ಎನ್.ಸಿ.ಇ.ಆರ್.ಟಿ.ಯ ಬಳಿ ತನ್ನ ಪುಸ್ತಕದಲ್ಲಿ ಸತಿ ಪದ್ದತಿಯಲ್ಲಿ ನೀಡಿರುವ ತಪ್ಪು ಮಾಹಿತಿಯ ಪುರಾವೆಗಳಿಲ್ಲ !

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎನ್.ಸಿ.ಇ.ಆರ್.ಟಿ.ಯ) ಪುಸ್ತಕದಲ್ಲಿ ಸತಿಪದ್ಧತಿಯು ಯಾವಾಗದಿಂದ ನಡೆಯುತ್ತಿದೆ. ಇದರ ಇತಿಹಾಸವನ್ನು ನೀಡಲಾಗಿದೆ. ಈ ಬಗ್ಗೆ ಸಾಕ್ಷ್ಯವನ್ನು ಪಡೆಯಲು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಯತ್ನಿಸಿದಾಗ ಎನ್.ಸಿ.ಇ.ಆರ್.ಟಿ.ಯು ‘ನಮ್ಮ ಬಳಿ ಇದರ ಬಗ್ಗೆ ಯಾವುದೇ ಪುರಾವೆಗಳಿಲ್ಲ’ ಎಂದು ಉತ್ತರಿಸಿರುವುದು ಬಹಿರಂಗಗೊಂಡಿದೆ.

ಕಾಶ್ಮೀರ ಕಣಿವೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಕರೆದಿರುವ ಕೇಂದ್ರ ಸರಕಾರ !

೨೦೧೯ ರ ಆಗಸ್ಟ್‍ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ ನೇ ವಿಧಿಯನ್ನು ಕೇಂದ್ರ ಸರಕಾರವು ರದ್ದುಪಡಿಸಿದ ನಂತರ ಮೊದಲ ಬಾರಿಗೆ ಕಾಶ್ಮೀರ ಕಣಿವೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಜೂನ್ ೨೪ ರಂದು ಕರೆಯಲಾಗಿದೆ. ಸಭೆಯು ದೆಹಲಿಯಲ್ಲಿ ನಡೆಯಲಿದೆ.

ನಿರ್ಬಂಧಗಳನ್ನು ಸಡಿಲಿಸಿದಾಗ ನಿಯಮಗಳನ್ನು ಉಲ್ಲಂಘನೆಯಾಗುತ್ತದೆ, ಇದರಿಂದ ಮೂರನೇ ಅಲೆಯು ಭಯಾನಕವಾಗಬಹುದು ! – ಕೇಂದ್ರ ಗೃಹಮಂತ್ರಾಲಯಕ್ಕೆ ಆತಂಕ

ಕೊರೊನಾದ ಎರಡನೇ ಅಲೆಯು ಕಡಿಮೆಯಾಗುತ್ತಿದ್ದಂತೆ, ಅನೇಕ ರಾಜ್ಯಗಳು ಕೇಂದ್ರ ಗೃಹ ಸಚಿವಾಲಯ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಲು ಪ್ರಾರಂಭಿಸಿವೆ. ಇದರಿಂದ ಮತ್ತೆ ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. ಇದರಿಂದ ಕೇಂದ್ರ ಗೃಹ ಸಚಿವಾಲಯವು ಆತಂಕವನ್ನು ವ್ಯಕ್ತಪಡಿಸಿದೆ.

ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ನೇಮಕಗೊಂಡ ಭಾರತೀಯ ಮೂಲದ ಸತ್ಯಾ ನಾಡೆಲ್ಲಾ !

ವಿಶ್ವದ ಸಾಫ್ಟ್‌ವೇರ್ ತಯಾರಿಕಾ ದೈತ್ಯ ‘ಮೈಕ್ರೋಸಾಫ್ಟ್ ಕಾರ್ಪೊರೇಶನ್’ನ ಅಧ್ಯಕ್ಷರಾಗಿ ಭಾರತೀಯ ಮೂಲದ ಸತ್ಯಾ ನಾಡೆಲಾ ಅವರನ್ನು ನೇಮಿಸಲಾಗಿದೆ. ೫೩ ವರ್ಷದ ನಾಡೆಲಾ ಅವರನ್ನು ೨೦೧೪ ರಲ್ಲಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಎಂದು ನೇಮಿಸಲಾಗಿತ್ತು.

ಪೂಜ್ಯಪಾದ ಸಂತಶ್ರಿ ಅಸಾರಾಮಜಿ ಬಾಪು ಅವರಿಗೆ ಜಾಮೀನು ಏಕೆ ಇಲ್ಲ ?

ವಸಾಯಿ ಸೆಷನ್ಸ್ ನ್ಯಾಯಾಲಯವು ಪುರಿಗೆ ನೀಡಿದ ಜಾಮೀನು ನೀಡಿದಕ್ಕೆ ಪೂಜ್ಯಪಾದ ಸಂತಶ್ರೀ ಅಸಾರಾಮ ಬಾಪು ಅವರ ಭಕ್ತರು ಸಾಮಾಜಿಕ ಮಾಧ್ಯಮಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪರ್ಲ್ ಬಂಧನಕ್ಕೊಳಗಾದ ಕೇವಲ ೧೧ ದಿನಗಳಲ್ಲಿ ಅವರಿಗೆ ಹೇಗೆ ಜಾಮೀನು ಸಿಕ್ಕಿತು ? ಎಂದು ಅವರು ಪ್ರಶ್ನಿಸಿದರು.

ಐ.ಎಂ.ಎ.ನ ಅಧ್ಯಕ್ಷ ಡಾ. ಜಾನ್‍ರೋಜ ಜಯಲಾಲ್ ಅವರ ಮನವಿಯನ್ನು ತಿರಸ್ಕರಿಸಿದ ದೆಹಲಿ ಉಚ್ಚನ್ಯಾಯಾಲಯ

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐ.ಎಂ.ಎ.ನ) ಅಧ್ಯಕ್ಷ ಡಾ. ಜಾನ್‍ರೋಜ ಆಸ್ಟಿನ್ ಜಯಲಾಲ್ ಅವರಿಗೆ ಯಾವುದೇ ಧರ್ಮದ ಪ್ರಚಾರ ಮಾಡಲು ತಮ್ಮ ಸಂಘಟನೆಯ ವೇದಿಕೆಯನ್ನು ಬಳಸದಂತೆ ಕನಿಷ್ಠ ನ್ಯಾಯಾಲಯವು ಇತ್ತಿಚೆಗೆ ಆದೇಶಿಸಿತ್ತು.

ಆದಾಯ ತೆರಿಗೆ ಇಲಾಖೆಯಿಂದ ಪಿ.ಎಫ್.ಐ.ನ ನೋಂದಣಿ ರದ್ದು !

ಆದಾಯ ತೆರಿಗೆ ಇಲಾಖೆಯು ಜಿಹಾದಿ ಸಂಸ್ಥೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.)ದ ನೊಂದಣಿಯನ್ನು ರದ್ದು ಪಡಿಸಿದೆ. ಸೆಕ್ಷನ್ ೧೨ ಅ (೩) ರ ಅಡಿಯಲ್ಲಿ ಒಂದು ಸಂಸ್ಥೆ ಅಥವಾ ಟ್ರಸ್ಟ್ ಕಾರ್ಯನಿರ್ವಹಿಸದಿದ್ದರೆ, ಅದರ ನೋಂದಣಿಯನ್ನು ರದ್ದುಗೊಳಿಸಬಹುದು.

ಇಸ್ಲಾಮಿಕ್ ಸ್ಟೇಟ್‍ಗೆ ಭರ್ತಿಯಾಗಿದ್ದ ಮತ್ತು ಈಗ ಅಫಘಾನ್ ಜೈಲಿನಲ್ಲಿರುವ ೪ ಕೇರಳ ಮಹಿಳೆಯರನ್ನು ಭಾರತವು ವಾಪಾಸು ಕರೆ ತರುವುದಿಲ್ಲ !

ಅಫಘಾನಿಸ್ತಾನಕ್ಕೆ ಹೋಗಿ ಇಸ್ಲಾಮಿಕ್ ಸ್ಟೇಟ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಗೆ ಸಹಭಾಗಿಯಾದ ನಾಲ್ಕು ಭಾರತೀಯ ಮಹಿಳೆಯರಿಗೆ ಭಾರತಕ್ಕೆ ಮರಳಲು ಅವಕಾಶ ನೀಡುವುದಿಲ್ಲ. ಈ ಮಾಹಿತಿಯನ್ನು ಹಿರಿಯ ಅಧಿಕಾರಿಯೊಬ್ಬರು ನೀಡಿದ್ದಾರೆ. ಒಂದು ಆಂಗ್ಲ ದಿನಪತ್ರಿಕೆ ಈ ಬಗ್ಗೆ ವರದಿಯನ್ನು ಪ್ರಕಟಿಸಿದೆ.

ಲಡಾಖ್ ಗಡಿಯಲ್ಲಿ ಭಾರತವೇ ಹಿಂದೆ ಸಾಗುತ್ತಿದ್ದು ಚೀನಾವು ಮುಂದೆ ಸರಿಯುತ್ತಿದೆ ! – ಡಾ. ಸುಬ್ರಹ್ಮಣ್ಯಂ ಸ್ವಾಮಿಯ ಹೇಳಿಕೆ

ಲಡಾಖ್‍ನಲ್ಲಿ ಸಂಘರ್ಷ ನಡೆದ ಸ್ಥಳದಿಂದ ಭಾರತೀಯ ಸೇನೆಯು ಮಾತ್ರ ಹಿಂದೆ ಸರಿದಿದೆ ಆದರೆ, ಚೀನಾ ಸೇನೆ ಇನ್ನೂ ಇದೆ ಮತ್ತು ಅದು ಮುಂದೆ ಬಂದಿದೆ ಎಂದು ಬಿಜೆಪಿ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

ಸೂರ್ಯಗ್ರಹಣದಿಂದ ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಯಿದೆ ! – ಜ್ಯೋತಿಷ್ಯರ ಭವಿಷ್ಯವಾಣಿ

ಚೀನಾ ಮತ್ತು ಅಮೇರಿಕಾದಲ್ಲಿ ಚಂದ್ರ ಮತ್ತು ಸೂರ್ಯಗ್ರಹಣ ಇವೆರಡೂ ಕಂಡುಬಂದಿದ್ದವು. ಆದ್ದರಿಂದ ಮುಂದಿನ ೪೫ ರಿಂದ ೯೦ ದಿನಗಳಲ್ಲಿ ಉಭಯ ದೇಶಗಳ ನಡುವೆ ಯುದ್ಧದ ಸ್ಥಿತಿ ಉದ್ಭವಿಸಬಹುದು. ಯುದ್ಧದ ಸ್ಥಿತಿ ವಿಶ್ವದ ಮಧ್ಯದಲ್ಲಿ ಕಂಡುಬರಲಿದೆ. ಮಧ್ಯದಲ್ಲಿ ಇಸ್ರೈಲ್ ದೇಶವಿದೆ. ಅಲ್ಲಿಯೂ ಸಹ ಯುದ್ಧದಂತಹ ಪರಿಸ್ಥಿತಿ ಮತ್ತೆ ಉದ್ಭವಿಸಬಹುದು.