ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ರಾಜೇಂದ್ರ ಪಾಲ್ ಗೌತಮ್ ರಿಂದ ಹಿಂದೂ ವಿರೋಧಿ ಹೇಳಿಕೆ !
ನವ ದೆಹಲಿ – ನಿಮಗೆ ಹಾನಿ ಮಾಡುವ ವಿಷಯಗಳನ್ನು ನಂಬಬೇಡಿ. ನೀವು ಹೇಳಿ, ದೇವಸ್ಥಾನಕ್ಕೆ ಹೋಗಿದಕ್ಕೆ ನಮ್ಮ ಜನರ ಕೊಲೆಯಾಗುತ್ತಿದ್ದರೇ, ವಿಗ್ರಹವನ್ನು ಸ್ಪರ್ಶಿಸಿದ್ದಕ್ಕೆ ಯುವಕರ ಕೊಲೆಯಾಗುತ್ತಿದ್ದರೇ, ನೀಮಗೆ ಅವಮಾನ ಆಗುವ ಸ್ಥಳಕ್ಕೆ ಏಕೆ ಹೋಗುತ್ತೀರಿ? ನೀವು ನಿಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಅತ್ಯಾಚಾರ ಮತ್ತು ಹತ್ಯೆ ಮಾಡುವ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಿ ಎಂದು ದೆಹಲಿಯ ಆಮ್ ಆದ್ಮ್ ಪಕ್ಷದ ಶಾಸಕ ರಾಜೇಂದ್ರ ಪಾಲ್ ಗೌತಮ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ 30 ಸೆಕೆಂಡ್‌ಗಳ ವಿಡಿಯೋ ಹರಿಯಾಣದ ಸೋನೆಪತ್‌ನ ಲಹರಾಡಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜೇಂದ್ರ ಪಾಲ್ ಗೌತಮ್ ಮಾತನಾಡುತ್ತಿರುವುದ್ದಾಗಿದೆ.
ರಾಜೇಂದ್ರ ಪಾಲ್ ಗೌತಮ್ ಅವರನ್ನು ಕೇಜ್ರಿವಾಲ್ ಏಕೆ ಪಕ್ಷದಿಂದ ತೆಗೆದುಹಾಕುವುದಿಲ್ಲ ? – ಬಿಜೆಪಿ
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ತಮ್ಮನ್ನು ಕಟ್ಟರ ಹನುಮಾನ್ ಭಕ್ತ ಎಂದು ಕರೆದುಕೊಳ್ಳುವ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಹಿಂದೂ ಧರ್ಮವನ್ನು ನಿರಂತರವಾಗಿ ಟೀಕಿಸುವ ರಾಜೇಂದ್ರ ಪಾಲ್ ಗೌತಮ್ ಅವರನ್ನು ಪಕ್ಷದಿಂದ ಏಕೆ ತೆಗೆದುಹಾಕುವುದಿಲ್ಲ ? ಎಂದು ಪ್ರಶ್ನಿಸಿದ್ದಾರೆ.
“मंदिरों में जाना बंद करो”
“मंदिरों में महिलाओं के साथ दुष्कर्म होता है”
“मंदिरों में दलितों को मारा जाता है”
आप विधायक राजेंद्र पाल गौतम ने एक बार फिर मंदिरों और हिंदुओं को गाली दी
इससे पहले, 10,000 लोगों के सामूहिक धर्मांतरण के दौरान, वह लोगों को हिंदू धर्म और हिंदू देवताओं… pic.twitter.com/4HVkBTnGEp
— Gaurav Bhatia गौरव भाटिया 🇮🇳 (@gauravbhatiabjp) December 6, 2023
ಹಿಂದೂ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ರಾಜೇಂದ್ರ ಪಾಲ್ ಗೌತಮ್ ಗೆ ಸಚಿವ ಸ್ಥಾನ ಕೈ ತಪ್ಪಿತ್ತು !
ರಾಜೇಂದ್ರ ಪಾಲ್ ಗೌತಮ್ ಈ ಹಿಂದೆ ಹಲವು ಬಾರಿ ಹಿಂದೂ ಧರ್ಮವನ್ನು ಟೀಕಿಸಿದ್ದಾರೆ. ಅಕ್ಟೋಬರ್ 2022 ರಲ್ಲಿ, ಹಿಂದೂ ವಿರೋಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ 10 ಸಾವಿರ ಹಿಂದೂಗಳನ್ನು ಬೌದ್ಧ ಧರ್ಮಕ್ಕೆ ಮತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ, ಭಗವಾನ್ ಬುದ್ಧ ವಿಷ್ಣುವಿನ ಅವತಾರ ಎಂದು ನಾನು ನಂಬುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ನಾನು ಇದನ್ನು ಕೇವಲ ಹುಚ್ಚುತನ ಮತ್ತು ಸುಳ್ಳು ಪ್ರಚಾರ ಎಂದು ಪರಿಗಣಿಸುತ್ತೇನೆ. ನಾನು ಶ್ರಾದ್ಧವನ್ನು ಮಾಡುವುದಿಲ್ಲ ಮತ್ತು ನಾನು ಪಿಂಡಾದವನ್ನು ಅರ್ಪಿಸುವುದಿಲ್ಲ. ಬ್ರಾಹ್ಮಣರ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ. ನಾನು ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇನೆ; ಏಕೆಂದರೆ ಇದು ಮಾನವೀಯತೆಗೆ ಹಾನಿಕಾರಕವಾಗಿದೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಇದು ಅಸಮಾನತೆಯನ್ನು ಆಧರಿಸಿದೆ. ನಾನು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ.
ನವೆಂಬರ್ 2022 ರಲ್ಲಿ, ರಾಜೇಂದ್ರ ಪಾಲ್ ಗೌತಮ್, ‘ದಿ ವಾಯರ್’ ಸುದ್ದಿ ತಾಣಕ್ಕೆ ಸಂದರ್ಶನ ನೀಡುವಾಗ, ‘ಈ ದೇಶದಲ್ಲಿ 110 ಕೋಟಿ ಜನರು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು. ಮುಂದಿನ 5-6 ವರ್ಷಗಳಲ್ಲಿ ಅವರೆಲ್ಲರೂ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ ಮತ್ತು ನಂತರ ಯಾರು ಬಹುಸಂಖ್ಯಾತರಾಗುತ್ತಾರೆ ಎಂದು ನೋಡೋಣ?’ ಎಂದು ಹೇಳಿದ್ದರು.
ಸಂಪಾದಕೀಯ ನಿಲುವುರಾಜೇಂದ್ರ ಪಾಲ್ ಗೌತಮ್ ಅವರು ನಿರಂತರವಾಗಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವಾಗ, ಅವರ ವಿರುದ್ಧ ಇದುವರೆಗೆ ಏಕೆ ಕಠಿಣ ಕ್ರಮ ಕೈಗೊಂಡಿಲ್ಲ ? ಇಸ್ಲಾಂನ ವಿರುದ್ಧ ಒಂದೇ ಒಂದು ಹೇಳಿಕೆ ನೀಡಿದರೆ, ಮುಸ್ಲಿಮರು ನೇರವಾಗಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ; ಆದರೆ ಹಿಂದೂಗಳು ಹಾಗೆ ಮಾಡುವುದಿಲ್ಲ ಮತ್ತು ಮಾಡುವುದಿಲ್ಲ. ಇಂತಹ ಹಿಂದೂ ವಿರೋಧಿಗಳ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಳ್ಳದಿರುವುದು ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿ ! ರಾಜೇಂದ್ರ ಪಾಲ್ ಗೌತಮ್ ಇವರು ಮಸೀದಿಗಳು, ಮದರಸಾಗಳು, ಚರ್ಚ್‌ಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಎಂದಿಗೂ ಹೇಳಿಕೆ ನೀಡುವುದಿಲ್ಲ; ಯಾಕೆಂದರೆ ಅವರಿಗೆ ಅದರ ಪರಿಣಾಮ ಗೊತ್ತು ! |