ಉಕ್ರೆನ್‍ಗೆ ಸಹಾಯ ಮಾಡುವಂತೆ ಖಲಿಸ್ತಾನ ಭಯೋತ್ಪಾದಕರಿಂದ ಕರೆ !

ಖಲಿಸ್ತಾನ ಭಯೋತ್ಪಾದಕರನ್ನು ನಾಶಗೊಳಿಸಲು ಸರಕಾರವು ಈಗಿನಿಂದಲೇ ಕಠಿಣವಾದ ಹೆಜ್ಜೆಯನ್ನು ಇಡುವುದು ಆವಶ್ಯಕವಾಗಿದೆ ! – ಸಂಪಾದಕರು 

ಕೀವ (ಉಕ್ರೆನ್) – ಖಲಿಸ್ತಾನವಾದಿ ‘ಸಿಖ ಫಾರ್ ಜಸ್ಟೀಸ್’ ಈ ಭಯೋತ್ಪಾದಕ ಸಂಘಟನೆಯು ಉಕ್ರೆನ್‍ಗೆ ಸಹಾಯ ಮಾಡುವಂತೆ ಆಹ್ವಾನವನ್ನು ಮಾಡಿದೆ. ಉಕ್ರೆನ್‍ನ ರಕ್ಷಣೆಗಾಗಿ ವಿದೇಶಿ ಭಯೋತ್ಪಾದಕರನ್ನು ಒಟ್ಟಾಗುವಂತೆ ಕರೆ ನೀಡಿದೆ. ‘ಸಿಖ್ ಫಾರ್ ಜಸ್ಟೀಸ್’ ಉಕ್ರೆನ್‍ಗೆ ಸಹಾಯ ಮಾಡುವ ಘೋಷಣೆಯ ಪತ್ರ ಹಾಗೂ ವೀಡಿಯೋವನ್ನು ಕಳುಹಿಸಿದೆ. ಇದರಲ್ಲಿ ಉಕ್ರೆನ್‍ನ ರಾಷ್ಟ್ರಾಧ್ಯಕ್ಷರಿಗೆ ಉಕ್ರೆನ್‍ನ ಸೈನ್ಯದಳದಲ್ಲಿ ಸ್ವತಂತ್ರ ಸಿಖ್ ಖಲಿಸ್ತಾನಿ ಸೈನ್ಯದ ತಂಡವನ್ನು ಸಿದ್ಧ ಪಡಿಸುವಂತೆ ಕೇಳಿಕೊಂಡಿದೆ.

‘ಭಾರತ ವಿರೋಧಿ ಗುಂಪಿಗೆ ಬೆಂಬಲವನ್ನು ನೀಡಿ ಪಂಜಾಬನ್ನು ಮುಕ್ತಗೊಳಿಸುವ ಸಮಯ ಇದಾಗಿದೆ’ (ಅಂತೆ)

ಈ ಪತ್ರದಲ್ಲಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನೂ ಈತನು, ‘ನಾವು ಉಕ್ರೆನ್‍ನ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಅಖಂಡತೆಯ ರಕ್ಷಣೆ ಮಾಡುವುದಕ್ಕಾಗಿ ಸಿದ್ಧರಿದ್ದೇವೆ. ರಷ್ಯಾ-ಉಕ್ರೆನ್ ಯುದ್ಧದ ಪ್ರಕರಣದಲ್ಲಿ ಭಾರತವು ವಿಶ್ವಸಂಸ್ಥೆಯ ಸುರಕ್ಷಾ ಪರಿಷತ್ತಿನ ಮತದಾನದಲ್ಲಿ ಭಾಗವಹಿಸದೆ ರಷ್ಯಾಗೆ ಸಹಾಯ ಮಾಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವಿರೋಧಿ ಗುಂಪಿಗೆ ಬೆಂಬಲವನ್ನು ನೀಡಿ ಪಂಜಾಬನ್ನು ಮುಕ್ತಗೊಳಿಸುವ ಸಮಯವು ಇದಾಗಿದೆ’ ಎಂದು ಹೇಳಿದ್ದಾರೆ.