ಕೆನಡಾದಲ್ಲಿ ‘ಸ್ವಸ್ತಿಕ’ ಮೇಲಲ್ಲ, ‘ನಾಝಿ ಹುಕ್ಡ ಕ್ರಾಸ್’ ಮೇಲೆ ನಿರ್ಬಂಧ ಹೇರಲಿದೆ !

ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ

ಓಟಾವಾ(ಕೆನಡಾ) – ಕೆನಡಾದಲ್ಲಿ ಸ್ವಸ್ತಿಕ ನಿಷೇಧಿಸಲು ಮನವಿ ಸಲ್ಲಿಸುವ ಖಾಸಗಿ ಮಸೂದೆಯಲ್ಲಿ ಈಗ ಬದಲಾವಣೆಯನ್ನು ಮಾಡಲಾಗಿದೆ. ಈ ಮಸೂದೆಯಲ್ಲಿ ‘ಸ್ವಸ್ತಿಕ’ ಬದಲಾಗಿ ‘ನಾಝಿ ಹುಕ್ಡ ಕ್ರಾಸ್’ ಈ ಶಬ್ದವನ್ನು ಉಪಯೋಗಿಸಲಾಗುವುದು. ಕೆನಡಾದ ಸಂಸತ್ತು ಈ ಬದಲಾವಣೆಗೆ ಸಮ್ಮತಿಸಿದೆ. ಕೆನಡಾದ ನ್ಯೂ ಡೆಮೊಕ್ರೆಟಿಕ್ ಪಾರ್ಟಿಯ ಶಾಸಕರ ಪೀಟರ ಜುಲಿಯನ್ ಈ ವಿಷಯದ ಮಾಹಿತಿಯನ್ನು ನೀಡಿದ್ದಾರೆ. ಕೆನಡಾ ಮತ್ತು ಜಗತ್ತಿನಾದ್ಯಂತ ಹಿಂದೂಗಳ ವಿರೋಧದ ಬಳಿಕ ಈ ಬದಲಾವಣೆಯನ್ನು ಮಾಡಲಾಗಿದೆ. ಹಿಂದೂ ಫೆಡರೇಶನ ಹೆಸರಿನ ಸಂಘಟನೆಯು ಕೆನಡಾದಲ್ಲಿ ಆಂದೋಲನವನ್ನು ಕೂಡ ಮಾಡಿತ್ತು.

೧. ಈ ಮಸೂದೆ ಸಂಸತ್ತಿನಲ್ಲಿ ಅಂಗೀಕರಿಸಿದ ಬಳಿಕ ಕೆನಡಾದಲ್ಲಿ ‘ನಾಝಿ ಹುಕ್ಡ ಕ್ರಾಸ್’ನ ಮಾರಾಟ ಮತ್ತು ಪ್ರದರ್ಶನಗಳನ್ನು ಮಾಡುವುದನ್ನು ನಿರ್ಬಂಧಿಸಲಾಗುವುದು. ಕೆಲವು ವಾರಗಳ ಹಿಂದೆ ಕೆನಡಾದ ರಾಜಧಾನಿ ಓಟಾವಾ ಇಲ್ಲಿ ಟ್ರಕ್ ಚಾಲಕರು ನಡೆಸಿದ ಆಂದೋಲನದಲ್ಲಿ ನಾಝಿ ಕ್ರಾಸ್ ಉಪಯೋಗಿಸಲಾಗಿತ್ತು. ತದನಂತರ ಈ ಮಸೂದೆಯನ್ನು ಮಂಡಿಸಲಾಗಿತ್ತು.

೨. ಶಾಸಕ ಪೀಟರ ಜುಲಿಯನ್ ಮಾತನಾಡುತ್ತಾ, “ನನಗೆ ತಿಳಿದಿದೆ, ಸ್ವಸ್ತಿಕ ಹಿಂದೂ, ಬೌದ್ಧ ಮತ್ತು ಧರ್ಮಗಳಲ್ಲಿ ಮಹತ್ವದ ಸ್ಥಾನವಿದೆ. ನಾವೂ ಈ ಮಸೂದೆಯಲ್ಲಿ ಸ್ವಸ್ತಿಕ ಚಿಹ್ನೆಯ ಧಾರ್ಮಿಕ, ಶೈಕ್ಷಣಿಕ ಮತ್ತು ಐತಿಹಾಸಿಕ ಉಪಯೋಗವನ್ನು ನಿಷೇಧಿಸುವಂತೆ ಬೇಡಿಕೆ ಸಲ್ಲಿಸುವುದಿಲ್ಲ” ಎಂದು ಹೇಳಿದರು.

೩. ಲಿಬರಲ್ ಪಾರ್ಟಿಯ ಶಾಸಕ ಚಂದ್ರ ಆರ್ಯ ಇವರು ಸಂಸತ್ತಿನಲ್ಲಿ ಮಾತನಾಡುತ್ತಾ, ಸ್ವಸ್ತಿಕ ಮೇಲೆ ನಿಷೇಧ ಹೇರುವ ಈ ಮಸೂದೆಯ ವಿಷಯದಲ್ಲಿ ಹಿಂದೂಗಳಲ್ಲಿ ಆಕ್ರೋಷವಿದೆ. ಹಿಂದೂಗಳ ಸ್ವಸ್ತಿಕದ ಅರ್ಥ ಪವಿತ್ರ ಚಿಹ್ನೆಯಾಗಿದೆ. ಅದು ಮತ್ತು ಜರ್ಮನ ಹುಕ್ಡ ಕ್ರಾಸ ಇದು ಪ್ರತ್ಯೇಕವಾಗಿದೆ. ಅದನ್ನು ಸ್ವಸ್ತಿಕ ಚಿಹ್ನೆ ಎನ್ನುವುದು ತಪ್ಪಾಗಿದೆ ಎಂದು ಹೇಳಿದರು.