Pramod Muthalik Press Conference : ‘ಲವ್ ಜಿಹಾದ್’ ವಿರುದ್ಧ ಹೋರಾಡಲು ಹೆಣ್ಣು ಮಕ್ಕಳಿಗೆ ತ್ರಿಶೂಲ ದೀಕ್ಷೆ ! – ಪ್ರಮೋದ್ ಮುತಾಲಿಕ್, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮ ಸೇನೆ

ಬೆಂಗಳೂರು – ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ 100 ಕಡೆ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ‘ಲವ್ ಜಿಹಾದ್’ ಪುಸ್ತಕದ ಎರಡನೇ ಆವೃತ್ತಿ ಬಿಡುಗಡೆ ಮಾಡಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ‘ದೇಶದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಆಕರ್ಷಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ. 2019 ರಿಂದ 2021 ರವರೆಗಿನ 3 ವರ್ಷಗಳ ಅವಧಿಯಲ್ಲಿ 13 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2 ಲಕ್ಷ 51 ಸಾವಿರ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರು ಸಿಲುಕಿದ್ದಾರೆ.

ಶ್ರೀ. ಮುತಾಲಿಕ್ ಅವರು ಮಾತು ಮುಂದುವರೆಸುತ್ತಾ,

1.  ಶ್ರೀರಾಮ ಸೇನೆ 4 ಸಾವಿರ 700 ಮಹಿಳೆಯರನ್ನು ರಕ್ಷಿಸಿದೆ.

2.  ಮಾರ್ಚ್ 30 ಮತ್ತು ಏಪ್ರಿಲ್ 6 ರಂದು ನಡೆಯಲಿರುವ ಯುಗಾದಿ ಮತ್ತು ಶ್ರೀರಾಮ ನವಮಿ ಹಲಾಲ್ ಮುಕ್ತವಾಗಿ ಆಚರಿಸಬೇಕು.

3. ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕು.

4. ರಾಜ್ಯದ ಕಾಂಗ್ರೆಸ್ ಸರಕಾರವು ಸರಕಾರಿ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ಶೇ.4 ರಷ್ಟು ಮೀಸಲಾತಿ ನೀಡಿರುವುದು ಖಂಡನೀಯ. ಇದರ ವಿರುದ್ಧ ಶ್ರೀರಾಮ ಸೇನೆಯು ಬೆಂಗಳೂರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.