ಚಾರ್ ಧಾಮ್ ಸಹಿತ ೫೧ ದೊಡ್ಡ ದೇವಾಲಯಗಳನ್ನು ಶೀಘ್ರದಲ್ಲೇ ಸರಕಾರಿಕರಣದಿಂದ ಮುಕ್ತಗೊಳಿಸಲಾಗುವುದು !

ಉತ್ತರಾಖಂಡ ಮುಖ್ಯಮಂತ್ರಿ ತಿರಥಸಿಂಹ ರಾವತ ಅವರಿಂದ ಬಹು ದೊಡ್ಡ ನಿರ್ಧಾರ

ತಿರಥಸಿಂಹ ರಾವತ ಅವರ ಆದರ್ಶವನ್ನು ಪಡೆದು, ಈಗ ದೇಶದ ಇತರ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿನ ಸಾವಿರಾರು ದೇವಾಲಯಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ ಭಕ್ತರಿಗೆ ಒಪ್ಪಿಸಬೇಕು !

ತಿರಥಸಿಂಹ ರಾವತ

ಹರಿದ್ವಾರ (ಉತ್ತರಾಖಂಡ) – ರಾಜ್ಯದ ಮುಖ್ಯಮಂತ್ರಿ ತಿರಥಸಿಂಹ ರಾವತ ಇವರು, ಬದ್ರಿನಾಥ, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಈ ಚಾರ್ ಧಾಮ್ಗಳು ಸೇರಿದಂತೆ ೫೧ ದೊಡ್ಡ ದೇವಾಲಯಗಳನ್ನು ಶೀಘ್ರದಲ್ಲೇ ದೇವಸ್ಥಾನ ಬೋರ್ಡ್‍ನಿಂದ ಅಂದರೆ ಸರಕಾರಿಕರಣದಿಂದ ಮುಕ್ತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರಸಿಂಹ ರಾವತ್ ರು ಈ ದೇವಾಲಯಗಳನ್ನು ಸರಕಾರೀಕರಣಗೊಳಿಸುವ ನಿರ್ಧಾರ ಕೈಗೊಂಡಿದ್ದರು. ತಿರಥಸಿಂಹ ರಾವತ ಇವರು ‘ದೇವಸ್ಥಾನ ಬೋರ್ಡ್ ಬಗ್ಗೆ ಮರುಪರಿಶೀಲಿಸಲಾಗುವುದು’ ಎಂದು ಹೇಳಿದ್ದಾರೆ. ಹರಿದ್ವಾರ ಪ್ರವಾಸದಲ್ಲಿದ್ದಾಗ, ವಿಶ್ವ ಹಿಂದೂ ಪರಿಷತ್ ಕರೆದಿದ್ದ ಸಾಧುಗಳ ಮತ್ತು ಸಂತರ ಸಭೆಯಲ್ಲಿ ಅವರು ಈ ಭರವಸೆಯನ್ನು ನೀಡಿದರು. ಕಳೆದ ತಿಂಗಳು ಚಾರ್ ಧಾಮ್ ದ  ಪುರೋಹಿತರು ಮುಖ್ಯಮಂತ್ರಿ ತಿರಥಸಿಂಹ ರಾವತ್ ಅವರನ್ನು ಭೇಟಿಯಾಗಿ ದೇವಸ್ಥಾನ ಬೋರ್ಡ್‍ಅನ್ನು ವಿಸರ್ಜಿಸುವಂತೆ ಒತ್ತಾಯಿಸಿದ್ದರು. ಈ ಬೋರ್ಡ್‍ಅನ್ನು ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಹ ರಾವತ್ ಅವರು ೨೦೧೯ ರಲ್ಲಿ ರಚಿಸಿದ್ದರು. ಆ ನಂತರ ಪುರೋಹಿತರು ಇದನ್ನು ವಿರೋಧಿಸಿದ್ದರು. ಬಿಜೆಪಿ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಸಹ ಇದನ್ನು ವಿರೋಧಿಸಿದ್ದರು. ಇದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯನ್ನುಸಹ ಸಲ್ಲಿಸಲಾಗಿದೆ.

ತಿರಥಸಿಂಹ ರಾವತ್ ತಮ್ಮ ಮಾತನ್ನು ಮುಂದುವರೆಸುತ್ತಾ,

. ರಾಜ್ಯ ಸರಕಾರವು ಶೀಘ್ರದಲ್ಲೇ ಸಾಧು, ಸಂತ ಮತ್ತು ತೀರ್ಥಕ್ಷೇತ್ರಗಳ ಪುರೋಹಿತರೊಂದಿಗೆ ಈ ಕುರಿತು ಗಂಭೀರ ಚರ್ಚೆ ನಡೆಸಲಿದೆ. ಚಾರ್ ಧಾಮ್ ಸಂಪ್ರದಾಯವು ಶಂಕರಾಚಾರ್ಯರ ಕಾಲದಿಂದಲೂ ನಡೆಯುತ್ತಿದೆ ಮತ್ತು ಅದನ್ನು ಮುಂದುವರಿಸಲಾಗುವುದು.

. ಯಾರ ಹಕ್ಕುಗಳನ್ನು ಯಾರಿಂದಲೂ ಕಸಿದುಕೊಳ್ಳಲಾಗುವುದಿಲ್ಲ. ಪ್ರಾಚೀನ ಕಾಲದಿಂದಲೂ ಚಾರಧಾಮನ ವ್ಯವಸ್ಥೆ ಮಾಡಲಾಗಿದೆ ಮತ್ತು ಅದನ್ನು ಮುಂದುವರಿಸಲಾಗುವುದು. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಯಾರ ಅಧಿಕಾರಗಳನ್ನು ಮೊಟಕುಗೊಳಿಸುವುದಿಲ್ಲ. ಈ ಪ್ರಕರಣದಲ್ಲಿ ನನ್ನಬಳಿ ಇರುವ ಅಧಿಕಾರಕ್ಕನುಸಾರ ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಲಾಗುವುದು. ಸಂತರನ್ನು ನಿರಾಶೆಗೊಳಿಸುವುದಿಲ್ಲ. ಎಂದು ಹೇಳಿದ್ದಾರೆ.