ಬರ್ಲಿನ್ (ಜರ್ಮನಿ) – ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಒಂದು ಪ್ರಸ್ತಾಪವನ್ನು ಅಂಗಿಕರಿಸಿ ರಷ್ಯಾದ ಸೈನ್ಯಕ್ಕೆ ಉಕ್ರೇನ್‌ನಿಂದ ಹೊರ ಬರಲು ಹೇಳಿದೆ. ಇನ್ನೊಂದೆಡೆಗೆ ಜರ್ಮನಿಯು ಉಕ್ರೇನ್‌ಗೆ ೨ ಸಾವಿರ ೭೦೦ ಕ್ಷಿಪಣಿಗಳನ್ನು ನೀಡುವದನ್ನು ಘೋಷಿಸಿದೆ.
೧. ಉಕ್ರೇನ್‌ನಲ್ಲಿ ಯುದ್ಧದ ೮ ನೇ ದಿನ ರಷ್ಯಾದ ದಾಳಿಯಲ್ಲಿ ಖಾರಕಿವನಲ್ಲಿ ೮ ಮಕ್ಕಳು ಸಾವನ್ನಪ್ಪಿರುವ ಮಾಹಿತಿ ನೀಡಲಾಗಿದೆ.
೨. ರಷ್ಯಾದ ನೌಕಾದಳ ಉಕ್ರೇನಿನ ಸಮುದ್ರದಲ್ಲಿರುವ ಬಾಂಗ್ಲಾದೇಶದ ನೌಕೆಗಳ ಮೇಲೆ ಕ್ಷಿಪಣಿಯ ಮೂಲಕ ದಾಳಿ ನಡೆಸಿದೆ. ಇದರಲ್ಲಿ ಓರ್ವ ವ್ಯಕ್ತಿಯು ಸಾವನ್ನಪ್ಪಿದನು.
೩. ವಿಶ್ವ ಸಂಸ್ಥೆಯ ಮಹಾಸಭೆಯ ಮಾಹಿತಿಯ ಪ್ರಕಾರ ಮಾರ್ಚ್ ೧ ವರೆಗೂ ಉಕ್ರೇನ್‌ನಲ್ಲಿ ರಷ್ಯಾದ ದಾಳಿಯಿಂದ ಇಲ್ಲಿಯವರೆಗೆ ೮೫೨ ಜನರು ಸಾವನ್ನಪ್ಪಿದ್ದಾರೆ.
೪. ರಷ್ಯಾದ ವಾಯು ದಾಳಿ ನಡೆಸುವ ಸಾಧ್ಯತೆಯಿಂದ ಉಕ್ರೇನ್‌ನಿನ ೧೫ ನಗರಗಳಿಗೆ ಜಾಗರೂಕತೆಯಿಂದ ಇರುವಂತೆ ಎಚ್ಚರಿಕೆ ನೀಡಲಾಗಿದೆ.
೫. ಯುದ್ಧದಿಂದ ಉಕ್ರೇನ್‌ನಿಂದ ಈವರೆಗೆ ೧೦ ಲಕ್ಷ ಜನರು ದೇಶದಿಂದ ಹೊರಬಂದು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದರಲ್ಲಿ ವಿದೇಶಿ ನಾಗರಿಕರ ಸಮಾವೇಶವು ಇದೆ.
೬. ಉಕ್ರೇನ್‌ನಲ್ಲಿ ಸಿಲುಕಿರುವ ೩ ಸಾವಿರ ೭೨೬ ಭಾರತೀಯ ವಿದ್ಯಾರ್ಥಿಗಳನ್ನು ಈವರೆಗೆ ಭಾರತದಲ್ಲಿ ಸುರಕ್ಷಿತವಾಗಿ ಕರೆತರಲಾಗಿದೆ, ಎಂದು ಕೇಂದ್ರೀಯ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಇವರು ಮಾಹಿತಿ ನೀಡಿದರು.