ಚಲಿಸುತ್ತಿರುವ ರೈಲಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ದಂಪತಿಗಳನ್ನು ಪೊಲೀಸರ ಸ್ವಾಧೀನ !

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕಾ ಕಾನುನಗೋ ಅವರ ಶ್ಲಾಘನೀಯ ಕ್ರಮ !

ದೇಶದ್ರೋಹದ ಕಾನೂನು ರದ್ದುಗೊಳಿಸಲು ಸಾಧ್ಯವಿಲ್ಲ ! – ಕಾನೂನು ಆಯೋಗ

ಕೇಂದ್ರ ಸರಕಾರವು ದೇಶದ್ರೋಹದ ಕಾನೂನಿನಲ್ಲಿ ಸುಧಾರಣೆಯನ್ನು ಮಾಡಲು ಸಿದ್ಧತೆಯನ್ನು ಮಾಡುತ್ತಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರಕಾರ ಪ್ರಸ್ತಾವನೆಯನ್ನು ಮಂಡಿಸಬಹುದಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಕಥಿತ ಹಕ್ಕುಗಳಿಗಾಗಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಹಿಂದೂ ಕುಟುಂಬಗಳನ್ನು ಗಡಿಪಾರು ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪ

ನೇಪಾಳದ ಪ್ರಧಾನಿ ಪ್ರಚಂಡ ಭಾರತ ಪ್ರವಾಸ !

ನೇಪಾಳದ ಪ್ರಧಾನಮಂತ್ರಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಭಾರತದ ಪ್ರವಾಸದಲ್ಲಿದ್ದು, ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಹೈದರಾಬಾದ್ ಹೌಸ್ ನಲ್ಲಿ ಉಭಯ ನಾಯಕರ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ. ಇದರಲ್ಲಿ ಎರಡೂ ದೇಶಗಳಲ್ಲಿನ ಗಡಿ ವಿವಾದ ಬಗ್ಗೆಯು ಚರ್ಚೆಯಾಗಬಹುದು.

ಕಳೆದ ವಾರದಲ್ಲಿ ದರೋಡೆಕೋರರು ಮತ್ತು ಕಳ್ಳಸಾಗಾಣಿಕೆದಾರರು ೫೦ ಸಾವಿರ ಕೋಟಿ ರೂಪಾಯಿಗಳ ೨ ಸಾವಿರ ರೂಪಾಯಿಯ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ !

೨ ಸಾವಿರ ರೂಪಾಯಿ ನೋಟುಗಳ ಕುರಿತ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ತಕ್ಷಣವೇ ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಶವದ ಮೇಲೆ ಬಲಾತ್ಕಾರ ಮಾಡಿರುವವರ ಮೇಲೆ ಕಠಿಣ ಶಿಕ್ಷೆಯೊಂದಿಗೆ ಕಾನೂನನ್ನು ರೂಪಿಸಿ ! – ಕರ್ನಾಟಕ ಉಚ್ಚ ನ್ಯಾಯಾಲಯ

ಕಾನೂನಿನಲ್ಲಿರುವ ಕೊರತೆಗಳಿಂದ ಆರೋಪಿ ಬಲಾತ್ಕಾರದ ಅಪರಾಧದಿಂದ ಮುಕ್ತ !

ಹಿಂದೂಗಳ ದೇವಾಲಯಗಳಲ್ಲಿ ಸ್ವಚ್ಛತೆ ಇರುವುದಿಲ್ಲ ! – ಕೇಂದ್ರ ಸಚಿವ ನಿತಿನ್ ಗಡಕರಿ

ಶುಚಿತ್ವ ಇಲ್ಲದ ಸ್ಥಳದಲ್ಲಿ ಮನುಷ್ಯನಿಗೆ ಒಳ್ಳೆಯದೆನಿಸುವುದಿಲ್ಲ, ಅಲ್ಲಿ ದೇವರಿಗೆ ಒಳ್ಳೆಯದೆನಿಸುತ್ತದೆಯೇ ? ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳು ದೇವಸ್ಥಾನಗಳಲ್ಲಿ ಸ್ವಚ್ಛತೆ ಕಾಪಾಡಬೇಕು ! ಇದಕ್ಕಾಗಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅಗತ್ಯ !

ದೆಹಲಿಯಲ್ಲಿನ ಪಾಕಿಸ್ತಾನದ ಹೈಕಮೀಷನರನ ಶಾಲೆ ಬಂದ್

ಪಾಕಿಸ್ತಾನದ ಹೈಕಮೀಷನರ ಶಾಲೆಯನ್ನು ಮುಚ್ಚಲಾಗಿದೆ. ಶಾಲೆಯ ಸಿಬ್ಬಂದಿಗಳಿಗೆ 3 ವರ್ಷಗಳಿಂದ ವೇತನವನ್ನು ನೀಡದೇ ಇರುವುದರಿಂದ ಶಾಲೆಯನ್ನು ಬಂದ್ ಮಾಡುವ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ.

ಓ ಟಿ ಟಿ ವೇದಿಕೆಯಲ್ಲಿ ಚಲನಚಿತ್ರ, ವೆಬ್ ಸರಣಿ ಮುಂತಾದರ ಪ್ರದರ್ಶನದ ಸಮಯದಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ನೀಡುವುದು ಕಡ್ಡಾಯ ! – ಕೇಂದ್ರ ಸರಕಾರದ ಆದೇಶ

ಓ ಟಿ ಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಪ್ರಸಾರವಾಗುವ ಚಲನಚಿತ್ರ, ವೆಬ್ ಸರಣಿ ಹಾಗೂ ಇತರ ಚಿತ್ರಣಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ನೀಡುವಂತೆ ಕೇಂದ್ರ ಸರಕಾರ ಆದೇಶ ನೀಡಿದೆ. ಇಂತಹ ಎಚ್ಚರಿಕೆ ನೀಡದೆ ಇದ್ದರೆ ಸಂಬಂಧಿತ ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಕೇಂದ್ರ ಸರಕಾರ ಹೇಳಿದೆ.

ಬ್ರಿಜ್‌ಭೂಷಣ ಶರಣ್ ಸಿಂಗ್ ಅವರಿಗೆ ಸಂಬಂಧಿಸಿದ ತನಿಖೆ ಇನ್ನೂ ನಡೆಯುತ್ತಿದೆ ! – ನವದೆಹಲಿ ಪೊಲೀಸ್

ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ ಶರಣ್ ಸಿಂಗ್ ವಿರುದ್ಧ ಕಳೆದ ಹಲವು ದಿನಗಳಿಂದ ಜಂತರ್ ಮಂತರ್‌ನಲ್ಲಿ ದೇಶದ ಕುಸ್ತಿಪಟುಗಳು ಪ್ರತಿಭಟನೆ ಮಾಡುತ್ತಿದ್ದಾರೆ.