ಪೌರತ್ವ ಕಾಯಿದೆಯ ಕಲಂ ‘6 ಅ’ ಸಿಂಧುತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಪ್ರಶ್ನೆ! 

 

  • ಕೇವಲ ಅಸ್ಸಾಂನಲ್ಲಿ ಮಾತ್ರವಲ್ಲದೆ ದೇಶದಲ್ಲಿರುವ ನುಸುಳುಕೋರರ ಸಮಸ್ಯೆಯನ್ನು ಹೇಗೆ ಪರಿಹರಿಸುವಿರಿ ?

  • ಅಸ್ಸಾಂನಲ್ಲಿ ನುಸುಳುಕೋರರಿಗೆ ನೀಡಿರುವ ಪೌರತ್ವದ ಬಗ್ಗೆ ಮಾಹಿತಿಯನ್ನು ಸಲ್ಲಿಸಲು ಆದೇಶ ! 

ನವ ದೆಹಲಿ – ಅಸ್ಸಾಂನ ಬಾಂಗ್ಲಾದೇಶಿ ನುಸುಳುಕೋರರೊಂದಿಗೆ ಸಂಬಂಧಿಸಿದ ಪೌರತ್ವ ಕಾಯಿದೆಯ ಕಲಂ `6ಅ’ ಗೆ ಸಂಬಂಧಿಸಿದ 17 ಅರ್ಜಿಗಳ ಮೇಲೆ ಡಿಸೆಂಬರ್ 7 ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಜನವರಿ 1, 1966 ರಿಂದ ಮಾರ್ಚ್ 25, 1971 ರ ಕಾಲಾವಧಿಯಲ್ಲಿ ಅಸ್ಸಾಂನ ಬಾಂಗ್ಲಾದೇಶಿ ನುಸುಳುಕೋರರಿಗೆ ನೀಡಿರುವ ಪೌರತ್ವದ ಅಂಕಿ–ಅಂಶವನ್ನು ಕೇಳಿದೆ. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ನೇತೃತ್ವದ 5 ಸದಸ್ಯರ ಸಾಂವಿಧಾನಿಕ ಪೀಠವು ಕೇಂದ್ರ ಮತ್ತು ಅಸ್ಸಾಂ ಸರಕಾರಕ್ಕೆ ಈ ಮಾಹಿತಿಯನ್ನು ನೀಡಲು ಡಿಸೆಂಬರ್ 11 ರ ವರೆಗೆ ಕಾಲಾವಕಾಶವನ್ನು ನೀಡಿದೆ. ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಸಂಪೂರ್ಣ ದೇಶವನ್ನು ಕಾಡುತ್ತಿರುವ ನುಸುಳುಕೋರರ ಸಮಸ್ಯೆಯ ಬಗ್ಗೆ ವಿವರಿಸಿದೆ. ನ್ಯಾಯಾಲಯವು, ನಾವು ಮಿತಿಮೀರಿ ನುಸುಳುಕೋರರನ್ನು ಭಾರತವನ್ನು ಪ್ರವೇಶಿಸಲು ಅನುಮತಿಸುವುದಿಲ್ಲ. ಇದರಿಂದ ಇಲ್ಲಿನ ಮೂಲಭೂತ ಸೌಕರ್ಯದ ಮೇಲೆ ಬಹುದೊಡ್ಡ ಒತ್ತಡ ಬೀಳಲಿದೆ. ಕೇಂದ್ರ ಸರಕಾರ ಎಷ್ಟು ನುಸುಳುಕೋರರಿಗೆ ಪೌರತ್ವ ನೀಡಿದೆ ? ಮತ್ತು ಎಷ್ಟು ಜನರನ್ನು ಮರಳಿ ಕಳುಹಿಸಲಾಗಿದೆ ?, ಎನ್ನುವ ಮಾಹಿತಿ ನೀಡಬೇಕು ಎಂದು ಹೇಳಿದೆ.

ವಿಭಾಗೀಯ ಪೀಠ ಕೇಳಿದ ಪ್ರಶ್ನೆಗಳು !

1966 ರಿಂದ 1971 ರವರೆಗಿನ ಐದೂವರೆ ವರ್ಷಗಳ ಕಾಲಾವಧಿಯಲ್ಲಿ ಎಷ್ಟು ಜನರನ್ನು ವಿದೇಶಿಯರೆಂದು ಪರಿಗಣಿಸಲಾಗಿದೆ ? ಕೇಂದ್ರ ಸರಕಾರವು ಇಲ್ಲಿಯವರೆಗೆ ಎಷ್ಟು `ಫೊರೆನರ್ಸ ಟ್ರುಬ್ಯೂನಲ’ (ವಿದೇಶಿ ನ್ಯಾಯಮಂಡಳಿಗಳು) ರಚಿಸಿದೆ. (ಈ ಉಪ-ನ್ಯಾಯಾಲಯಗಳಲ್ಲಿ ಸ್ಥಳಾಂತರಿತಗೊಂಡವರ ನಾಗರಿಕತ್ವದ ಮೇಲೆ ವಿಚಾರಣೆ ನಡೆಸಲಾಗುತ್ತದೆ.) ಎಷ್ಟು ಪ್ರಕರಣಗಳು ಬಾಕಿ ಇವೆ ಮತ್ತು ಎಷ್ಟು ಇತ್ಯರ್ಥವಾಗಿವೆ ?

ಬಂಗಾಳದ ಬಾಂಗ್ಲಾದೇಶಕ್ಕೆ ತಗಿ ದೊಡ್ಡ ಗಡಿಯನ್ನು ಹೊಂದಿರುವಾಗ, ಬಂಗಾಳಕ್ಕೆ ಪೌರತ್ವ ಕಾಯ್ದೆಯ ಕಲಂ 6ಅ ವ್ಯಾಪ್ತಿಯಿಂದ ಹೊರಗಿಟ್ಟು, ಸರಕಾರವು ಅಸ್ಸಾಂ ಅನ್ನು ಏಕೆ ವಿಭಿನ್ನವಾಗಿ ಪರಿಗಣಿಸಿತು ? ಬಂಗಾಳದಲ್ಲಿ ನುಸುಳುವಿಕೆ ಅಸ್ಸಾಂಗಿಂತ ಕಡಿಮೆ ಎಂದು ಹೇಳಲು ಯಾವುದಾದರೂ ಅಂಕಿ-ಅಂಶಗಳಿವೆಯೇ ? ಈ ಸಮಸ್ಯೆ ಅಸ್ಸಾಂನಲ್ಲಿದೆಯೇ ಹೊರತು ಬಂಗಾಳದಲ್ಲಿ ಇಲ್ಲ ಎಂದು ಏಕೆ ತಿಳಿದುಕೊಳ್ಳಲಾಗುತ್ತಿದೆ ?

ಸ್ಥಳೀಯ ಬಂಗಾಳಿ ನಾಗರಿಕರು ಮತ್ತು ಬಾಂಗ್ಲಾದೇಶಿ ನುಸುಳುಕೋರರ ನಡುವಿನ ಹೋಲಿಕೆಯಿಂದಾಗಿ ನುಸುಳುಕೋರರನ್ನು ಗುರುತಿಸುವುದು ಕಷ್ಟ ! – ಕೇಂದ್ರ ಸರಕಾರದ ಉತ್ತರ

ಇದಕ್ಕೆ ಭಾರತದ ಅಡ್ವೊಕೇಟ ಜನರಲ್ ತುಷಾರ ಮೆಹತಾ ಅವರು ಮಾತನಾಡಿ, ಈ ಸಮಸ್ಯೆ ಅಸ್ಸಾಂನಲ್ಲಿ ನಿರ್ಮಾಣವಾಗಿದೆ; ಏಕೆಂದರೆ ಅಲ್ಲಿನ ಸಂಸ್ಕೃತಿ ಬಾಂಗ್ಲಾದೇಶಕ್ಕಿಂತ ತುಂಬ ಭಿನ್ನವಾಗಿದೆ. ಅಲ್ಲಿ ವಲಸೆ ಬಂದವರನ್ನು ಗುರುತಿಸುವುದು ಸುಲಭವಾಗಿತ್ತು; ಆದರೆ ಬಂಗಾಳದ ಸ್ಥಳೀಯರು ಮತ್ತು ನುಸುಳುಕೋರರ ಆಹಾರ, ಬಟ್ಟೆ ಮತ್ತು ಸಂಸ್ಕೃತಿಯಲ್ಲಿ ಸಮಾನ ಹೋಲಿಕೆಯಿದೆ. ಹಾಗಾಗಿ ಅವರನ್ನು ಗುರುತಿಸುವುದು ಕಷ್ಟವಾಗಿದೆ.

ಪೌರತ್ವ ಕಾಯ್ದೆಯ ಕಲಂ ‘6ಅ’ ಎಂದರೇನು ?

ಅಸ್ಸಾಂ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಬರುವ ಜನರ ಪೌರತ್ವಕ್ಕೆ ಸಂಬಂಧಿಸಿದ ವಿಶೇಷ ನಿಬಂಧನೆಯಾಗಿ 1985 ರಲ್ಲಿ ಸೆಕ್ಷನ್ ‘6A’ ಅನ್ನು ಪೌರತ್ವ ಕಾಯ್ದೆಗೆ ಸೇರಿಸಲಾಯಿತು. ಇದರಲ್ಲಿ ಜನವರಿ 1, 1966 ರಂದು ಅಥವಾ ತದನಂತರ 25 ಮಾರ್ಚ್ 1971 ಕ್ಕಿಂತ ಮೊದಲು ಬಾಂಗ್ಲಾದೇಶದೊಂದಿಗೆ ಇತರ ಭಾಗಗಳಿಂದ ಆಸ್ಸಾಂಗೆ ಬಂದಿರುವ ಮತ್ತು ಆಗಿನಿಂದ ಅಲ್ಲಿ ವಾಸಿಸುತ್ತಿರುವವರಿಗೆ ಮಾನವ ಹಕ್ಕುಗಳ ಆಧಾರದ ಮೇಲೆ ಭಾರತೀಯ ಪೌರತ್ವವನ್ನು ಪಡೆಯಲು ಕಲಂ 18 ರ ಅಡಿಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಅದು ಹೇಳುತ್ತದೆ. ಇದರ ಆಧಾರದ ಮೇಲೆ ಅಸ್ಸಾಂನಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಗೆ ಪೌರತ್ವ ನೀಡುವ ಕೊನೆಯ ದಿನಾಂಕವನ್ನು ಮಾರ್ಚ್ 25, 1971 ರಂದು ನಿಗದಿಪಡಿಸಲಾಯಿತು. ಈಗ ಈ ಷರತ್ತಿನ ಸಾಂವಿಧಾನಿಕ ಸಿಂಧುತ್ವದ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ನುಸುಳುಕೋರರನ್ನು ಹೊರದಬ್ಬುವುದರೊಂದಿಗೆ, ನುಸುಳಲು ಅವಕಾಶ ಮಾಡಿಕೊಡುವ ಸರಕಾರಿ ಇಲಾಖೆಯ ಜವಾಬ್ದಾರರಾಗಿರುವವರನ್ನೂ ಸರಕಾರವು ಜೀವಾವಧಿ ಜೈಲಿಗೆ ಹಾಕಬೇಕು !