ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಸಹಿತ ೧೧ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಷೇಧ ಹೇರಿದ ಶ್ರೀಲಂಕಾ

ಜಿಹಾದಿ ಭಯೋತ್ಪಾದನೆ ವಿರುದ್ಧ ಧೈರ್ಯದಿಂದ ಕ್ರಮ ಕೈಗೊಳ್ಳುತ್ತಿರುವ ಶ್ರೀಲಂಕಾ ಸರಕಾರದ ಕ್ರಮವು ಶ್ಲಾಘನೀಯವಾಗಿದೆ !

೨೦೧೯ ರಲ್ಲಿ ಶ್ರೀಲಂಕಾದಲ್ಲಿ ನಡೆದ ಜಿಹಾದಿ ಆತ್ಮಾಹುತಿ ದಾಳಿ

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾ ಸರಕಾರವು ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಸೇರಿದಂತೆ ಇತರ ಒಂಬತ್ತು ಜಿಹಾದಿ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಷೇದವನ್ನು ಹೇರಿದೆ. ೨೦೧೯ ರಲ್ಲಿ ಶ್ರೀಲಂಕಾದಲ್ಲಿ ನಡೆದ ಜಿಹಾದಿ ಆತ್ಮಾಹುತಿ ದಾಳಿಯಲ್ಲಿ ಒಟ್ಟು ೨೭೦ ಜನರು ಸಾವನ್ನಪ್ಪಿದ್ದರು.

ಇದರಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ‘ನ್ಯಾಷನಲಿಸ್ಟ್ ತೌಹಿದ್ ಜಮಾತ್’ ಈ ಜಿಹಾದಿ ಸಂಘಟನೆಯ ಸಹಭಾಗವಿತ್ತು. ಅನಂತರ ಶ್ರೀಲಂಕಾದ ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನಾ ಅವರು ಒಂದು ಸಮಿತಿಯನ್ನು ನೇಮಿಸಿ ಈ ಸಂಘಟನೆಯನ್ನು ನಿಷೇಧಿಸಲು ಶಿಫಾರಸು ಮಾಡಿದ್ದರು.