ಹಿಂದೂ ರಾಷ್ಟ್ರ ಸ್ಥಾಪನೆಗೆ ‘ಹಿಂದ ಸಾಮ್ರಾಜ್ಯ ಪಾರ್ಟಿ’ ಎಂಬ ರಾಜಕೀಯ ಪಕ್ಷ ಸ್ಥಾಪನೆ!
ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿಶಂಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದ್ ಸಾಮ್ರಾಜ್ಯ ಪಾರ್ಟಿ’ ಎಂಬ ಪಕ್ಷವು ಅಧಿಕೃತವಾಗಿ ಸ್ಥಾಪನೆಯಾಗಿದೆ ಎಂದು ಘೋಷಿಸಲಾಯಿತು.
ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿಶಂಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದ್ ಸಾಮ್ರಾಜ್ಯ ಪಾರ್ಟಿ’ ಎಂಬ ಪಕ್ಷವು ಅಧಿಕೃತವಾಗಿ ಸ್ಥಾಪನೆಯಾಗಿದೆ ಎಂದು ಘೋಷಿಸಲಾಯಿತು.
ಸ್ಥಳೀಯ ಬಿಷ್ಟಪುರ ಗುರುದ್ವಾರ ಪ್ರದೇಶದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಚಿತ್ರವನ್ನು ಹಾಕಿದ್ದರಿಂದ ಉದ್ವಿಗ್ನತೆ ಉಂಟಾಯಿತು. ಈ ಚಿತ್ರವನ್ನು ದೇವಸ್ಥಾನ ಸಮಿತಿಯ ಓರ್ವ ಸಂಚಾಲಕರು ಹಾಕಿದ್ದರು.
ಇಲ್ಲಿಯ ನಿವಾಸಿ ಧಾನತಾ ಪ್ರದೇಶದಲ್ಲಿ ಪಾಕಿಸ್ತಾನದಿಂದ ಬಂದಿರುವ ಹಿಂದೂ ವಲಸಿಗನ ಒಂದು ವಿಡಿಯೋ ಪ್ರಸಾರಿತ ಆಗುತ್ತಿದೆ. ಇದರಲ್ಲಿ ತ್ರಿಲೋಕ ಚಂದ ರಾಣಾ ಎಂಬ ಹೆಸರಿನ ಪಾಕಿಸ್ತಾನಿ ಹಿಂದೂ ವ್ಯಕ್ತಿಯು ತನ್ನ ಇಡೀ ಕುಟುಂಬ ಸಹಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ. ರಾಣಾನು ತನ್ನ ಕುಟುಂಬ ದವರ ಮೇಲೆ ಅನ್ಯಾಯವಾಗುತ್ತಿದೆ ಎಂದು ಆರೋಪ ಮಾಡಿದ್ದಾನೆ.
ದೆಹಲಿಯಲ್ಲಿ ನೂರಕ್ಕೂ ಹೆಚ್ಚು ನೈಜೀರಿಯಾದ ನಾಗರಿಕರು ಕಾನೂನುಬಾಹಿರವಾಗಿ ವಾಸ್ತವ್ಯ ಮಾಡುತ್ತಿದ್ದಾರೆ. ಇವರುಗಳಲ್ಲಿ ಕೆಲವರು ವೈದ್ಯಕೀಯ, ಪ್ರವಾಸೀ ಇತ್ಯಾದಿ ವೀಸಾ ತೆಗೆದುಕೊಂಡು ಭಾರತದಲ್ಲಿ ಬಂದಿದ್ದರು. ಮತ್ತು ವೀಸಾದ ಅವಧಿ ಮುಗಿದ ನಂತರವೂ ಅವರು ದೆಹಲಿಯಲ್ಲಿಯೇ ವಾಸಿಸುತ್ತಿದ್ದಾರೆ.
ಪ್ರಧಾನಿ ಮೋದಿಯವರು ‘ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ’ಯ ಹೆಸರನ್ನು ಬದಲಾಯಿಸಿ ‘ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಮರುನಾಮಕರಣ ಮಾಡಿವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದರು.
ಸ್ಥಳೀಯ ಅಲಿಗಂಜ್ ಹನುಮಾನ್ ದೇವಸ್ಥಾನ ಮತ್ತು ಮನಕಾಮೇಶ್ವರ ದೇವಸ್ಥಾನ ಸೇರಿದಂತೆ ನಗರದ ಇತರ ದೇವಸ್ಥಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಶಕೀಲ್ ಎಂಬ ಜಿಹಾದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೈನಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಎಂಬುದರ ಅರ್ಥ ಅವರ ಮನೋಧೈರ್ಯ ಹೆಚ್ಚಿಸಲು ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಹಾಗೂ ಆಡಳಿತ ಕಡಿಮೆ ಬೀಳುತ್ತಿದೆ, ಎಂಬುದು ಗಮನಕ್ಕೆ ಬರುತ್ತದೆ !
ಈ ಸಾವಿನ ಹಿಂದಿನ ನಿರ್ದಿಷ್ಟವಾದ ಕಾರಣಗಳೇನು? ಒಂದು ವೇಳೆ ದೌರ್ಜನ್ಯದಿಂದ ಮೃತ್ಯುವಾಗಿದ್ದಲ್ಲಿ, ಸಂಬಂಧಪಟ್ಟವರ ಮೇಲೆ ಯಾವ ಕ್ರಮ ಕೈ ಗೊಳ್ಳಲಾಯಿತು ಎಂಬ ಮಾಹಿತಿಯನ್ನು ಸಹ ಕೇಂದ್ರ ಸರಕಾರವು ಜನತೆಗೆ ನೀಡಬೇಕು !
ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ. ಯು) ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ದಿವಂಗತ ನೇತಾರ ಬಿ.ಎಂ.ಇದಿನಬ್ಬಾ ಇವರ ಮಾಸ್ತಿಕಟ್ಟೆಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದೆ.
ಮೂವರು ಆರೋಪಿಗಳು ಕರಖಿಯಾವ ಎಂಬ ಊರಿನಲ್ಲಿ ಲಾಲಜೀ ವಿಶ್ವಕರ್ಮ ಎಂಬ ಹೆಸರಿನ ಹಿಂದೂವಿನ ಮನೆಗೆ ಬಂದಿದ್ದರು. ಅವರು ಕುಟುಂಬದವರಿಗೆ ಒಳ್ಳೆಯ ಜೀವನ, ಮಕ್ಕಳಿಗೆ ಶಿಕ್ಷಣ ಹಾಗೂ ಆಹಾರದ ವ್ಯವಸ್ಥೆ ಇತ್ಯಾದಿಯ ಆಮಿಷ ತೋರಿಸಿದ್ದರು.