ಚಾರ್ ಧಾಮ್ ಸಹಿತ ೫೧ ದೊಡ್ಡ ದೇವಾಲಯಗಳನ್ನು ಶೀಘ್ರದಲ್ಲೇ ಸರಕಾರಿಕರಣದಿಂದ ಮುಕ್ತಗೊಳಿಸಲಾಗುವುದು !

ರಾಜ್ಯದ ಮುಖ್ಯಮಂತ್ರಿ ತಿರಥಸಿಂಹ ರಾವತ ಇವರು, ಬದ್ರಿನಾಥ, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಈ ಚಾರ್ ಧಾಮ್ಗಳು ಸೇರಿದಂತೆ ೫೧ ದೊಡ್ಡ ದೇವಾಲಯಗಳನ್ನು ಶೀಘ್ರದಲ್ಲೇ ದೇವಸ್ಥಾನ ಬೋರ್ಡ್‍ನಿಂದ ಅಂದರೆ ಸರಕಾರಿಕರಣದಿಂದ ಮುಕ್ತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.

ಎನ್.ಸಿ.ಇ.ಆರ್.ಟಿ.ಯ ನಿರ್ದೇಶಕರು ಮತ್ತು ಶಿಕ್ಷಣ ಸಚಿವಾಲಯಕ್ಕೆ ನ್ಯಾಯಾಲಯದಿಂದ ನೋಟಿಸ್

ಎನ್.ಸಿ.ಇ.ಆರ್.ಟಿ.ಯ ೧೨ ನೇ ತರಗತಿಯ ಪುಸ್ತಕದಲ್ಲಿ ಮೊಘಲರನ್ನು ಹಾಡಿಹೊಗಳಲು ಯಾವುದೇ ಆಧಾರವಿಲ್ಲ ಎಂಬ ಕಾರಣಕ್ಕೆ ಜೈಪುರದ ನ್ಯಾಯಾಲಯವು ಎನ್.ಸಿ.ಇ.ಆರ್.ಟಿ.ಯ ನಿರ್ದೇಶಕರಿಗೆ ಮತ್ತು ಶಿಕ್ಷಣ ಸಚಿವಾಲಯಕ್ಕೆ ನೋಟಿಸ್ ನೀಡಿದೆ.

ಕಾಶಿ ವಿಶ್ವನಾಥ ಮತ್ತು ಜ್ಞಾನವಾಪಿ ಮಸೀದಿ ಪರಿಸರದಲ್ಲಿ ಉತ್ಖನನಕ್ಕೆ ನ್ಯಾಯಾಲಯದಿಂದ ಅನುಮತಿ !

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪೀ ಮಸೀದಿ ಪ್ರಕರಣದಲ್ಲಿ ಸಮೀಕ್ಷೆ ನಡೆಸಲು ಪುರಾತತ್ವ ಇಲಾಖೆಗೆ ವಾರಣಾಸಿ ಶೀಘ್ರಗತಿ ನ್ಯಾಯಾಲಯವು ಅನುಮತಿ ನೀಡಿದೆ. ಸಮೀಕ್ಷೆಯ ಸಂಪೂರ್ಣ ವೆಚ್ಚವನ್ನು ಉತ್ತರ ಪ್ರದೇಶ ಸರಕಾರ ಭರಿಸಲಿದೆ ಮತ್ತು ಸಮೀಕ್ಷೆ ಪೂರ್ಣಗೊಂಡ ನಂತರ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯವು ಹೇಳಿದೆ.

ಬೆಂಗಳೂರು ನಗರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇವತೆಗಳ ಅನಾಥವಾಗಿ ಬಿದ್ದಿರುವ ಚಿತ್ರಗಳ ವಿಸರ್ಜನಾ ಅಭಿಯಾನ !

ಈ ಅಭಿಯಾನವನ್ನು ಬೆಂಗಳೂರು ನಗರದ ಕೆಂಗೇರಿ, ರಾಜಾಜಿ ನಗರ, ಲೋಟಗನಹಳ್ಳಿ, ಮಾರುತಿ ನಗರ ಮುಂತಾದ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು, ಧರ್ಮಪ್ರೇಮಿಗಳು, ಧರ್ಮ ಶಿಕ್ಷಣ ವರ್ಗಕ್ಕೆ ಬರುವ ಧರ್ಮಪ್ರೇಮಿಗಳು ಸಹಭಾಗಿಯಾಗಿದ್ದರು.

ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಸಹಿತ ೧೧ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಷೇಧ ಹೇರಿದ ಶ್ರೀಲಂಕಾ

ಶ್ರೀಲಂಕಾ ಸರಕಾರವು ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಸೇರಿದಂತೆ ಇತರ ಒಂಬತ್ತು ಜಿಹಾದಿ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಷೇದವನ್ನು ಹೇರಿದೆ. ೨೦೧೯ ರಲ್ಲಿ ಶ್ರೀಲಂಕಾದಲ್ಲಿ ನಡೆದ ಜಿಹಾದಿ ಆತ್ಮಾಹುತಿ ದಾಳಿಯಲ್ಲಿ ಒಟ್ಟು ೨೭೦ ಜನರು ಸಾವನ್ನಪ್ಪಿದ್ದರು.

ತೃಣಮೂಲ ಕಾಂಗ್ರೆಸ್‍ಗೆ ಮತ ಚಲಾಯಿಸುವಂತೆ ಮುಸಲ್ಮಾನರಿಗೆ ಕರೆ ನೀಡಿದರೆಂಬ ಕಾರಣದಿಂದ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ

ಬಂಗಾಳ ವಿಧಾನಸಭಾ ಚುನಾವಣೆಯ ಪ್ರಸಾರದ ಸಮಯದಲ್ಲಿ ತೃಣಮೂಲ ಮುಸಲ್ಮಾನರಿಗೆ ಸಂಘಟಿತರಾಗಿ ತೃಣಮೂಲ ಕಾಂಗ್ರೆಸ್‍ಗೆ ಮತ ಚಲಾಯಿಸಿ ಎಂದು ಕರೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕಾರಣ ತೋರಿಸಿ ಎಂದು ನೋಟಿಸ್ ನೀಡಿದೆ.

ನಕ್ಸಲರೊಂದಿಗೆ ಹೋರಾಡುವಾಗ ಹುತಾತ್ಮರಾದ ಸೈನಿಕರ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಬರೆದಿದ್ದ ಲೇಖಕಿಯ ಬಂಧನ

ಸಂಬಳ ಪಡೆಯುವ ಕಾರ್ಮಿಕರು ಕೆಲಸದ ಸಮಯದಲ್ಲಿ ಸಾಯುತ್ತಿದ್ದರೆ, ಅವರನ್ನು ‘ಹುತಾತ್ಮರು’ ಎಂದು ಹೇಗೆ ಕರೆಯಬಹುದು ? ಈ ಆಧಾರದ ಮೇಲೆ, ವಿದ್ಯುತ್ ವಿಭಾಗದ ಉದ್ಯೋಗಿಯೊಬ್ಬರು ವಿದ್ಯುತ್ ಆಘಾತದಿಂದ ಸತ್ತರೆ, ಅವರನ್ನು ‘ಹುತಾತ್ಮ’ ಎಂದೂ ಕರೆಯಬೇಕು.

ವಾಕ್ ಸ್ವಾತಂತ್ರ್ಯದಿಂದ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಿಲ್ಲ ! – ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯಪೀಠ

ಸಂವಿಧಾನವು ವಾಕ್ ಸ್ವಾತಂತ್ರ್ಯವನ್ನು ನೀಡಿದ್ದರೂ, ಒಬ್ಬರು ಇತರ ಧರ್ಮಗಳ ವಿರುದ್ಧ ಮಾತನಾಡಬಹುದು ಮತ್ತು ಆ ಧರ್ಮಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಬಹುದು ಎಂದು ಅರ್ಥವಲ್ಲ ಎಂದು ಅಲಹಬಾದ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯಪೀಠವು ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾದ ಮಹಮ್ಮದ ನದೀಮ್ ಈ ಕಾರ್ಯಕರ್ತನ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

‘ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಭಾರತೀಯ ಸಂಸ್ಕೃತಿಯೇ ಕಾರಣ!(ವಂತೆ) – ಪಾಕಿಸ್ತಾನ ಪ್ರಧಾನಿಯ ಭಾರತದ್ವೇಷಿ ಹೇಳಿಕೆ

ಅಶ್ಲೀಲತೆಯಿಂದ ಅತ್ಯಾಚಾರ ಅಥವಾ ಲೈಂಗಿಕ ಶೋಷಣೆ ಆಗುತ್ತದೆ. ಈ ಅಶ್ಲೀಲತೆಯು ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಸ್ಕೃತಿಯಿಂದ ಬರುತ್ತದೆ, ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದರು.

‘ಭಗವಾನ್ ಅಯ್ಯಪ್ಪ ಮತ್ತು ಎಲ್ಲ ದೇವತೆಗಳೂ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದೊಂದಿಗೆ ಇದ್ದಾರಂತೆ

ಶಬರಿಮಲೆಯಲ್ಲಿ ಭಗವಾನ್ ಅಯ್ಯಪ್ಪ ಸೇರಿದಂತೆ ಎಲ್ಲ ದೇವಿ ಮತ್ತು ದೇವತೆಗಳು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದೊಂದಿಗೆ ಇದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ವಿಜಯನ್ ಅವರ ಹೇಳಿಕೆಯನ್ನು ಯಾವುದೇ ಭಕ್ತರು ನಂಬುವುದಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿ ತಿಳಿಸಿದ್ದಾರೆ.