ಕಾಶಿ ವಿಶ್ವನಾಥ ಮತ್ತು ಜ್ಞಾನವಾಪಿ ಮಸೀದಿ ಪರಿಸರದಲ್ಲಿ ಉತ್ಖನನಕ್ಕೆ ನ್ಯಾಯಾಲಯದಿಂದ ಅನುಮತಿ !

ನ್ಯಾಯಾಲಯದಲ್ಲಿನ ಹೋರಾಟದಲ್ಲಿ ಹಿಂದೂಗಳಿಗೆ ದೊರಕಿದ ದೊಡ್ಡ ಗೆಲುವು !

  •  ಉತ್ತರ ಪ್ರದೇಶ ಸರಕಾರವೇ ಉತ್ಖನನ ವೆಚ್ಚವನ್ನು ಭರಿಸಲಿದೆ !
  • ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿರುವ ದೇವಾಲಯವನ್ನು ನೆಲಸಮ ಮಾಡಲಾಯಿತು ಮತ್ತು ಬಾಬರಿ ಮಸೀದಿಯನ್ನು ಅಲ್ಲಿ ನಿರ್ಮಿಸಲಾಗಿತ್ತು, ಎಂದು ಭಾರತೀಯ ಪುರಾತತ್ವ ಸಮೀಕ್ಷೆಯು ೨ ಬಾರಿ ಮಾಡಿದ ಉತ್ಖನನದಲ್ಲಿ ಬಹಿರಂಗವಾಗಿತ್ತು. ಪುರಾತತ್ವ ಇಲಾಖೆಯ ಉತ್ಖನನದ ವರದಿಯನ್ನು ಸಹ ಸರ್ವೋಚ್ಚ ನ್ಯಾಯಾಲಯವು ಅಂಗೀಕರಿಸಿತ್ತು ಮತ್ತು ಈ ಭೂಮಿಯು ಶ್ರೀ ರಾಮಮಂದಿರಕ್ಕೆ ಸೇರಿದೆ ಎಂದು ತೀರ್ಪು ನೀಡಿತ್ತು. ಈಗ ಈ ಉತ್ಖನನದ ಮೂಲಕ ಜ್ಞಾನವಾಪಿ ಮಸೀದಿಯ ಐತಿಹಾಸಿಕ ಸತ್ಯವೂ ಬಹಿರಂಗವಾಗಿ ಅಲ್ಲಿ ಕಾಶಿ ವಿಶ್ವನಾಥ ದೇವಸ್ಥಾನವಿತ್ತು ಹಾಗೂ ಅಲ್ಲಿ ಭವ್ಯ ಸ್ವಯಂಭೂ ಶಿವಲಿಂಗ ಇದೆ, ಎಂಬುದು ಬೆಳಕಿಗೆ ಬರಲಿದೆ !

ವಾರಣಾಸಿ (ಉತ್ತರ ಪ್ರದೇಶ) – ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪೀ ಮಸೀದಿ ಪ್ರಕರಣದಲ್ಲಿ ಸಮೀಕ್ಷೆ ನಡೆಸಲು ಪುರಾತತ್ವ ಇಲಾಖೆಗೆ ವಾರಣಾಸಿ ಶೀಘ್ರಗತಿ ನ್ಯಾಯಾಲಯವು ಅನುಮತಿ ನೀಡಿದೆ. ಸಮೀಕ್ಷೆಯ ಸಂಪೂರ್ಣ ವೆಚ್ಚವನ್ನು ಉತ್ತರ ಪ್ರದೇಶ ಸರಕಾರ ಭರಿಸಲಿದೆ ಮತ್ತು ಸಮೀಕ್ಷೆ ಪೂರ್ಣಗೊಂಡ ನಂತರ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯವು ಹೇಳಿದೆ. ಈ ನಿಟ್ಟಿನಲ್ಲಿ ನ್ಯಾಯವಾದಿ ವಿಜಯ ಶಂಕರ ರಾಸ್ತೋಗಿ ಅವರು ೨೦೧೯ ರ ಡಿಸೆಂಬರ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ೨೦೨೦ ರ ಜನವರಿಯಲ್ಲಿ ಅವರನ್ನು ಅಂಜುಮಾನ ಇಂತಜಾಮಿಯಾ ಮಸೀದಿ ಸಮಿತಿಯು ಸವಾಲನ್ನು ಒಡ್ಡಿತ್ತು. ನ್ಯಾಯವಾದಿ ವಿಜಯ ಶಂಕರ ರಸ್ತೋಗಿಯವರು, ಪ್ರದೇಶದ ಸಮೀಕ್ಷೆ ಮತ್ತು ಉತ್ಖನನ ಮಾಡಲು ಪುರಾತತ್ವ ಇಲಾಖೆ ೫ ಜನರ ತಂಡವನ್ನು ರಚಿಸಲಿದೆ ಎಂದು ಹೇಳಿದ್ದಾರೆ.

೧೯೯೧ ರಲ್ಲಿ, ಜ್ಞಾನವಾಪಿಯಲ್ಲಿ ಸ್ವಯಂಭು ಜ್ಯೋತಿರ್ಲಿಂಗ ವಿಶ್ವೇಶ್ವರರನ್ನು ಪೂಜಿಸಲು ಅನುಮತಿ ಕೋರಿ ಸಿವಿಲ್(ದಿವಾಣಿ) ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ ಕಾಶಿ ವಿಶ್ವನಾಥ ದೇವಾಲಯವನ್ನು ೨ ಸಾವಿರ ೫೦ ವರ್ಷಗಳ ಹಿಂದೆ ಮಹಾರಾಜ ವಿಕ್ರಮಾದಿತ್ಯ ಇವರು ನಿರ್ಮಿಸಿದ್ದರು; ಆದರೆ ಈ ದೇವಾಲಯವನ್ನು ಮೊಘಲ್ ಬಾದಶಾಹ ಔರಂಗಜೇಬ್‍ನು ೧೬೬೪ ರಲ್ಲಿ ನೆಲಸಮಗೊಳಿಸಿದ್ದನು ಮತ್ತು ಅದರ ಅವಶೇಷಗಳನ್ನು ಬಳಸಿ ಮಸೀದಿಯನ್ನು ನಿರ್ಮಿಸಿದ್ದನು. ಇಂದು ಇದನ್ನೇ ಜ್ಞಾನವಾಪಿ ಮಸೀದಿ ಎಂದು ಕರೆಯಲಾಗುತ್ತದೆ. ಅರ್ಜಿಯನ್ನು ದೇವಾಲಯದ ಭೂಮಿಯಿಂದ ಮಸೀದಿಯನ್ನು ತೆಗೆದುಹಾಕಲು ಮತ್ತು ದೇವಾಲಯದ ನಿಯಂತ್ರಣವನ್ನು ಮಂದಿರ ಟ್ರಸ್ಟಗೆ ಒಪ್ಪಿಸುವಂತೆ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಇದೇ ಅರ್ಜಿಯ ಮೇರೆಗೆ ಈ ನಿರ್ಧಾರವನ್ನು ನೀಡಲಾಗಿದೆ.