ಬೆಂಗಳೂರಿನಲ್ಲಿ ಇಫ್ತಾರ್ ಔತಣಕೂಟ ನೀಡಿದ ನಂತರ ಮೀನಾಕ್ಷಿ ಶ್ರೀನಿವಾಸ ಅವರ ಖೇದಕರ ಹೇಳಿಕೆ
ಬೆಂಗಳೂರು – ನಮ್ಮ ದೇಶದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರತಿದಿನ ದ್ವೇಷ ಹರಡುವ ಕೆಲಸವನ್ನು ಮಾಡಲಾಗುತ್ತಿದೆ. ನಾವೆಲ್ಲರೂ ಮನುಷ್ಯರಾಗಿದ್ದೇವೆ. ಪ್ರೀತಿಯಿಂದ ಒಟ್ಟಿಗೆ ಇದ್ದು ದೇಶವನ್ನು ಕಟ್ಟಬೇಕು. ಸಮಾಜದಲ್ಲಿ ದ್ವೇಷ ಹರಡುವವರು ಕಡಿಮೆ ಇದ್ದರೂ ಅದರ ಪರಿಣಾಮಗಳು ದೊಡ್ಡದಾಗಿರುತ್ತವೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಮುಂದೆ ಸಾಗಿ ಸಮಾಜದಲ್ಲಿ ಪ್ರೀತಿಯ ಸಂದೇಶವನ್ನು ನೀಡಬೇಕು, ಎಂದು ತಮ್ಮನ್ನು ಶ್ರೀರಾಮನ ಭಕ್ತೆ ಎಂದು ಕರೆದುಕೊಳ್ಳುವ ಮೀನಾಕ್ಷಿ ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ಆಯೋಜಿಸುವಾಗ ಹೇಳಿದ್ದಾರೆ.
ಇಲ್ಲಿನ ‘ಸೇಂಟ್ ಮಾರ್ಕ್ಸ್ ರಸ್ತೆ’ಯಲ್ಲಿರುವ ಆಶೀರ್ವಾದ ಸಭಾಂಗಣದಲ್ಲಿ ‘ದೇಶದಲ್ಲಿ ಮುಸ್ಲಿಮರ ವಿರುದ್ಧ ತಥಾಕಥಿತವಾಗಿ ನಡೆಯುತ್ತಿರುವ ದ್ವೇಷಪೂರಿತ ಹೇಳಿಕೆಗಳನ್ನು ವಿರೋಧಿಸುವ ಉದ್ದೇಶದಿಂದ ಮೂಲತಃ ತಮಿಳುನಾಡಿನವರಾದ ಮೀನಾಕ್ಷಿ ಶ್ರೀನಿವಾಸ ಅವರು ಮೂರನೇ ಬಾರಿಗೆ ‘ಅಮ್ಮನ ಇಫ್ತಾರ್ ಕೂಟ’ಯನ್ನು ಆಯೋಜಿಸಿದ್ದರು. ಇದರಲ್ಲಿ ಹಿಂದೂ-ಮುಸ್ಲಿಮರು ಸೇರಿದಂತೆ ಕ್ರೈಸ್ತ ಸಮುದಾಯದ ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮೀನಾಕ್ಷಿ ಶ್ರೀನಿವಾಸ್ ಅವರು ಮಾತನಾಡಿ, ಇದು ನಮ್ಮ ಕುಟುಂಬವು ಮುಸ್ಲಿಂ ಸಹೋದರರಿಗಾಗಿ ಆಯೋಜಿಸಿದ ಮೂರನೇ ಇಫ್ತಾರ್ ಕೂಟವಾಗಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಈ ರೀತಿ ಹೇಳಿಕೆ ನೀಡುವ ಮತ್ತು ಇಫ್ತಾರ್ ಆಯೋಜಿಸುವ ಮೀನಾಕ್ಷಿ ಶ್ರೀನಿವಾಸ್ ಅವರು ಒಂದೋ ಅಜ್ಞಾನಿಗಳಾಗಿರಬಹುದು ಅಥವಾ ಹಿಂದೂ ವಿರೋಧಿ ಸಂಚಿಗೆ ಬಲಿಯಾಗಿರಬಹುದು ಎಂದು ಯಾರಾದರೂ ಭಾವಿಸಿದರೆ ಅದರಲ್ಲಿ ತಪ್ಪೇನು ? |