ಯುದ್ಧಕ್ಕೆ ರಷ್ಯಾವು ಹೊಣೆಗಾರವನ್ನಾಗಿಸಬೇಕು ! – ಜೀ ಸೆವೆನ್ ರಾಷ್ಟ್ರಗಳು

ಅಮೇರಿಕಾ, ಬ್ರಿಟನ್, ಪ್ರಾನ್ಸ, ಜರ್ಮನಿ, ಇಟಲಿ, ಜಪಾನ್ ಹಾಗೂ ಕೆನಡಾ ಈ ೭ ರಾಷ್ಟ್ರಗಳ ಗುಂಪಿರುವ ಜೀ ಸೆವೆನ್ ಸಂಘಟನೆಗಳ ವಿದೇಶಾಂಗ ಮಂತ್ರಿಗಳು ರಷ್ಯಾ ಹಾಗೂ ಉಕ್ರೇನ್‌ನ ಯುದ್ಧದ ಬಗ್ಗೆ, ಉಕ್ರೇನ್ನಲ್ಲಿ ಸಾಮಾನ್ಯ ನಾಗರಿಕರ ಮೇಲೆ ಸೈನಿಕರ ಆಕ್ರಮಣಕ್ಕೆ ಯಾರು ಕಾರಣಕರ್ತರಾಗಿದ್ದಾರೆ, ಅವರನ್ನು ಹೊಣೆಗಾರರೆಂದು ನಿರ್ಧರಿಸಬೇಕು.

ಪುಟಿನರನ್ನು ತಡೆಯದಿದ್ದರೆ ಯುರೋಪ ನಾಶವಾಗುವುದು ! – ಉಕ್ರೇನಿನ ರಾಷ್ಟ್ರಾಧ್ಯಕ್ಷ ಝೆಲೆಂಸ್ಕೀ

ಉಕ್ರೇನ ಮತ್ತು ರಷ್ಯಾದ ನಡುವಿನ ಯುದ್ಧದ ೧೦ನೇ ದಿನದಂದು ರಷ್ಯಾವು ಉಕ್ರೇನಿನ ರಾಷ್ಟ್ರಪತಿ ಭವನವನ್ನು ಗುರಿಯಾಗಿಸಿ ಕ್ಷಿಪಣಿಯನ್ನು ಹಾಕಿದೆ. ಆದರೆ ಅದು ಭವನದ ಸ್ವಲ್ಪ ಅಂತರದಲ್ಲಿ ಬಿದ್ದಿದೆ. ಇದರಿಂದ ಉಕ್ರೇನ ‘ರಷ್ಯಾದ ಗುರಿ ಇನ್ನೊಮ್ಮೆ ತಪ್ಪಿತು’ ಎಂದು ಹೇಳಿದೆ.

ನಾನು ಕೀವನಲ್ಲಿಯೇ ಇದ್ದು ಎಲ್ಲಿಯು ಅಡಗಿಲ್ಲ ! ವ್ಲೋದಿಮಿರ ಝೆಲೆಂಸ್ಕೀ, ರಾಷ್ಟ್ರಾಧ್ಯಕ್ಷ, ಉಕ್ರೇನ್

ರಷ್ಯಾ- ಉಕ್ರೇನ್ ಯುದ್ಧದ ಸಮಯದಲ್ಲಿ ಪೋಲ್ಯಾಂಡ್‌ಗೆ ಓಡಿಹೋಗಿರುವ ವದಂತಿಗೆ ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೋದಿಮಿರ ಝೆಲೆಂಸ್ಕೀಯವರು ಇನ್ನೊಮ್ಮೆ ಜಗತ್ತಿನೆದುರು ಬಂದಿದ್ದಾರೆ. ರಾಷ್ಟ್ರಾಧ್ಯಕ್ಷರು ಅವರ ಇನ್ಸಟಾಗ್ರಾಂನಲ್ಲಿ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ.

ಉಕ್ರೇನ್‍ನಲ್ಲಿ ಇನ್ನೂ ಕೆಟ್ಟ ಕಾಲ ಬರಲಿದೆ ! – ಫ್ರಾನ್ಸ್‍ನ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್

ಫ್ರಾನ್ಸ್‍ನ ರಾಷ್ಟ್ರಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಇವರು ರಷ್ಯಾದ ರಾಷ್ಟ್ರಧ್ಯಕ್ಷ ವ್ಲಾದಿಮಿರ ಪುತಿನ್ ಇವರ ಜೊತೆಗೆ ಸಂಚಾರ ವಾಣಿಯಲ್ಲಿ 90 ನಿಮಿಷ ಚರ್ಚೆ ನಡೆಸಿದನಂತರ `ಉಕ್ರೇನ್ ನಲ್ಲಿ ನಿನ್ನ ಕೆಟ್ಟ ಕಾಲ ಬರಲಿದೆ,’ ಎಂಬ ಎಚ್ಚರಿಕೆ ನೀಡಿದರು.

ಉಕ್ರೆನ್‍ಗೆ ಸಹಾಯ ಮಾಡುವಂತೆ ಖಲಿಸ್ತಾನ ಭಯೋತ್ಪಾದಕರಿಂದ ಕರೆ !

ಖಲಿಸ್ತಾನ ಭಯೋತ್ಪಾದಕರನ್ನು ನಾಶಗೊಳಿಸಲು ಸರಕಾರವು ಈಗಿನಿಂದಲೇ ಕಠಿಣವಾದ ಹೆಜ್ಜೆಯನ್ನು ಇಡುವುದು ಆವಶ್ಯಕವಾಗಿದೆ !

ಕೀವನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಗೆ ಗಾಯ ! – ಕೇಂದ್ರೀಯ ಸಚಿವ ವಿ.ಕೆ. ಸಿಂಹ

ರಷ್ಯಾ ಮತ್ತು ಉಕ್ರೇನ್ ಇವರಲ್ಲಿನ ನಡೆಯುತ್ತಿರುವ ಯುದ್ಧದಲ್ಲಿ ಕೀವನಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗಲಿ ಗಾಯಗೊಂಡಿದ್ದಾನೆ, ಎಂದು ಕೇಂದ್ರ ಸಚಿವ ವಿ.ಕೆ. ಸಿಂಹ ಅವರು ಮಾಹಿತಿ ನೀಡಿದರು. ಈ ಮೊದಲು ಯುದ್ಧದಲ್ಲಿ ಗುಂಡಿನ ದಾಳಿಯಿಂದ ನವೀನ ಶೇಖರಪ್ಪ ಇವರು ಸಾವನ್ನಪ್ಪಿದ್ದು ಬೇರೆ ಒಬ್ಬ ವಿದ್ಯಾರ್ಥಿ ಕಾಯಿಲೆಯಿಂದ ಮೃತಪಟ್ಟಿದ್ದಾನೆ.

ಯುಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ 498 ಸೈನಿಕರು ಮೃತಪಟ್ಟರು

ಯುಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ 498 ಸೈನಿಕರು ಸಾನ್ನಪ್ಪಿದ್ದಾರೆ ಮತ್ತು 1 ಸಾವಿರದ 597 ಸೈನಿಕರು ಗಾಯಗೊಂಡಿದ್ದಾರೆ

ಜರ್ಮನಿಯು ಉಕ್ರೇನ್‌ಗೆ ೨ ಸಾವಿರ ೭೦೦ ಕ್ಷಿಪಣಿ ನೀಡಲಿದೆ

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಒಂದು ಪ್ರಸ್ತಾಪವನ್ನು ಅಂಗಿಕರಿಸಿ ರಷ್ಯಾದ ಸೈನ್ಯಕ್ಕೆ ಉಕ್ರೇನ್‌ನಿಂದ ಹೊರ ಬರಲು ಹೇಳಿದೆ. ಇನ್ನೊಂದೆಡೆಗೆ ಜರ್ಮನಿಯು ಉಕ್ರೇನ್‌ಗೆ ೨ ಸಾವಿರ ೭೦೦ ಕ್ಷಿಪಣಿಗಳನ್ನು ನೀಡುವದನ್ನು ಘೋಷಿಸಿದೆ.

ರಷ್ಯಾದಿಂದ ಉಕ್ರೇನ್‌ನ ಕೇಂದ್ರ ರೇಲ್ವೆ ನಿಲ್ದಾಣದ ಮೇಲೆ ದಾಳಿ

ರಷ್ಯಾ-ಉಕ್ರೇನ್ ಯುದ್ಧದ ಎಂಟನೇಯ ದಿನದಂದು ರಷ್ಯಾದ ಸೇನೆಯು ಉಕ್ರೇನ್‌ನ ಕೇಂದ್ರ ರೇಲ್ವೆ ನಿಲ್ದಾಣದ ಮೇಲೆ ಕ್ಷಿಪಣಿಯಿಂದ ದಾಳಿ ನಡೆಸಿ ರೇಲ್ವೆ ನಿಲ್ದಾಣವನ್ನು ಧ್ವಂಸಗೊಳಿಸಿದೆ. ಖೇರ್ಸೊನ್ ನಗರ ರಷ್ಯಾ ಸೈನ್ಯದ ಕೈವಶವಾಗಿದೆ.

ಕೆನಡಾದಲ್ಲಿ ‘ಸ್ವಸ್ತಿಕ’ ಮೇಲಲ್ಲ, ‘ನಾಝಿ ಹುಕ್ಡ ಕ್ರಾಸ್’ ಮೇಲೆ ನಿರ್ಬಂಧ ಹೇರಲಿದೆ !

ಕೆನಡಾದಲ್ಲಿ ಸ್ವಸ್ತಿಕ ನಿಷೇಧಿಸಲು ಮನವಿ ಸಲ್ಲಿಸುವ ಖಾಸಗಿ ಮಸೂದೆಯಲ್ಲಿ ಈಗ ಬದಲಾವಣೆಯನ್ನು ಮಾಡಲಾಗಿದೆ. ಈ ಮಸೂದೆಯಲ್ಲಿ ‘ಸ್ವಸ್ತಿಕ’ ಬದಲಾಗಿ ‘ನಾಝಿ ಹುಕ್ಡ ಕ್ರಾಸ್’ ಈ ಶಬ್ದವನ್ನು ಉಪಯೋಗಿಸಲಾಗುವುದು. ಕೆನಡಾದ ಸಂಸತ್ತು ಈ ಬದಲಾವಣೆಗೆ ಸಮ್ಮತಿಸಿದೆ.