ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರಕಾರ… ನಿಮ್ಮಪ್ಪನ ಸರಕಾರ ಅಲ್ಲ !’ – ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಕಾರ್ಯಕ್ರಮದ ವೇದಿಕೆಯಿಂದಲೇ ಭಾಜಪ ಕಾರ್ಯಕರ್ತರಿಗೆ ಬೆದರಿಕೆ

ಬೆಂಗಳೂರು – ‘ಇದು ಸಿದ್ದರಾಮಯ್ಯನವರ ಕಾರ್ಯಕ್ರಮ, ನಿಮ್ಮಪ್ಪಂದಲ್ಲ, ಸುಮ್ಮನೆ ಕೂತ್ಕೊಳ್ಳಿ, ಇಲ್ಲದಿದ್ದರೆ ಎದ್ದು ಹೋಗಿ’ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಭಾಜಪ ಕಾರ್ಯಕರ್ತರನ್ನು ಉದ್ದೇಶಿಸಿ ಬೆದರಿಕೆ ಹಾಕಿದ್ದಾರೆ. ಇಲ್ಲಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ‘ಕೈವಾರ ತಾತಯ್ಯ ಯೋಗಿನಾರಾಯಣ ಯತೀಂದ್ರ’ ಅವರ 299ನೇ ಜಯಂತಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಭಾಜಪ ಸಂಸದ ಪಿ.ಸಿ. ಮೋಹನ್ ಕೂಡ ವೇದಿಕೆಯಲ್ಲಿದ್ದರು. ಈ ವಿಚಾರವಾಗಿ ಇಬ್ಬರೂ ನಾಯಕರ ನಡುವೆ ವಾಗ್ವಾದ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

1. ಬೆಂಗಳೂರಿನ ಈ ಸರಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಭಾಜಪ ಎರಡೂ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರದೀಪ ಈಶ್ವರ್ ಅವರ ಹೇಳಿಕೆಗೆ ಭಾಜಪ ಕಾರ್ಯಕರ್ತರು ಪ್ರತಿಕ್ರಿಯೆ ನೀಡಿದರು. ಇದರಿಂದ ಇಡೀ ಕಾರ್ಯಕ್ರಮ ರಣರಂಗದಂತಾಯಿತು.

2. ವೇದಿಕೆಯಲ್ಲಿದ್ದ ಭಾಜಪ ಸಂಸದ ಪಿ.ಸಿ. ಮೋಹನ್ ಮಧ್ಯಪ್ರವೇಶಿಸಿ, ‘ಪ್ರದೀಪ್ ಈಶ್ವರ್ ಜೀ, ಇದು ಸಿದ್ದರಾಮಯ್ಯನವರ ಕಾರ್ಯಕ್ರಮವಾಗಿದ್ದರೆ, ನಾನು ಭಾಜಪ ಸಂಸದನಾಗಿ ಇಲ್ಲಿ ಇರಬೇಕೋ ಬೇಡವೋ? ಉತ್ತರಿಸಿ!’ ಎಂದು ನೇರವಾಗಿ ಪ್ರಶ್ನಿಸಿದರು.

3. ಈ ಹೇಳಿಕೆಗಳಿಂದ ಕಾರ್ಯಕ್ರಮದಲ್ಲಿ ಭಾರೀ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಹಾಜರಿದ್ದ ನಾಗರಿಕರು ಮತ್ತು ಆಯೋಜಕರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

4. ಆದರೂ ಪ್ರದೀಪ್ ಈಶ್ವರ್ ಸುಮ್ಮನಾಗಲಿಲ್ಲ. ಅವರು ಭಾಜಪ ವಿರುದ್ಧ ಟೀಕೆ ಮಾಡಿ, ‘ನೀವು ನಿಮ್ಮ ಪಕ್ಷವನ್ನು ಹೊಗಳಬಹುದಾದರೆ, ನಾವು ನಮ್ಮ ಪಕ್ಷವನ್ನು ಏಕೆ ಹೊಗಳಬಾರದು?’ ಎಂದು ಪ್ರಶ್ನಿಸಿದರು.

5. ಭಾಜಪ ಸಂಸದ ಪಿ.ಸಿ. ಮೋಹನ್ ಅವರು ಭಾಜಪದ ಕೊಡುಗೆಯನ್ನು ಹೊಗಳಿದ್ದರಿಂದ ಈ ವಿವಾದ ಉಂಟಾಯಿತು ಎಂದು ಹೇಳಲಾಗುತ್ತಿದೆ. ಕಾರ್ಯಕ್ರಮವನ್ನು ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂಬ ಅಂಶವನ್ನು ಮುಂದಿಟ್ಟು ಪ್ರದೀಪ್ ಈಶ್ವರ್ ಕಾರ್ಯಕ್ರಮದಿಂದ ಹೊರನಡೆದರು.

ಸಂಪಾದಕೀಯ ನಿಲುವು

  • ಭಾರತದ ಅತಿದೊಡ್ಡ ರಾಜಕೀಯ ಪಕ್ಷದ(ಭಾಜಪ) ಕಾರ್ಯಕರ್ತರೊಂದಿಗೆ ಈ ರೀತಿ ಸಂವಹನ ನಡೆಸುವ ಶಾಸಕರು ಸಾಮಾನ್ಯ ಜನರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ಊಹಿಸದಿರುವುದೇ ಲೇಸು!
  • ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ಸಿಗರಿಗೆ ಎಷ್ಟು ಅಹಂಕಾರ ಬರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ!