭ ಸಾವಿರ ಭಾರತೀಯರು ಉಕ್ರೇನ್ ನಿಂದ ಹೊರಬಂದಿದ್ದಾರೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ಭಾರತೀಯ ವಾಯು ಸೇನೆಯ ೪ ವಿಮಾನಗಳು ಸುಮಾರು ೪೦೦ ಭಾರತೀಯ ನಾಗರಿಕರನ್ನು ತೆಗೆದುಕೊಂಡು ಉಕ್ರೇನ್‌ನಿಂದ ಹಾರಾಟ ಮಾಡಿವೆ.

ರಷ್ಯಾದ ಸೈನಿಕರು ಖಾರಕಿವದಲ್ಲಿನ ಸೇನಾ ಆಸ್ಪತ್ರೆಯ ಮೇಲೆ ದಾಳಿ

ಯುಕ್ರೇನ್‌ನ ಖಾರಕಿವ್ ಮತ್ತು ಖೆರಸನ ದಲ್ಲಿ ತಡರಾತ್ರಿ ಭಯಂಕರ ಯುದ್ಧ ನಡೆಯುತ್ತಿತ್ತು. ರಷ್ಯಾದ ಸೈನಿಕರು ಖಾರಕೀವನಲ್ಲಿ ಸೇನಾ ಆಸ್ಪತ್ರೆಯ ಮೇಲೆ ‘ಪ್ಯಾರಾಟುಪರ್‌ಸ’ ಇಳಿಸಿದರು ಮತ್ತು ತೀವ್ರ ದಾಳಿ ನಡೆಸಿದರು.

ಯುಕ್ರೇನ್ ಮೇಲಿನ ದಾಳಿ ನಿಲ್ಲಿಸಿ ! – ಯುಕ್ರೇನಿನ ರಾಷ್ಟ್ರಾಧ್ಯಕ್ಷ ವ್ಲೋದಿಮೀರ್ ಝೆಲೆಕ್ಸಿ ಇವರು ರಷ್ಯಾಗೆ ವಿನಂತಿ

ರಷ್ಯಾ ಮತ್ತು ಯುಕ್ರೇನ್ ಇವರಲ್ಲಿ ಯುದ್ಧವಿರಾಮದ ಅರ್ಥಪೂರ್ಣ ಚರ್ಚೆ ನಡೆಯುವ ಮೊದಲೇ ರಷ್ಯಾ ಯುಕ್ರೇನ್ ಮೇಲಿನ ದಾಳಿ ನಿಲ್ಲಿಸಬೇಕು, ಹೀಗೆ ಯುಕ್ರೇನ್‍ನ ರಾಷ್ಟ್ರಾಧ್ಯಕ್ಷ ವ್ಲೋದಿಮೀರ ಝೆಲೆಕ್ಸಿ ಇವರು ರಷ್ಯಾಗೆ ವಿನಂತಿಸಿಕೊಂಡಿದ್ದಾರೆ.

ರಶಿಯಾದಿಂದ ಉಕ್ರೇನ ಸೈನ್ಯ ನೆಲೆಯ ಮೇಲೆ ನಡೆದ ಆಕ್ರಮಣದಲ್ಲಿ 70 ಸೈನಿಕರು ಸಾವು

ಉಕ್ರೇನ ಮತ್ತು ರಶಿಯಾ ನಡುವಿನ ಯುದ್ಧ 6ನೇ ದಿನಕ್ಕೆ ಅತ್ಯಂತ ಭೀಕರ ರೂಪವನ್ನು ಪಡೆದುಕೊಂಡಿದೆ. ರಶಿಯಾ ಉಕ್ರೇನನ ಒಖ್ತಿಯಾರ್ಕ ನಗರದ ಸೈನ್ಯನೆಲೆಯ ಮೇಲೆ ಬೃಹತ್ ಆಕ್ರಮಣ ನಡೆಸಿದೆ. ಇದರಲ್ಲಿ ಉಕ್ರೇನಿನ 70ಕ್ಕಿಂತ ಅಧಿಕ ಸೈನಿಕರು ಮರಣ ಹೊಂದಿದ್ದಾರೆ.

ಪುತಿನ್ ಅವರ ಕುಟುಂಬವು ಸೈಬೇರಿಯಾದ ಶಿಬಿರದಲ್ಲಿ ಅಡಗಿದ್ದಾರೆ !

ರಷ್ಯಾದಲ್ಲಿಯ `ಮಾಸ್ಕೋ ಸ್ಟೇಟ್ ಇನಸ್ಟಿಟ್ಯುಟ್ ಆಫ್ ಇಂಟರನ್ಯಾಷನಲ್ ರಿಲೇಶನ್’ ನ ಪ್ರಾಧ್ಯಾಪಕ ವಾಲೆರಿ ಸೊಲೊವಿ ಇವರ ಹೇಳಿಕೆಯ ಪ್ರಕಾರ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ತಮ್ಮ ಕುಟುಂಬವನ್ನು ಸೈಬೇರಿಯಾದಲ್ಲಿಯ ಅಲ್ತಾಯಿ ಪರ್ವತದಲ್ಲಿರುವ ಶಿಬಿರದಲ್ಲಿ ಅಡಗಿಸಿಟ್ಟಿದ್ದಾರೆ.

ಎರಡನೆಯ ಸುತ್ತಿನ ಚರ್ಚೆಗೆ ಯುಕ್ರೇನ್ ಗೈರು !

ರಷ್ಯಾ ಮತ್ತು ಯುಕ್ರೇನ್ ಇವರಲ್ಲಿನ ಚರ್ಚೆಯ ಮೊದಲ ಸುತ್ತು ವಿಫಲವಾದ ನಂತರ ಮಾರ್ಚ್ 2 ರಂದು 2 ನೇ ಸುತ್ತಿನ ಮಾತುಕತೆ ನಡೆಯುವುದಿತ್ತು. ಈ ಚರ್ಚೆ ಮೊದಲೇ ಯುಕ್ರೇನ್‍ನ ರಾಷ್ಟ್ರಾಧ್ಯಕ್ಷ ಝೆಲೇಕ್ಸಿ ಇವರು ರಷ್ಯಾಗೆ ಯುದ್ಧ ವಿರಾಮ ಘೋಷಿಸಲು ಒತ್ತಾಯಿಸಿದ್ದರು.

ಭಾರತೀಯ ವಿದ್ಯಾರ್ಥಿಗಳನ್ನು ರಷ್ಯಾದ ಮೂಲಕ ಹೊರತರಲು ಸಹಾಯ ಮಾಡುವೆವು ! – ಭಾರತದಲ್ಲಿನ ರಷ್ಯಾದ ರಾಜದೂತರ ಆಶ್ವಾಸನೆ

ಭಾರತದಲ್ಲಿನ ರಷ್ಯಾದ ರಾಜದೂತರಾದ ಡೆನಿಸ ಅಲೀಪೊಹ್ವರವರು ‘ಯುಕ್ರೇನಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಹಿಂದೆ ಕರೆತರಲು ಭಾರತೀಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ರಷ್ಯಾದ ಕ್ಷೇತ್ರದಿಂದ ಈ ವಿದ್ಯಾರ್ಥಿಗಳನ್ನು ಹೊರತರುವ ಬಗ್ಗೆ ವಿಚಾರ ಮಾಡಲಾಗುತ್ತಿದೆ’ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.

ಏಟಿಎಮ್‌ನ ಹೊರಗೆ ಹಣ ಪಡೆಯಲು ರಷ್ಯಾದ ನಾಗರೀಕರ ಸಾಲು !

ರಷ್ಯಾವು ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ೭ ದಿನಗಳಾಗುತ್ತಿದ್ದರೂ ರಷ್ಯಾಗೆ ಇನ್ನೂ ವಿಜಯ ಸಾಧಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ಕಡೆಯಲ್ಲಿ ಜಗತ್ತಿನಾದ್ಯಂತ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಲಾಗುತ್ತಿದೆ. ರಷ್ಯಾದ ಬ್ಯಾಂಕಗಳಲ್ಲಿರುವ ಖಾತೆಗಳನ್ನು ಹೆಪ್ಪುಗಟ್ಟಿಸಲಾಗಿದೆ.

ತಕ್ಷಣವೇ ಕೀವ್ ಅನ್ನು ತೊರೆಯಿರಿ ! – ರಾಯಭಾರ ಕಚೇರಿಯಿಂದ ಭಾರತಿಯರಿಗೆ ಸೂಚನೆ

ಮಾರ್ಚ್ ೧ ರಂದು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿರುವ ವಾಹನಗಳು ಅಥವಾ ಲಭ್ಯವಿರುವ ಯಾವುದೇ ವಿಧಾನಗಳ ಮೂಲಕ ತಕ್ಷಣವೇ ಕೀವ್ ನಿಂದ ಹೊರಡುವಂತೆ ಸೂಚಿಸಿದೆ. ರಷ್ಯಾದ ಸೇನೆಯು ಕೀವ್ ಕಡೆಗೆ ವೇಗವಾಗಿ ಮುನ್ನಡೆಯುತ್ತಿರುವುದರಿಂದ ಈ ಸಲಹೆಯನ್ನು ನೀಡಲಾಗಿದೆ.

ಅಮೇರಿಕದಿಂದ ರಶಿಯಾದ ರಾಷ್ಟ್ರಾಧ್ಯಕ್ಷ ಪುತಿನರ ಮೇಲೆ ವೈಯಕ್ತಿಕ ನಿರ್ಬಂಧ

ರಶಿಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ವಿದೇಶಮಂತ್ರಿ ಸೆರಗೆ ಲಾವಹರೋವಹ ಇವರನ್ನು ರಶಿಯಾದ ಯುಕ್ರೆನ್ ಮೇಲಿನ ಆಕ್ರಮಣಕ್ಕಾಗಿ ನೇರ ಜವಾಬ್ದಾರಿಯನ್ನು ಮಾಡಿ ಅಮೇರಿಕವು ಅವರ ಮೇಲೆ ವೈಯಕ್ತಿಕ ನಿರ್ಬಂಧವನ್ನು ಹಾಕಿದೆ.