‘ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ’ ಇನ್ನು ‘ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ’ !

ಪ್ರಧಾನಿ ನರೇಂದ್ರ ಮೋದಿಯವರಿಂದ ಘೋಷಣೆ !

ನೆಹರು-ಗಾಂಧಿ ಮನೆತನವು ದೇಶಕ್ಕೆ ದೊಡ್ಡ ಹಾನಿ ಮಾಡಿತು. ಇದನ್ನು ಗಮನದಲ್ಲಿಟ್ಟುಕೊಂಡು, ಕೇವಲ ಪ್ರಶಸ್ತಿ ಮಾತ್ರವಲ್ಲ, ಇವರ ಹೆಸರಿನಲ್ಲಿರುವ ಯೋಜನೆಗಳು ಅಥವಾ ಇತರ ಸ್ಥಳಗಳನ್ನೂ ಬದಲಾಯಿಸಬೇಕೆಂದು ರಾಷ್ಟ್ರಪ್ರೇಮಿಗಳು ಅಪೇಕ್ಷೆ ಇಟ್ಟುಕೊಂಡಿದ್ದಾರೆ !

ನವ ದೆಹಲಿ : ಪ್ರಧಾನಿ ಮೋದಿಯವರು ‘ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ’ಯ ಹೆಸರನ್ನು ಬದಲಾಯಿಸಿ ‘ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಮರುನಾಮಕರಣ ಮಾಡಿವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರು ಟ್ವೀಟ್ ಮಾಡುತ್ತಾ, ದೇಶದ ಗೌರವವನ್ನು ಹೆಚ್ಚಿಸಲು ಅನೇಕ ಕ್ಷಣಗಳನ್ನು ಅನುಭವಿಸುತ್ತಿರುವಾಗ ಜನರ ಕೋರಿಕೆಯ ಮೇರೆಗೆ ‘ಖೇಲ್ ರತ್ನ ಪ್ರಶಸ್ತಿ’ಗೆ ಭಾರತದ ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನಚಂದ್ ಅವರ ಹೆಸರನ್ನು ನೀಡಲಾಗಿದೆ.

ಮೇಜರ್ ಧ್ಯಾನಚಂದ್ ತಮ್ಮ ವೃತ್ತಿ ಜೀವನದಲ್ಲಿ ೧೦೦೦ ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದರು. ೧೯೫೬ ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.