‘ಭಗವಾನ್ ಅಯ್ಯಪ್ಪ ಮತ್ತು ಎಲ್ಲ ದೇವತೆಗಳೂ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದೊಂದಿಗೆ ಇದ್ದಾರಂತೆ

ಶಬರಿಮಲೆ ದೇವಸ್ಥಾನದ ಪ್ರಾಚೀನ ಸಂಪ್ರದಾಯದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪಕ್ಷವಹಿಸಿದ್ದ ಸಿಪಿಐ (ಎಂ) ಸರಕಾರಕ್ಕೆ ಎಂದಾದರೂ ದೇವತೆಗಳ ಆಶೀರ್ವಾದ ಸಿಗುವುದೇ ? ಈಗ ಚುನಾವಣೆಯನ್ನು ಗೆಲ್ಲಲು ಹಿಂದೂಗಳ ಮತಗಳನ್ನು ಪಡೆಯುವ ಸಲುವಾಗಿ, ‘ದೇವರು ಇಲ್ಲ’ ಎಂದು ಹೇಳುವ ನಾಸ್ತಿಕ ಸಿಪಿಐ (ಎಂ) ಹಿಂದೂಗಳ ದೇವತೆಗಳ ನೆನಪಾಗಿದೆ, ಎಂಬುದೇ ಇದರಿಂದ ಗಮನಕ್ಕೆ ಬರುತ್ತದೆ !

ತಿರುವನಂತಪುರಂ (ಕೇರಳ) – ಶಬರಿಮಲೆಯಲ್ಲಿ ಭಗವಾನ್ ಅಯ್ಯಪ್ಪ ಸೇರಿದಂತೆ ಎಲ್ಲ ದೇವಿ ಮತ್ತು ದೇವತೆಗಳು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದೊಂದಿಗೆ ಇದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ವಿಜಯನ್ ಅವರ ಹೇಳಿಕೆಯನ್ನು ಯಾವುದೇ ಭಕ್ತರು ನಂಬುವುದಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿ ತಿಳಿಸಿದ್ದಾರೆ.