Udupi Illegal Rice Transport : ಸರಕಾರಿ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಲಂದರ್ ಶಫಿ ಮತ್ತು ಉಬೈದುಲ್ಲಾ ವಿರುದ್ಧ ಪ್ರಕರಣ ದಾಖಲು !

 ಉಡುಪಿ (ಕರ್ನಾಟಕ) ಘಟನೆ

 

ಉಡುಪಿ – ನಗರದ ಕಾಪು ಪೇಟೆಯಲ್ಲಿ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ‘ಅನ್ನಭಾಗ್ಯ ಯೋಜನೆ’ಯ 250 ಕೆಜಿ ಅಕ್ಕಿಯನ್ನು ತಹಶೀಲ್ದಾರ್ ಡಾ. ಪ್ರತಿಭಾ ಆರ್. ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿಗಳಾದ ಕಲಂದರ್ ಶಫಿ ಮತ್ತು ಉಬೈದುಲ್ಲಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಯಾಣಿಕರ ರಿಕ್ಷಾದಲ್ಲಿ ಸಾಗಿಸುತ್ತಿದ್ದ 6 ಚೀಲಗಳಲ್ಲಿನ 250 ಕೆಜಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ಕಿಯ ಅಂದಾಜು ಮೌಲ್ಯ 8 ಸಾವಿರ 500 ರೂಪಾಯಿ ಇದೆ.

ಕಲಂದರ್ ಶಫಿ ಮತ್ತು ಉಬೈದುಲ್ಲಾ ಅವರನ್ನು ವಿಚಾರಿಸಿದಾಗ, ರೇಷನ್ದಾರರಿಂದ 20 ರೂಪಾಯಿ ದರದಲ್ಲಿ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದರು.

‘ಅನ್ನ ಭಾಗ್ಯ ಯೋಜನೆ’ ಎಂದರೇನು?

‘ಅನ್ನ ಭಾಗ್ಯ ಯೋಜನೆ’ ಕರ್ನಾಟಕ ಸರಕಾರದ ಮಹತ್ವದ ಯೋಜನೆಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯಡಿ ಬಡವರಿಗೆ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಧಾನ್ಯ ನೀಡಲಾಗುತ್ತದೆ.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧದ ಪ್ರತಿಯೊಂದು ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿದ್ದಾರೆ. ಆದರೂ ಕಾಂಗ್ರೆಸ್ ಅವರನ್ನೇ ಓಲೈಸುತ್ತದೆ. ಇದರಿಂದ ಕಾಂಗ್ರೆಸ್ ದೇಶವನ್ನು ‘ಅಪರಾಧಿಗಳ ತಾಣ’ ವನ್ನಾಗಿ ಮಾಡಲು ಹೊರಟಿದೆ ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು!