* ಉಕ್ರೇನ ಮತ್ತು ರಷ್ಯಾ ಯುದ್ಧದ ೧೦ ನೇ ದಿನ * ರಷ್ಯಾದಿಂದ ಉಕ್ರೇನಿನ ರಾಷ್ಟ್ರಪತಿ ಭವನದ ಮೇಲೆ ಆಕ್ರಮಣ |
ಕೀವ (ಉಕ್ರೇನ) – ಉಕ್ರೇನ ಮತ್ತು ರಷ್ಯಾದ ನಡುವಿನ ಯುದ್ಧದ ೧೦ನೇ ದಿನದಂದು ರಷ್ಯಾವು ಉಕ್ರೇನಿನ ರಾಷ್ಟ್ರಪತಿ ಭವನವನ್ನು ಗುರಿಯಾಗಿಸಿ ಕ್ಷಿಪಣಿಯನ್ನು ಹಾಕಿದೆ. ಆದರೆ ಅದು ಭವನದ ಸ್ವಲ್ಪ ಅಂತರದಲ್ಲಿ ಬಿದ್ದಿದೆ. ಇದರಿಂದ ಉಕ್ರೇನ ‘ರಷ್ಯಾದ ಗುರಿ ಇನ್ನೊಮ್ಮೆ ತಪ್ಪಿತು’ ಎಂದು ಹೇಳಿದೆ. ಉಕ್ರೇನಿನ ರಾಷ್ಟ್ರಾಧ್ಯಕ್ಷ ಝೆಲೆಂಸ್ಕೀಯವರು ‘ಪುಟಿನರವರನ್ನು ತಡೆಯುವುದು ಆವಶ್ಯಕವಾಗಿದೆ, ಇಲ್ಲದಿದ್ದರೆ ಸಂಪೂರ್ಣ ಯುರೋಪು ನಾಶವಾಗುವುದು’ ಎಂದು ಹೇಳಿದ್ದಾರೆ.
೧. ಝಾಯಟೋಮಿರ ನಗರದಲ್ಲಿ ರಷ್ಯಾದ ಆಕ್ರಮಣದಲ್ಲಿ ೪೭ ನಾಗರೀಕರು ಸಾವನ್ನಪ್ಪಿದ್ದಾರೆ, ಎಂದು ಉಕ್ರೇನ ಹೇಳಿದೆ.
೨. ಉಕ್ರೇನಿನ ರಕ್ಷಣಾ ಮಂತ್ರಾಲಯವು ‘ರಷ್ಯಾವು ಸತತವಾಗಿ ಸೈನಿಕರ ತಂಗುದಾಣಗಳಲ್ಲಿ ಹಾಗೆಯೇ ಜನಸಂದಣಿಯಿರುವ ಭಾಗಗಳಲ್ಲಿ ಆಕ್ರಮಣ ಮಾಡುತ್ತಿದೆ. ರಷ್ಯಾವು ಉಕ್ರೇನಿನ ಮಾರಿಯುಪೊಲ ನಗರದಲ್ಲಿನ ನಿವಾಸಿ ಕಟ್ಟಡಗಳ ಮೇಲೆ ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಘಟನೆಯ ಸಮಯದಲ್ಲಿ ಕಟ್ಟಡದಲ್ಲಿ ಯಾರೂ ಇರಲಿಲ್ಲ. ರಷ್ಯಾ ಸೈನ್ಯವು ಉಕ್ರೇನಿನ ರಾಜಧಾನಿಯಾದ ಕೀವನೊಂದಿಗೆ ಖಾರಕೀವ ಮತ್ತು ಮಾರಿಯುಪೋಲ ನಗರಗಳಿಗೆ ಮುತ್ತಿಗೆ ಹಾಕಿದೆ. ಇಲ್ಲಿ ಜೀವನಾವಶ್ಯಕ ವಸ್ತುಗಳ ಪೂರೈಕೆಯನ್ನು ತಡೆಯಲಾಗಿದೆ. ಇದರಿಂದಾಗಿ ಇಲ್ಲಿ ಸಿಲುಕಿರುವ ನಾಗರೀಕರ ಅಡಚಣೆಗಳು ಹೆಚ್ಚಾಗಿವೆ’ ಎಂದು ಹೇಳಿದೆ.
* ರಷ್ಯಾದಿಂದ ಫೇಸಬುಕ್ ಮತ್ತು ಟ್ವಿಟ್ಟರ್ ಮೇಲೆ ನಿರ್ಬಂಧ
ರಷ್ಯಾವು ಫೇಸಬುಕ್ ಮತ್ತು ಟ್ವಿಟ್ಟರ್ ಈ ಸಾಮಾಜಿಕ ಪ್ರಸಾರಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದೆ. ಇವುಗಳಲ್ಲಿನ ರಷ್ಯಾವಿರೋಧಿ ವಿಷಯಗಳಿಂದಾಗಿ ಈ ನಿರ್ಬಂಧವನ್ನು ಹೇರಲಾಗಿದೆ. ಈ ಎರಡು ಮಾಧ್ಯಮಗಳ ವಿರುದ್ಧ ೨೬ ದೂರುಗಳು ಬಂದಿದ್ದವು. ಇನ್ನೊಂದು ಕಡೆಯಲ್ಲಿ ಫೇಸಬುಕ್ ಒಂದು ನಿವೇದವನೆಯಲ್ಲಿ ‘ರಷ್ಯಾದ ಈ ನಿರ್ಣಯದಿಂದಾಗಿ ಲಕ್ಷಾಂತರ ಜನರಿಗೆ ವಿಶ್ವಾಸಾರ್ಹ ಮಾಹಿತಿ ದೊರೆಯುವುದಿಲ್ಲ’ ಎಂದು ಹೇಳಿದೆ.