ಎನ್.ಸಿ.ಇ.ಆರ್.ಟಿ.ಯ ನಿರ್ದೇಶಕರು ಮತ್ತು ಶಿಕ್ಷಣ ಸಚಿವಾಲಯಕ್ಕೆ ನ್ಯಾಯಾಲಯದಿಂದ ನೋಟಿಸ್

ಎನ್.ಸಿ.ಇ.ಆರ್.ಟಿ.ಯ ಪುಸ್ತಕದಲ್ಲಿ ಶಹಾಜಹಾನ ಮತ್ತು ಔರಂಗಜೇಬರು ದೇವಾಲಯಗಳ ದುರಸ್ತಿ ಮಾಡಿದ್ದಾರೆಂಬ ತಪ್ಪು ಉಲ್ಲೇಖ ನೀಡಿದ ಪ್ರಕರಣ !

ಇಸ್ಲಾಮಿಕ್ ಆಕ್ರಮಣಕಾರರನ್ನು ಹಾಡಿ ಹೊಗಳಿ ಅವರ ಬಗ್ಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೌರವವನ್ನು ಮೂಡಿಸಲು ಪ್ರಯತ್ನಿಸುತ್ತಿರುವ ಎನ್.ಸಿ.ಇ.ಆರ್.ಟಿ.ಯ ಸಂಬಂಧಿತರ ವಿರುದ್ಧ ಕ್ರಮಕೈಗೊಳ್ಳಿ !

ಜೈಪುರ (ರಾಜಸ್ಥಾನ) – ಎನ್.ಸಿ.ಇ.ಆರ್.ಟಿ.ಯ ೧೨ ನೇ ತರಗತಿಯ ಪುಸ್ತಕದಲ್ಲಿ ಮೊಘಲರನ್ನು ಹಾಡಿಹೊಗಳಲು ಯಾವುದೇ ಆಧಾರವಿಲ್ಲ ಎಂಬ ಕಾರಣಕ್ಕೆ ಜೈಪುರದ ನ್ಯಾಯಾಲಯವು ಎನ್.ಸಿ.ಇ.ಆರ್.ಟಿ.ಯ ನಿರ್ದೇಶಕರಿಗೆ ಮತ್ತು ಶಿಕ್ಷಣ ಸಚಿವಾಲಯಕ್ಕೆ ನೋಟಿಸ್ ನೀಡಿದೆ. ಏಪ್ರಿಲ್ ೧೯ ರೊಳಗೆ ಇದಕ್ಕೆ ಉತ್ತರಿಸಲು ಹೇಳಲಾಗಿದೆ. ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ‘ಪಠ್ಯಪುಸ್ತಕದಲ್ಲಿ ಅಯೋಗ್ಯವಾದ ಮಾಹಿತಿಯನ್ನು ನೀಡಲಾಗಿದೆ ಹಾಗೂ ಅದನ್ನು ತೆಗೆದುಹಾಕಬೇಕು’ ಎಂದು ಕೋರಿದೆ. ಈ ಪುಸ್ತಕದಲ್ಲಿ ಶಹಾಜಹಾನ್ ಮತ್ತು ಔರಂಗಜೇಬ್ ಇವರು ಯುದ್ಧದಲ್ಲಿ ಧ್ವಂಸಗೊಂಡ ಹಿಂದೂ ದೇವಾಲಯಗಳನ್ನು ದುರಸ್ತಿ ಮಾಡಲು ಆದೇಶಿಸಿದ್ದರು ಹಾಗೂ ಅದಕ್ಕೆ ಹಣಕಾಸಿನ ನೆರವು ನೀಡಿದ್ದರು ಎಂದು ಹೇಳಲಾಗಿದೆ.