ಉದ್ಯಮಿ ಹಿರಾನಂದಾನಿಯಿಂದ ಹಣ ಪಡೆದು ಲೋಕಸಭೆಯಲ್ಲಿ ಪ್ರಶ್ನೆ ಕೇಳಿರುವ ಆರೋಪ
ನವದೆಹಲಿ – ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ಹಣ ಪಡೆದು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ ಪ್ರಕರಣದಲ್ಲಿ (ಕ್ಯಾಶ್ ಫಾರ್ ಕ್ವೇರಿ) ನೈತಿಕ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಇದರಲ್ಲಿ ಸಮಿತಿಯು ಮೊಯಿತ್ರಾ ಅವರನ್ನು ವಜಾಗೊಳಿಸಲು ಶಿಫಾರಸು ಮಾಡಿತ್ತು. ಇದಾದ 2 ಗಂಟೆಯೊಳಗೆ ಮೊಯಿತ್ರಾ ಅವರನ್ನು ವಜಾಗೊಳಿಸಲಾಗಿತು. ‘ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಬಿಲ್ಡರ್ ದರ್ಶನ್ ಹಿರಾನಂದಾನಿ ಅವರಿಂದ ಮೊಯಿತ್ರಾ ನಗದು ಮತ್ತು ದುಬಾರಿ ಉಡುಗೊರೆ ಪಡೆದಿದ್ದರು’ ಎಂದು ಆರೋಪಿಸಲಾಗಿತ್ತು. ಇದಲ್ಲದೇ ಸಂಸತ್ತು ಒದಗಿಸಿದ ಗಣಕೀಕೃತ ‘ಲಾಗ್-ಇನ್ ಐಡಿ’ ಮತ್ತು ‘ಪಾಸ್‌ವರ್ಡ್’ ಅನ್ನು ಮೊಯಿತ್ರಾ ಅವರು ಹಿರಾನಂದಾನಿಗೆ ನೀಡಿದ್ದರು. ಅದರಿಂದ ಹಿರಾನಂದಾನಿ ಇವರು ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದ್ದರು. ಈ ಸಂಬಂಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದು ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ದೂರಿದ್ದರು. ನಂತರ ಲೋಕಸಭೆ ಸ್ಪೀಕರ್ ಈ ವಿಷಯವನ್ನು ನೈತಿಕ ಸಮಿತಿಗೆ ಒಪ್ಪಿಸಿದ್ದರು.
India parliament expels firebrand MP in bribery rowhttps://t.co/qLrArNuD7r
— BBC News India (@BBCIndia) December 8, 2023
1. ವಜಾಗೊಳಿಸಿದ ನಂತರ ಲೋಕಸಭೆಯ ಹೊರಗೆ ಮಹುವಾ ಮೊಯಿತ್ರಾ ಇವರು, ದರ್ಶನ್ ಹಿರಾನಂದಾನಿ ಹಣ ಪಾವತಿಸಿದ್ದಾರೆ ಎಂಬುದಕ್ಕೆ ಸಮಿತಿಯು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಇದರ ಹೊರತಾಗಿ ಸಮಿತಿಯು ಹೀರಾನಂದಾನಿಗೆ ಅವರ ಉತ್ತರವನ್ನು ದಾಖಲಿಸಲು ಕರೆದಿಲ್ಲ. ನಾನು ಉಡುಗೊರೆಗಳನ್ನು ಸ್ವೀಕರಿಸಿದ್ದೇನೆ ಎಂಬುದಕ್ಕೆ ಸಮಿತಿಯ ಬಳಿಯೂ ಯಾವುದೇ ಪುರಾವೆಗಳಿಲ್ಲ. ನಾನು ನನ್ನ ಲಾಗ್-ಇನ್-ಐಡಿಯನ್ನು ಮಾತ್ರ ಹಂಚಿಕೊಂಡಿದ್ದೇನೆ, ನನ್ನ ವಿರುದ್ಧ ಮಾತ್ರ ದೂರು ನೀಡಲಾಗಿದೆ. ಆದ್ದರಿಂದ ನನ್ನನ್ನು ವಜಾ ಮಾಡಲಾಗಿದೆ ಎಂದು ಹೇಳಿದರು.
2. ಸಂಸದರಾಗಿ ಮಹುವಾ ಮೊಯಿತ್ರಾ ಅವರ ನಡವಳಿಕೆ ಅನೈತಿಕ ಮತ್ತು ಅಸಭ್ಯವಾಗಿದೆ. ಹೀಗಾಗಿ ಅವರನ್ನು ಸಂಸದ ಹುದ್ದೆಯಲ್ಲಿ ಇಡುವಂತಿಲ್ಲ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಸಂಪಾದಕರ ನಿಲುವು* ತೃಣಮೂಲ ಕಾಂಗ್ರೆಸ್ ಮತಾಂಧ, ಜನತಾ ದ್ರೋಹಿ ಮತ್ತು ಭ್ರಷ್ಟ ರಾಜಕಾರಣಿಗಳಿಂದ ತುಂಬಿದೆ ಎಂಬುದು ಮತ್ತೆ ಮತ್ತೆ ಬೆಳಕಿಗೆ ಬಂದಿದೆ. ಇಂತಹ ಪಕ್ಷ ಪ್ರಜಾಪ್ರಭುತ್ವಕ್ಕೆ ತಗಲಿದ ಕಳಂಕವೇ ಆಗಿದೆ ! |