ಸಮಾಜದಿಂದ ಅತ್ಯುತ್ತಮ ಸ್ಪಂದನ !
ಬೆಂಗಳೂರು – ದಿನಾಂಕ ೪.೪. ೨೦೨೧ ರಂದು ಭಾನುವಾರ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರು ನಗರದಲ್ಲಿ ರಸ್ತೆ ಬದಿ, ವೃಕ್ಷದ ಕೆಳಗೆ, ದೇವಸ್ಥಾನಗಳ ಬಳಿ ಅನಾಥವಾಗಿ ಬಿದ್ದಿರುವ ದೇವತೆಗಳ ಚಿತ್ರ, ದೇವರ ಮೂರ್ತಿಗಳನ್ನು ಒಟ್ಟು ಸೇರಿಸಿ, ಸ್ಥಳಗಳ ಸ್ವಚ್ಚತೆ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನವನ್ನು ಬೆಂಗಳೂರು ನಗರದ ಕೆಂಗೇರಿ, ರಾಜಾಜಿ ನಗರ, ಲೋಟಗನಹಳ್ಳಿ, ಮಾರುತಿ ನಗರ ಮುಂತಾದ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು, ಧರ್ಮಪ್ರೇಮಿಗಳು, ಧರ್ಮ ಶಿಕ್ಷಣ ವರ್ಗಕ್ಕೆ ಬರುವ ಧರ್ಮಪ್ರೇಮಿಗಳು ಸಹಭಾಗಿಯಾಗಿದ್ದರು. ಇದರಲ್ಲಿ ಮುಖ್ಯವಾಗಿ ದೇವತೆಗಳ ಹಾಳಾಗಿರುವ ಚಿತ್ರಗಳನ್ನು ಒಟ್ಟು ಮಾಡುವುದು, ದೇವರ ಚಿತ್ರಗಳನ್ನು ಕಟ್ಟಿಗೆ ಫ್ರೇಮ್‍ನಿಂದ ಬೇರ್ಪಡಿಸಿ ವಿಸರ್ಜನೆ ಮಾಡುವುದು, ತದ ನಂತರ ಆ ಸ್ಥಳದ ಸ್ವಚ್ಚತೆ ಮಾಡಿ ಅಲ್ಲಿ ‘ಮುಂದೆ ದೇವರ ಚಿತ್ರಗಳನ್ನು ಹಾಕಬಾರದು’ ಎಂಬ ಪ್ರಭೋದನಾ ಫಲಕಗಳನ್ನು ಹಾಕುವುದು ಇತ್ಯಾದಿ ಕೃತಿಗಳನ್ನು ಮಾಡಲಾಯಿತು.
ಈ ಅಭಿಯಾನದಲ್ಲಿ ಗಮನಕ್ಕೆ ಬಂದ ವೈಶಿಷ್ಟ್ಯಪೂರ್ಣ ಅಂಶಗಳು
೧. ಮಾರುತಿ ನಗರದಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಗೆ ತುಂಬಾ ಉತ್ಸಾಹ ಅನಿಸಿ, ಮರುದಿನವು ಸಹ ಅವರು ದೇವರ ಚಿತ್ರಗಳನ್ನು ತೆಗೆಯುವ ಅಭಿಯಾನವನ್ನು ಮುಂದುವರೆಸಿದರು.
೨. ಯಲಹಂಕ ಕೇಂದ್ರದಲ್ಲಿ ಹಿಂದೂ ಯುವಕರ ಸಂಘದವರು ಮುಂದಿನವಾರ ವಿದ್ಯಾರಣ್ಯಪುರದ ಪೂರ್ಣ ಪ್ರದೇಶದಲ್ಲಿ ಇಂತಹ ಅಭಿಯಾನ ಮಾಡಿ ಅಲ್ಲಿ ದೇವರ ಚಿತ್ರಗಳನ್ನು ತೆಗೆಯಲು ನಿಶ್ಚಯ ಮಾಡಿದ್ದಾರೆ.
೩. ಸಂಜಯ ನಗರದಲ್ಲಿ ಕೆಲವು ಧರ್ಮಪ್ರೇಮಿಗಳು ಮುಂದಿನ ವಾರ ಅವರ ಪ್ರದೇಶದಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲು ಅವರೇ ಸ್ವತಃ ತಯಾರಾದರು.
೪. ಸಮಿತಿಯ ಪೊಸ್ಟ ನೋಡಿ ಒಂದು ಮಹಿಳಾ ಗುಂಪುನವರು ಅವರೇ ಸ್ವಯಂಪ್ರೇರಿತವಾಗಿ ಕೆಂಗೇರಿಯಲ್ಲಿ ದೇವರ ಚಿತ್ರ ತೆಗೆಯುವ ಅಭಿಯಾನವನ್ನು ಮಾಡಿದ್ದಾರೆ.
೫. ಕೆಲವರು ದೂರವಾಣಿಕರೆ ಮಾಡಿ ‘ನಾವು ಕೂಡಾ ಮಾಡುತ್ತೇವೆ; ಆದರೆ ವಿಸರ್ಜನೆ ಹೇಗೆ ಮಾಡಬೇಕು ಎಂದು ತಿಳಿದಿರಲಿಲ್ಲ ಮತ್ತು ಅದನ್ನು ತಿಳಿದುಕೊಂಡೆವು ಮುಂದೆ ಅವರ ಪ್ರದೇಶದಲ್ಲಿ ತಾವೇ ಮಾಡುತ್ತೇವೆ’, ಎಂದರು.
೬. ಕೆಲವರು ಪೋನ್ ಮಾಡಿ ನಮಗೂ ಸಹ ದೇವರ ಚಿತ್ರಗಳನ್ನು ರಸ್ತೆ ಬದಿ ನೋಡಿದಾಗ ಏನಾದರೂ ಮಾಡಬೇಕು ಅನಿಸುತ್ತಿತ್ತು. ನೀವು ಮಾಡಿದ್ದು ನೋಡಿ ತುಂಬಾ ಒಳ್ಳೆಯದೆನಿಸಿತು. ಮುಂದೆ ನಾವು ಬರುತ್ತೇವೆ ಎಂದರು.
ಪ್ರಸಾರಮಾಧ್ಯಮದವರು ಗಮನ ಸೆಳೆದ ಅಭಿಯಾನ !ಅಭಿಯಾನದ ಹಿಂದಿನ ದಿನ ದೇವರ ಚಿತ್ರ ವಿಸರ್ಜನೆ ಮಾಡುವ ಅಭಿಯಾನದ ವಿಷಯವನ್ನು ಸೊಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಿದಾಗ ‘ಸುದ್ದಿ ಕಿರಣ ಟಿವಿ’ಯ ಸಂಪಾದಕರು ಸಮಿತಿಯ ಕಾರ್ಯಕರ್ತರಿಗೆ ಕರೆ ಮಾಡಿ ‘ನೀವು ಉತ್ತಮ ಕಾರ್ಯ ಮಾಡುತ್ತಿದ್ದೀರಿ, ಅಭಿನಂದನೆಗಳು, ದಯಮಾಡಿ ಛಾಯಾಚಿತ್ರ, ವಿಡಿಯೋ ಕಳಿಸಿ ನಿಮಗೆ ಉತ್ತಮ ಪ್ರಸಿದ್ಧಿ ನೀಡುತ್ತೇವೆ ಎಂದರು ಮತ್ತು ಉತ್ತಮ ಪ್ರಸಿದ್ಧೀಯನ್ನು ಸಹ ನೀಡಿದರು. ಈ ಅಭಿಯಾನಕ್ಕೆ ರಾಜ್ಯಸ್ತರದ ೬ ನಿಯತಕಾಲಿಕೆಯವರು ಛಾಯಾಚಿತ್ರದೊಂದಿಗೆ ಉತ್ತಮ ಪ್ರಸಿದ್ಧಿ ನೀಡಿದರು. |