ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದಿಂದ ಇಮ್ರಾನ್ ಖಾನ್ ಮೇಲೆ ಟೀಕೆ
|
ಇಸ್ಲಾಮಾಬಾದ (ಪಾಕಿಸ್ತಾನ) – ಅಶ್ಲೀಲತೆಯಿಂದ ಅತ್ಯಾಚಾರ ಅಥವಾ ಲೈಂಗಿಕ ಶೋಷಣೆ ಆಗುತ್ತದೆ. ಈ ಅಶ್ಲೀಲತೆಯು ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಸ್ಕೃತಿಯಿಂದ ಬರುತ್ತದೆ, ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದರು. ಇದರಿಂದಾಗಿ ಪಾಕಿಸ್ತಾನದಲ್ಲೇ ಟೀಕಿಯಾಗುತ್ತಿದೆ. ಖಾನ್ ಪಾಕಿಸ್ತಾನಿ ನಾಗರಿಕರೊಂದಿಗೆ ದೂರವಾಣಿಯ ಮೂಲಕ ಚರ್ಚೆ ಮಾಡಿದರು. ಈ ಸಮಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರದ ಘಟನೆಗಳ ಬಗ್ಗೆ ನಾಗರಿಕರೊಬ್ಬರು ಪ್ರಶ್ನೆ ಕೇಳಿದ್ದರು. ಆಗ ಅವರು ಮೇಲಿನ ಉತ್ತರವನ್ನು ನೀಡಿದರು.
೧. ಇಮ್ರಾನ್ ಖಾನ್ ಅವರ ಹೇಳಿಕೆಯನ್ನು ಟೀಕಿಸಿದ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು, ಜನರ ನಾಯಕರಾಗಿ ಅವರು ಹೇಳಿದ್ದನ್ನು ಒಪ್ಪುವಂತಹದ್ದಲ್ಲ. ಈ ಹೇಳಿಕೆಯಿಂದಾಗಿ ಅತ್ಯಾಚಾರ ಏಕೆ, ಹೇಗೆ ಮತ್ತು ಎಲ್ಲಿ ನಡೆಯುತ್ತದೆ ಎಂಬ ಅರಿವು ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ, ಜೊತೆಗೆ ಸಂತ್ರಸ್ಥೆಯನ್ನೇ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಮಕ್ಕಳು ಸಹ ಅತ್ಯಾಚಾರಕ್ಕೆ ಬಲಿಯಾಗುತ್ತಾರೆ ಎಂಬುದನ್ನು ಸರಕಾರವು ತಿಳಿದುಕೊಳ್ಳಬೇಕು. ಇಮ್ರಾನ್ ಖಾನ್ ಕೂಡಲೇ ಕ್ಷಮೆಯಾಚಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಅತ್ಯಾಚಾರವನ್ನು ತಡೆಗಟ್ಟಲು ಸರಕಾರ ಕಟಿಬದ್ಧತೆಯನ್ನು ತೋರಿಸಬೇಕು ಎಂದು ಹೇಳಿದೆ.
೨. ಕಳೆದ ವರ್ಷ ಪಾಕಿಸ್ತಾನ ಸರಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಪಾಕಿಸ್ತಾನದಲ್ಲಿ ದಿನಕ್ಕೆ ೧೧ ಅತ್ಯಾಚಾರಗಳು ನಡೆಯುತ್ತಿವೆ. ಆದರೆ ವಾಸ್ತವದಲ್ಲಿ ಅತ್ಯಾಚಾರದ ಅಂಕಿಅಂಶಗಳು ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿದೆ ಎಂದು ಹೇಳಲಾಗುತ್ತದೆ.