ನಕ್ಸಲರೊಂದಿಗೆ ಹೋರಾಡುವಾಗ ಹುತಾತ್ಮರಾದ ಸೈನಿಕರ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಬರೆದಿದ್ದ ಲೇಖಕಿಯ ಬಂಧನ

‘ಸಂಬಳ ಪಡೆಯುವವರು ಕೆಲಸದ ಸಮಯದಲ್ಲಿ ಸಾಯುತ್ತಿದ್ದರೆ, ಅವರು ಹೇಗೆ ಹುತಾತ್ಮರಾಗುತ್ತಾರೆ ?’(ಅಂತೆ)

  • ಸೈನಿಕರು ಹುತಾತ್ಮರಾದ ಬಗ್ಗೆ ಹೀಗೆ ಪ್ರಶ್ನಿಸಿ ಒಂದು ರೀತಿಯಲ್ಲಿ ನಕ್ಸಲರನ್ನು ಮತ್ತು ಭಯೋತ್ಪಾದಕರನ್ನು ಬೆಂಬಲಿಸುವ ಇಂತಹ ರಾಷ್ಟ್ರಘಾತಕ ಮನೋವೃತ್ತಿಯ ಜನರನ್ನು ಮೊದಲು ಸೆರೆಮನೆಯಲ್ಲಿ ಹಾಕುವುದು ಅಗತ್ಯ ! 
  • ಇಂತಹ ಮನಸ್ಥಿತಿ ಇರುವವರನ್ನು ನಕ್ಸಲರು ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಲು ಸೂಕ್ಷ್ಮ ಸ್ಥಳಗಳಿಗೆ ಕಳುಹಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ತಪ್ಪಾಗಲಾರದು!

ರಾಯಪುರ (ಛತ್ತೀಸಗಡ) – ಸಂಬಳ ಪಡೆಯುವ ಕಾರ್ಮಿಕರು ಕೆಲಸದ ಸಮಯದಲ್ಲಿ ಸಾಯುತ್ತಿದ್ದರೆ, ಅವರನ್ನು ‘ಹುತಾತ್ಮರು’ ಎಂದು ಹೇಗೆ ಕರೆಯಬಹುದು ? ಈ ಆಧಾರದ ಮೇಲೆ, ವಿದ್ಯುತ್ ವಿಭಾಗದ ಉದ್ಯೋಗಿಯೊಬ್ಬರು ವಿದ್ಯುತ್ ಆಘಾತದಿಂದ ಸತ್ತರೆ, ಅವರನ್ನು ‘ಹುತಾತ್ಮ’ ಎಂದೂ ಕರೆಯಬೇಕು. ಪ್ರಸಾರ ಮಾಧ್ಯಮದ ಜನರು ಭಾವನಾಶೀಲರಾಗಬಾರದು ಎಂದು ಅಕ್ಷೇಪಾರ್ಹ ಫೇಸ್‌ಬುಕ್ ಪೋಸ್ಟ್ ಮಾಡಿದ್ದಕ್ಕಾಗಿ ಪೊಲೀಸರು ೪೮ ವರ್ಷದ ಲೇಖಕಿ ಶಿಖಾ ಸರಮಾ ಅವರನ್ನು ದೇಶದ್ರೋಹ ಮತ್ತು ಇತರ ಅಪರಾಧಗಳ ಆರೋಪದಡಿಯಲ್ಲಿ ಬಂಧಿಸಿದ್ದಾರೆ.

ಸರಮಾ ಇವರು ಇತ್ತೀಚೆಗೆ ಛತ್ತೀಸಗಡನ ಬಿಜಾಪುರದಲ್ಲಿ ನಕ್ಸಲರೊಂದಿಗಿನ ಚಕಮಕಿಯಲ್ಲಿ ಹತಾತ್ಮರಾದ ೨೨ ಸೈನಿಕರ ಹುತಾತ್ಮದ ಬಗ್ಗೆ ಮೇಲಿನ ಪ್ರಶ್ನೆಯನ್ನು ಎತ್ತಿದ್ದರು. ಗುವಾಹಟಿ ಉಚ್ಚ ನ್ಯಾಯಾಲಯದ ವಕೀಲರಾದ ಉಮಿ ಡೆಕಾ ಬರುವಾ ಮತ್ತು ಕಂಗಕಾನ ಗೋಸ್ವಾಮಿ ಅವರು ಸರಮಾ ವಿರುದ್ಧ ದಿಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಅವರನ್ನು ಬಂಧಿಸಲಾಯಿತು.