ಜೆ.ಎನ್.ಯು. ಪ್ರದೇಶದಲ್ಲಿ ಪ್ರತಿಭಟನೆ, ಹಿಂಸಾಚಾರ ಇತ್ಯಾದಿಗಳನ್ನು ಮಾಡುವ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿ ದಂಡ !

ನವದೆಹಲಿ: ಜವಾಹರಲಾಲ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಡಳಿತದ ಹೊಸ ನಿಯಮದ ಪ್ರಕಾರ, ವಿಶ್ವವಿದ್ಯಾಲಯದ ಆವರಣದಲ್ಲಿ ಹಿಂಸಾಚಾರ, ಆಂದೋಲನ, ಉಪವಾಸ ಸತ್ಯಾಗ್ರಹ ಇತ್ಯಾದಿ ಕೃತ್ಯಗಳನ್ನು ನಡೆಸುವ ವಿದ್ಯಾರ್ಥಿಗಳಿಗೆ 20,000 ರೂಪಾಯಿಗಳ ದಂಡ ಹಾಗೆಯೇ ರಾಷ್ಟ್ರವಿರೋಧಿ , ಜಾತಿ ಮತ್ತು ಧರ್ಮ ವಿರೋಧಿ ಘೋಷಣೆ ಕೂಗಿ ಪ್ರಚೋದಿಸಿದರೆ, 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇದಲ್ಲದೇ ವಿಶ್ವವಿದ್ಯಾಲಯದ ಆಡಳಿತದ ಅನುಮತಿ ಇಲ್ಲದೆ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದರೆ 6 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಪಾಡಲು ಈ ನಿಯಮ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ವಿದ್ಯಾರ್ಥಿಗಳು ಈ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೆ, ಅವರನ್ನು ವಿಶ್ವವಿದ್ಯಾಲಯದಿಂದ ಅಮಾನತ್ತುಗೊಳಿಸಲಾಗುತ್ತದೆ.

ವಿಶ್ವವಿದ್ಯಾಲಯ ಆಡಳಿತವು ವಿಶ್ವವಿದ್ಯಾಲಯದ ಆವರಣದಲ್ಲಿ 28 ರೀತಿಯ ಘಟನೆಗಳು ಮತ್ತು ಚಟುವಟಿಕೆಗಳನ್ನು ನಿಷೇಧಿಸಿದೆ. ಇವುಗಳಲ್ಲಿ ಜೂಜಾಟ, ಆಡಳಿತದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದು, ಹಾಸ್ಟೆಲ್ ಕೊಠಡಿಗಳ ಮೇಲೆ ಅನಧಿಕೃತವಾಗಿ ನಿಯಂತ್ರಣ ಹೊಂದುವುದು, ನಿಂದನೀಯ ಭಾಷೆ ಬಳಸುವುದು, ಮೋಸ ಮಾಡುವುದು ಮುಂತಾದವುಗಳ ಸಮಾವೇಶವಿದೆ.

ಸಂಪಾದಕರ ನಿಲುವು

* ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸುವವರನ್ನು ಹೊರಹಾಕಲಾಗುತ್ತದೆ!

* ಶಿಕ್ಷಣ ಪಡೆಯುವುದರ ಬದಲಾಗಿ, ಇಂತಹ ಚಟುವಟಿಕೆಗಳನ್ನು ಮಾಡುವ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಪ್ರಯತ್ನಗಳನ್ನು ವಿಶ್ವವಿದ್ಯಾಲಯ ಆಡಳಿತ ಪ್ರಯತ್ನಿಸುವುದು ಆವಶ್ಯಕವಾಗಿದೆ!