ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿಯ ಸೂಚನೆ
ನವದೆಹಲಿ – ಸಧ್ಯಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (‘ಎಎಸ್‌ಐ’) ಮೇಲ್ವಿಚಾರಣೆಯಲ್ಲಿರುವ ದೇಶಾದ್ಯಂತದ ಸಾವಿರಾರು ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ಪೂಜೆಯನ್ನು ಪುನಃ ಪ್ರಾರಂಭಿಸಲು ಅನುಮತಿ ನೀಡುವಂತೆ ಸಾರಿಗೆ ಮತ್ತು ಸ್ಮಾರಕಗಳ ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ವೈ.ಎಸ್.ಆರ್ ಕಾಂಗ್ರೆಸ್ ಸಂಸದ ವಿ. ವಿಜಯ ಸಾಯಿ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಈ ಸಮಿತಿಯು 6 ಡಿಸೆಂಬರ್ 2023 ರಂದು ಸಂಸತ್ತಿನಲ್ಲಿ ‘ಭಾರತದಲ್ಲಿ ಸಂರಕ್ಷಿತ ಸ್ಮಾರಕಗಳು ಮತ್ತು ಸ್ಮಾರಕಗಳ ಸಂರಕ್ಷಣೆ’ ಕುರಿತು ಮಂಡಿಸಿದ ತನ್ನ ವರದಿಯಲ್ಲಿ ಈ ಸಲಹೆಯನ್ನು ಮಾಡಿದೆ.
1. ಸಮಿತಿಯ ಹೇಳಿಕೆಯಂತೆ, ದೇಶದ ವಿವಿಧ ಭಾಗಗಳಲ್ಲಿ ಎಎಸ್ಐ ನಿಯಂತ್ರಣದಲ್ಲಿರುವ ಸಂರಕ್ಷಿತ ಸ್ಮಾರಕಗಳು ಅಥವಾ ದೇವಾಲಯಗಳಿವೆ. ಇವುಗಳ ಮೇಲೆ ಜನರಿಗೆ ಅಪಾರ ಶ್ರದ್ಧೆಯಿದೆ. ಇಂತಹ ಸ್ಥಿತಿಯಲ್ಲಿ ಪೂಜೆಗೆ ಅವಕಾಶ ನೀಡದಿರುವುದು ಸೂಕ್ತವಲ್ಲ. ಜನರಿಗೆ ಪೂಜೆ ಮಾಡುವ ಹಕ್ಕನ್ನು ನೀಡಿದರೆ ಅವರ ಆಸೆ ಈಡೇರುತ್ತದೆ.
2. ಎಎಸ್ ಐ ಯ ಭದ್ರತಾ ಹೆಸರಿನಡಿಯಲ್ಲಿ ಪಡೆದಿರುವ ಸ್ಮಾರಕಗಳಲ್ಲಿ (ದೇವಾಲಯಗಳು, ಮಸೀದಿಗಳು ಮತ್ತು ದರ್ಗಾಗಳು) ಇವೆ, ಅಲ್ಲಿ ಸದ್ಯಕ್ಕೆ ಪೂಜೆಯನ್ನು ಮಾಡಲು ಅನುಮತಿಸಲಾಗುವುದಿಲ್ಲ. ಇದರ ಹಿಂದೆ ಎಎಸ್‌ಐ ನ ಒಂದು ನಿಯಮವಿದ್ದು, ಈ ನಿಯಮಗಳ ಪ್ರಕಾರ ಎಲ್ಲಿ ಎ.ಎಸ್.ಐ. ವಶಕ್ಕೆ ಬರುವವರೆಗೆ ಪೂಜೆಗಳು ನಡೆಯುತ್ತಿತ್ತೋ, ಅಲ್ಲಿ ಎಎಸ್‌ಐ ಸದ್ಯಕ್ಕೆ ಕೇವಲ ಸ್ಮಾರಕಗಳಲ್ಲಿ (ಅದರಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳಿವೆ) ಪೂಜೆಗೆ ಅನುಮತಿಸುತ್ತದೆ,..
3. ಉದಾಹರಣೆಗೆ, ಎ.ಎಸ್.ಐ. ಮೂಲಕ ರಕ್ಷಿಸಲ್ಪಟ್ಟ ಕೆಂಪು ಕೋಟೆಯೊಳಗಿನ ಮೋತಿ ಮಸೀದಿಯಲ್ಲಿ ಪ್ರಾರ್ಥಿಸಬಹುದು; ಆದರೆ ಗುಜರಾತಿನ ಸಿದ್ದಪುರದಲ್ಲಿರುವ ರುದ್ರ ಮಹಾಲಯ ದೇವಸ್ಥಾನದಲ್ಲಿ ಪೂಜೆ ಮಾಡುವಂತಿಲ್ಲ. ಅದೇ ರೀತಿ ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ವಿಜಯ್ ಚೋಳೇಶ್ವರಂ ದೇವಸ್ಥಾನ ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ಪೂಜೆಗೆ ಅವಕಾಶವಿಲ್ಲ.
4. ಕೆಲವು ಸ್ಮಾರಕಗಳಲ್ಲಿ ಪೂಜೆಗೆ ಅನುಮತಿಸಲಾಗುವುದಿಲ್ಲ. ಈ ಶಿಥಿಲಗೊಂಡಿರುವ ಸ್ಮಾರಕಗಳನ್ನು ರಕ್ಷಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಎಎಸ್‌ಐ ಹೇಳುತ್ತದೆ.
5. ಎ.ಎಸ್.ಐ.ನಿಯಂತ್ರಣದಡಿಯಲ್ಲಿ ಬರುವ ದೇವಾಲಯಗಳಲ್ಲಿ ಅಥವಾ ಇತರ ಧಾರ್ಮಿಕ ಸ್ಥಳಗಳಲ್ಲಿ, ಪೂಜೆಯನ್ನು ಮಾಡಲಾಗುವುದಿಲ್ಲ, ಅವುಗಳಿಗೆ ಹೊಸದಾಗಿ ಅನುಮತಿ ನೀಡಲಾಗುವುದಿಲ್ಲ. ಈಗ ಈ ಸಮಿತಿಯು ಪ್ರವಾಸೋದ್ಯಮ ಸಚಿವಾಲಯಕ್ಕೆ ಇದರ ಮೇಲೆ ಕಾರ್ಯನಿರ್ವಹಿಸಲು ತಿಳಿಸಿದೆ. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪ್ರವಾಸೋದ್ಯಮ ಸಚಿವಾಲಯವೂ ತಿಳಿಸಿದೆ.
6. ಈ ವರದಿಯನುಸಾರ ಎ.ಎಸ್.ಐ. ಸಧ್ಯಕ್ಕೆ ದೇಶದಲ್ಲಿ 3 ಸಾವಿರದ 693 ಸ್ಮಾರಕಗಳನ್ನು ರಕ್ಷಿಸುತ್ತಿದೆ. ಇವುಗಳಲ್ಲಿ, 2 ಸಹಸ್ರ 873 ಪೂಜೆ ಮತ್ತು ನಮಾಜಪಠಣ ಆಗುವುದಿಲ್ಲ; ಆದರೆ ಹಲವೆಡೆ ಸ್ಥಳೀಯ ಜನರ ಶ್ರದ್ಧೆ ಈ ಧಾರ್ಮಿಕ ಸ್ಥಳಗಳೊಂದಿಗೆ ಜೋಡಿಸಲ್ಪಟ್ಟಿದೆ. ಇದರಿಂದಹೊಂ ಇಲ್ಲಿ ಪೂಜೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿದೆ.
7. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ 8 ನೇ ಶತಮಾನದಲ್ಲಿ ನಿರ್ಮಿಸಲಾದ ಮಾರ್ತಂಡ ಸೂರ್ಯ ದೇವಸ್ಥಾನವು ಎ.ಎಸ್.ಐ. ಪೂಜೆಗೆ ಅನುಮತಿಸದಿರುವ ಒಂದು ದೊಡ್ಡ ಉದಾಹರಣೆಯಾಗಿದೆ. ಕಳೆದ ವರ್ಷ ಕಾಶ್ಮೀರದಲ್ಲಿ ಪರಿಸ್ಥಿತಿ ತಹಬಂದಿಗೆ ಬಂದ ನಂತರ ಇಲ್ಲಿ ಪೂಜೆಗಳನ್ನು ಆರಂಭಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿನ್ಹಾ ಕೂಡ ಇಲ್ಲಿ ಪೂಜೆ ಸಲ್ಲಿಸಿದರು.
8. ಈ ದೇವಸ್ಥಾನದಲ್ಲಿ ಪೂಜೆ ನಡೆಸುತ್ತಿರುವುದಕ್ಕೆ ಎಎಸ್‌ಐ ಆಕ್ಷೇಪ ವ್ಯಕ್ತಪಡಿಸಿತ್ತು. ಎಎಸ್‌ಐ ಅಧಿಕಾರ ವಹಿಸಿಕೊಂಡಾಗ ಇಲ್ಲಿ ಪೂಜೆ ನಡೆಯುತ್ತಿರಲಿಲ್ಲ, ಆದುದರಿಂದ ‘ಹೊಸದಾಗಿ ಪೂಜೆ ಆರಂಭಿಸಲು ಸಾಧ್ಯವಿಲ್ಲ’ ಎಂದರು. ಆದರೆ ಈಗ ಈ ದೇವಾಲಯದಲ್ಲಿ ನಿಯಮಿತವಾಗಿ ಪೂಜೆ ನಡೆಯುತ್ತದೆ.
9. ಈಗ ಈ ಸಮಿತಿಯ ಶಿಫಾರಸ್ಸುಗಳ ಪ್ರಕಾರ ಕ್ರಮ ಕೈಗೊಂಡರೆ, ಅನೇಕ ದಶಕಗಳಿಂದ ಮತ್ತು ಕೆಲವು ಸ್ಥಳಗಳಲ್ಲಿ ಶತಮಾನಗಳಿಂದ ಪೂಜೆ ನಡೆಯದೇ ಇರುವ ಆದರೆ ಅವುಗಳ ಧಾರ್ಮಿಕ ಮಹತ್ವ ಅಧಿಕವಿರುವ ದೇವಸ್ಥಾನಗಳಲ್ಲಿ ಪುನಃ ಗಂಟೆ ಮತ್ತು ತಾಳಗಳ ಸದ್ದು ಕೇಳಿಸುವುದು.