ತೃಣಮೂಲ ಕಾಂಗ್ರೆಸ್‍ಗೆ ಮತ ಚಲಾಯಿಸುವಂತೆ ಮುಸಲ್ಮಾನರಿಗೆ ಕರೆ ನೀಡಿದರೆಂಬ ಕಾರಣದಿಂದ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ

ಬಂಗಾಲ ವಿಧಾನಸಭಾ ಚುನಾವಣೆ

ಮಮತಾ ಬ್ಯಾನರ್ಜಿ

ನವದೆಹಲಿ : ಬಂಗಾಳ ವಿಧಾನಸಭಾ ಚುನಾವಣೆಯ ಪ್ರಸಾರದ ಸಮಯದಲ್ಲಿ ತೃಣಮೂಲ ಮುಸಲ್ಮಾನರಿಗೆ ಸಂಘಟಿತರಾಗಿ ತೃಣಮೂಲ ಕಾಂಗ್ರೆಸ್‍ಗೆ ಮತ ಚಲಾಯಿಸಿ ಎಂದು ಕರೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕಾರಣ ತೋರಿಸಿ ಎಂದು ನೋಟಿಸ್ ನೀಡಿದೆ. ಹಾಗೂ ಮುಂದಿನ ೪೮ ಗಂಟೆಗಳೊಳಗೆ ನೋಟಿಸ್ ಗೆ  ಉತ್ತರಿಸಲು ಕೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ಅವರ ಕರೆಯ ಬಗ್ಗೆ ಟೀಕಿಸಿದ್ದರು. ‘ಹಿಂದೂ ಸಂಘಟಿತರಾಗಬೇಕು ಹಾಗೂ ಬಿಜೆಪಿಗೆ ಮತ ನೀಡಿ’ ಎಂದು ಕರೆ ನೀಡಿದ್ದರೆ ಚುನಾವಣಾ ಆಯೋಗವು ನಮಗೆ ನೋಟಿಸ್ ನೀಡುತ್ತಿತ್ತು’ ಎಂದು ಮೋದಿಯವರು ಒಂದು ಪ್ರಸಾರ ಸಭೆಯಲ್ಲಿ ಹೇಳಿದ್ದರು.