ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಸ್ಥಳಗಳ ಮೇಲೆ ನಡೆಸಿದ ದಾಳಿಯಲ್ಲಿ 200 ಕೋಟಿ ರೂಪಾಯಿ ವಶ

ನವ ದೆಹಲಿ : ಕಾಂಗ್ರೆಸ್ ನ ರಾಜ್ಯಸಭಾ ಸಂಸದ ಮತ್ತು ಉದ್ಯಮಿ ಧೀರಜ್ ಸಾಹು ಮತ್ತು ಅವರ ಸಹಚರರ ಜಾರ್ಖಂಡ್, ಬಂಗಾಳ ಮತ್ತು ಒಡಿಶಾದ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 200 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ. ಈ ನೋಟುಗಳನ್ನು 9 ಬಾಕ್ಸ್ ಗಳಲ್ಲಿ ಇಡಲಾಗಿತ್ತು. ಧೀರಜ್ ಸಾಹು ಮದ್ಯ ತಯಾರಿಕಾ ಕಂಪನಿ ‘ಬಲದೇವ್ ಸಾಹು ಎಂಡ್ ಗ್ರೂಪ್ ಆಫ್ ಕಂಪನೀಸ್’ಗೆ ಸೇರಿದವರು.

ಸಾರ್ವಜನಿಕರಿಂದ ಲೂಟಿ ಮಾಡಿದ್ದನ್ನು ವಾಪಸ್ ಕೊಡಬೇಕು ! – ಪ್ರಧಾನಿ ಮೋದಿ

ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಈ ನೋಟುಗಳ ಚಿತ್ರವನ್ನು ಟ್ವೀಟ್ ಮಾಡಿ, ‘ಜನರೇ, ಈ ನೋಟುಗಳ ರಾಶಿಯನ್ನು ನೋಡಿ, ಈ ನಾಯಕರ ಪ್ರಾಮಾಣಿಕತೆಯ ಭಾಷಣವನ್ನೂ ಕೇಳಿ, ಜನರಿಂದ ಲೂಟಿ ಮಾಡಿದ್ದನ್ನು ವಾಪಸ್ ಕೊಡಬೇಕು. ಇದು ಮೋದಿಯವರ ‘ಗ್ಯಾರಂಟಿ’ ಎಂದು ಟ್ವೀಟ್ ಮಾಡಿದ್ದಾರೆ.

ಸಂಪಾದಕೀಯ ನಿಲುವು

‘ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ’ ಎಂದು ಈಗ ವ್ಯಾಖ್ಯಾನಿಸಲಾಗುತ್ತಿದೆ ಎಂಬುದನ್ನು ಈ ಘಟನೆ ಮತ್ತೆ ತೋರಿಸುತ್ತದೆ !