ರಷ್ಯಾದಿಂದ ಉಕ್ರೇನ್‌ನ ಕೇಂದ್ರ ರೇಲ್ವೆ ನಿಲ್ದಾಣದ ಮೇಲೆ ದಾಳಿ

ಕೀವ(ಉಕ್ರೇನ್) – ರಷ್ಯಾ-ಉಕ್ರೇನ್ ಯುದ್ಧದ ಎಂಟನೇಯ ದಿನದಂದು ರಷ್ಯಾದ ಸೇನೆಯು ಉಕ್ರೇನ್‌ನ ಕೇಂದ್ರ ರೇಲ್ವೆ ನಿಲ್ದಾಣದ ಮೇಲೆ ಕ್ಷಿಪಣಿಯಿಂದ ದಾಳಿ ನಡೆಸಿ ರೇಲ್ವೆ ನಿಲ್ದಾಣವನ್ನು ಧ್ವಂಸಗೊಳಿಸಿದೆ. ಖೇರ್ಸೊನ್ ನಗರ ರಷ್ಯಾ ಸೈನ್ಯದ ಕೈವಶವಾಗಿದೆ. ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೊದಿಮಿರ ಝೆಲೆನ್‌ಸ್ಕಿ ಇವರ ಕಾರ್ಯಾಲಯ ಒಂದು ಘೋಷಣೆಯನ್ನು ಪ್ರಕಟಿಸಿ ‘ಹೋರಾಟ ಈಗಲೂ ಮುಂದುವರಿದಿದೆ’, ಎಂದು ತಿಳಿಸಿದೆ.

ಅಮೇರಿಕೆದಿಂದ ಬೆಲಾರೂಸ ಮೇಲೆಯೂ ನಿರ್ಬಂಧ

ಉಕ್ರೇನ್‌ನ ಯುದ್ಧದ ಹಿನ್ನೆಲೆಯಲ್ಲಿ ಅಮೇರಿಕಾವು ರಶಿಯಾಕ್ಕೆ ಸಹಾಯ ಮಾಡುವ ಬೆಲಾರೂಸ ಮೇಲೆಯೂ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಅಮೇರಿಕಾದ ‘ವೈಟ್ ಹೌಸ’, ರಷ್ಯಾ ಮತ್ತು ಬೆಲಾರೂಸನ ರಕ್ಷಣಾ ಕ್ಷೇತ್ರದ ರಫ್ತು ವಹಿವಾಟನ್ನು ನಿರ್ಬಂಧಿಸಲಾಗಿದೆ. ಇದರಲ್ಲಿ ಯುದ್ಧ ವಿಮಾನ, ಸೇನಾ ವಾಹನಗಳ ಬಿಡಿಭಾಗಗಳು ಸೇರಿವೆ ಎಂದು ಹೇಳಿದೆ.