‘ಚರ್ಚ್ ಆಫ್ ನಾರ್ತ್ ಇಂಡಿಯಾ’ ಸಂಸ್ಥೆಗೆ ವಿದೇಶಿ ದೇಣಿಗೆ ಸ್ವೀಕರಿಸುವ ಪರವಾನಗಿ ರದ್ದು!

ದೇಶದ ಅತಿದೊಡ್ಡ ಕ್ರಿಶ್ಚಿಯನ್ ಸಂಸ್ಥೆ!

ದೇಣಿಗೆ ತೆಗೆದುಕೊಳ್ಳುವ ನಿಯಮಗಳ ಉಲ್ಲಂಘನೆ!

ನವದೆಹಲಿ– ಕೇಂದ್ರ ಗೃಹ ಸಚಿವಾಲಯವು ದೇಶದ ಅತಿದೊಡ್ಡ ಕ್ರಿಶ್ಚಿಯನ್ ಸ್ವಯಂಸೇವಾ ಸಂಸ್ಥೆ ‘ಚರ್ಚ್ ಆಫ್ ನಾರ್ತ್ ಇಂಡಿಯಾ’ (ಸಿ.ಎನ್.ಐ) ಇದರ ಎಫ್‌ಸಿಆರ್‌ಎ(ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ) ಪರವಾನಿಗೆ ಪತ್ರವನ್ನು ರದ್ದು ಪಡಿಸಿದೆ. ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆಯಿಂದಾಗಿ ಗೃಹ ಸಚಿವಾಲಯ ಈ ಕ್ರಮ ಕೈಗೊಂಡಿದೆ. ಈಗ ಈ ಸಂಸ್ಥೆಗೆ ವಿದೇಶಿ ದೇಣಿಗೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಕಳೆದ 5 ದಶಕಗಳಿಂದ, ಈ ಸಂಸ್ಥೆಯು ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಹರಡುವ ಕಾರ್ಯವನ್ನು ಮಾಡುತ್ತಿದ್ದು, ಈ ಸಂಸ್ಥೆಗೆ ಅಮೇರಿಕಾ, ಬ್ರಿಟನ್, ಕೆನಡಾ ಮತ್ತು ಯುರೋಪ್‌ನಿಂದ ದೊಡ್ಡ ದೇಣಿಗೆ ದೊರೆಯುತ್ತದೆ.

1. 1970 ರಲ್ಲಿ, 6 ವಿವಿಧ ಸಂಸ್ಥೆಗಳನ್ನು ವಿಲೀನಗೊಳಿಸಿ ‘ಚರ್ಚ್ ಆಫ್ ನಾರ್ತ್ ಇಂಡಿಯಾ’ ಸ್ಥಾಪಿಸಲಾಯಿತು. ಇದು ಚರ್ಚ್ ಆಫ್ ಇಂಡಿಯಾ, ಪಾಕಿಸ್ತಾನ, ಬರ್ಮಾ (ಮ್ಯಾನ್ಮಾರ್), ಸಿಲೋನ್ (ಶ್ರೀಲಂಕಾ) ಮತ್ತು ಇತರ ಕೆಲವು ಕ್ರಿಶ್ಚಿಯನ್ ಸಂಸ್ಥೆಗಳನ್ನು ಒಳಗೊಂಡಿದೆ. ಈ ಸಂಸ್ಥೆಯು ಉತ್ತರ ಭಾರತದ ಚರ್ಚ್‌ಗಳನ್ನು ನಿಯಂತ್ರಿಸುತ್ತದೆ.

2. ಈ ಸಂಸ್ಥೆಯು 22 ಲಕ್ಷ ಜನರು ತನ್ನ ಸದಸ್ಯರಾಗಿದ್ದಾರೆ ಎಂದು ಹೇಳಿಕೊಂಡಿದೆ. ಇದರ ಜೊತೆಗೆ, ಭಾರತದ 28 ಪ್ರದೇಶಗಳಲ್ಲಿ ತಮ್ಮದೇ ಆದ ಬಿಷಪ್‌ಗಳನ್ನು ಹೊಂದಿದ್ದು, ಅವರು ಅಲ್ಲಿನ ಚರ್ಚ್‌ಗಳನ್ನು ನಿಯಂತ್ರಿಸುತ್ತಾರೆ. ಸಂಸ್ಥೆಯು 2 ಸಾವಿರ 200 ಕ್ಕೂ ಹೆಚ್ಚು ಪಾದ್ರಿಗಳು ಮತ್ತು 4 ಸಾವಿರ 500 ಕ್ಕೂ ಹೆಚ್ಚು ಚರ್ಚ್‌ಗಳು ತನ್ನ ನಿಯಂತ್ರಣದಲ್ಲಿದೆ ಎಂದು ಹೇಳಿಕೊಂಡಿದೆ.

3. ‘ಚರ್ಚ್ ಆಫ್ ನಾರ್ತ್ ಇಂಡಿಯಾ’ ಅಡಿಯಲ್ಲಿ 564 ಶಾಲೆಗಳು ಮತ್ತು ಕಾಲೇಜುಗಳು, ಹಾಗೆಯೇ 60 ನರ್ಸಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ದೇಶದ ಪ್ರಸಿದ್ಧ ಲಕ್ಷ್ಮಣಪುರಿಯ ‘ಲಾ ಮಾರ್ಟಿನಿಯರ್ ಕಾಲೇಜು’ ಕೂಡ ಇದರ ಅಡಿಯಲ್ಲಿದೆ. ಇದಲ್ಲದೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಅನೇಕ ಮಿಶನರಿ ಶಾಲೆಗಳು ಸಹ ಇದರ ಅಡಿಯಲ್ಲಿ ಬರುತ್ತವೆ.

ಚರ್ಚ್ ಆಫ್ ನಾರ್ತ್ ಇಂಡಿಯಾ’ ಪಾದ್ರಿಗಳ ಮೇಲೆ 10,000 ಕೋಟಿ ರೂಪಾಯಿಗಳ ಭೂ ಹಗರಣದ ಆರೋಪ!

‘ಚರ್ಚ್ ಆಫ್ ನಾರ್ತ್ ಇಂಡಿಯಾ’ದ ಕೆಲವು ಪಾದ್ರಿಗಳ ಮೇಲೆ 2019 ರಲ್ಲಿ 10 ಸಾವಿರ ಕೋಟಿ ರೂಪಾಯಿಗಳ ಭೂ ಹಗರಣದ ಆರೋಪವಿದೆ. ಈ ಪ್ರಕರಣದಲ್ಲಿ ಸಂಸ್ಥೆಯ ಕೆಲವು ಪಾದ್ರಿಗಳು ತಮ್ಮ ಸಹೋದ್ಯೋಗಿಗಳ ಮೇಲೆಯೇ ನೂರಾರು ಎಕರೆ ಭೂಮಿಯ ದಾಖಲೆಗಳಲ್ಲಿ ಅಕ್ರಮ ಮಾಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇತ್ತೀಚಿನ ದಿನಗಳಲ್ಲಿ, ವಿದೇಶದಿಂದ ಹಣವನ್ನು ತೆಗೆದುಕೊಂಡು ಅವ್ಯವಹಾರ ಮಾಡಿರುವ ಅನೇಕ ಸ್ವಯಂಸೇವಾ ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈ ಸ್ವಯಂಸೇವಾ ಸಂಸ್ಥೆಗಳು ವಿದೇಶದಿಂದ ಪಡೆದ ಹಣದ ಬಗ್ಗೆ ಸ್ಪಷ್ಟಕ್ರೈಸ್ತ ಲೆಕ್ಕವನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. ಇದರಲ್ಲಿ ಆಕ್ಸ್‌ಫ್ಯಾಮ್, ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮತ್ತು ರಾಜೀವ್ ಗಾಂಧಿ ಫೌಂಡೇಶನ್‌ನಂತಹ ಕೆಲವು ಸ್ವಯಂಸೇವಾ ಸಂಸ್ಥೆಗಳ ಸಮಾವೇಶವಿದೆ.

ಸಂಪಾದಕರ ನಿಲುವು

ಹಿಂದೂ ದೇವಾಲಯಗಳಲ್ಲಿ ತಥಾಕಥಿತ ಅವ್ಯವಹಾರ ನಡೆದಿದೆಯೆಂದು ಹೇಳುತ್ತಾ, ಅದನ್ನು ಸರಕಾರೀಕರಣಗೊಳಿಸಿದ ಸರಕಾರಗಳು ಈಗ ಚರ್ಚಗಳನ್ನು ಏಕೆ ಸರಕಾರೀಕರಣಗೊಳಿಸುವುದಿಲ್ಲ?’ ಎನ್ನುವ ಪ್ರಶ್ನೆಯನ್ನು ಹಿಂದೂಗಳು ಕೇಳಬೇಕು.