ನಾನು ಕೀವನಲ್ಲಿಯೇ ಇದ್ದು ಎಲ್ಲಿಯು ಅಡಗಿಲ್ಲ ! ವ್ಲೋದಿಮಿರ ಝೆಲೆಂಸ್ಕೀ, ರಾಷ್ಟ್ರಾಧ್ಯಕ್ಷ, ಉಕ್ರೇನ್

ಕೀವ (ಉಕ್ರೇನ್) – ರಷ್ಯಾ- ಉಕ್ರೇನ್ ಯುದ್ಧದ ಸಮಯದಲ್ಲಿ ಪೋಲ್ಯಾಂಡ್‌ಗೆ ಓಡಿಹೋಗಿರುವ ವದಂತಿಗೆ ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೋದಿಮಿರ ಝೆಲೆಂಸ್ಕೀಯವರು ಇನ್ನೊಮ್ಮೆ ಜಗತ್ತಿನೆದುರು ಬಂದಿದ್ದಾರೆ. ರಾಷ್ಟ್ರಾಧ್ಯಕ್ಷರು ಅವರ ಇನ್ಸಟಾಗ್ರಾಂನಲ್ಲಿ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಅವರ ಕಾರ್ಯಾಲಯದಲ್ಲಿ ಕಾಣಿಸುತ್ತಿದ್ದಾರೆ. ವೀಡಿಯೋದಲ್ಲಿ ಇನ್ನೊಬ್ಬ ಸಿಬ್ಬಂದಿ ಕಾಣಿಸುತ್ತಿದ್ದಾನೆ. ನಾನು ಕೀವನಲ್ಲಿಯೇ ಇದ್ದೇನೆ ನಾನು ಇಲ್ಲಿಂದಲೇ ಕೆಲಸ ಮಾಡುತ್ತಿದ್ದೇನೆ. ಎಲ್ಲಿಯು ಅಡಗಿಕೊಂಡಿಲ್ಲ, ಎಂದು ಅವರು ಬರೆದಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಝೆಲೆಂಸ್ಕೀಯವರು ಉಕ್ರೇನ್ ಬಿಟ್ಟು ಓಡಿಹೋಗಿರುವ ವದಂತಿ ಹರಡಿರುವುದು ಇದು ಎರಡನೆ ಸಲವಾಗಿದೆ. ಈ ಸಲ ರಷ್ಯಾದ ಓರ್ವ ರಾಜಕಾರಣಿಯು ಝೆಲೆಂಸ್ಕೀ ಪೋಲ್ಯಾಂಡಗೆ ಓಡಿಹೋಗಿರುವುದಾಗಿ ಹೇಳಿದ್ದರು. ಝೆಲೆಂಸ್ಕೀಯವರು ಮಾರ್ಚ ೨ ರಂದು ಉಕ್ರೇನ್ ಬಿಟ್ಟಿರುವ ವದಂತಿ ಇತ್ತು. ಇದರ ಮೊದಲು ಅಮೇರಿಕವು ಝೆಲೆಂಸ್ಕೀಯವರಿಗೆ ಉಕ್ರೇನ್‌ನಿಂದ ಸುರಕ್ಷಿತವಾಗಿ ಹೊರಬೀಳುವ ಪ್ರಸ್ತಾಪವನ್ನು ಕೊಟ್ಟಿತ್ತು; ಆದರೆ ಅವರು ಆ ಪ್ರಸ್ತಾಪವನ್ನು ನಿರಾಕರಿಸಿದ್ದರು. ಆಗಲೂ ಝೆಲೆಂಸ್ಕೀಯವರು ವೀಡಿಯೋವನ್ನು ಪ್ರಸಾರ ಮಾಡಿ ಅವರು ಉಕ್ರೇನ್‌ನಲ್ಲಿಯೇ ಇರುವುದಾಗಿ ಸ್ಪಷ್ಟಗೊಳಿಸಿದ್ದರು.