ಆರ್.ಟಿ.ಐ. ನಿಂದ (ಮಾಹಿತಿ ಹಕ್ಕು) ಎನ್.ಸಿ.ಇ.ಆರ್.ಟಿ.ಯ ಸುಳ್ಳು ಮತ್ತೆ ಬಹಿರಂಗ !‘ಮಹಿಳೆಯರು ವಿದ್ಯೆ ಕಲಿತರೆ ಅವರು ವಿಧವೆಯರಾಗುತ್ತಾರೆ’ ಎಂದು ಭಾರತದಲ್ಲಿ ಹೇಳಲಾಗುತ್ತದೆ ಎಂದು ಹೇಳಿಕೆ ! |
ಕೇಂದ್ರದಲ್ಲಿರುವ ಬಿಜೆಪಿ ಸರಕಾರವು ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎನ್.ಸಿ.ಇ.ಆರ್.ಟಿ.ಯ ಹಿಂದುದ್ವೇಷವನ್ನು ತಡೆಯಲು ಪ್ರಯತ್ನಿಸಬೇಕು, ಇದುವೇ ಹಿಂದೂಗಳಿಗೆ ಅಪೇಕ್ಷಿತವಿದೆ !
ನವ ದೆಹಲಿ – ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎನ್.ಸಿ.ಇ.ಆರ್.ಟಿ.ಯ) ಪುಸ್ತಕದಲ್ಲಿ ಸತಿಪದ್ಧತಿಯು ಯಾವಾಗದಿಂದ ನಡೆಯುತ್ತಿದೆ. ಇದರ ಇತಿಹಾಸವನ್ನು ನೀಡಲಾಗಿದೆ. ಈ ಬಗ್ಗೆ ಸಾಕ್ಷ್ಯವನ್ನು ಪಡೆಯಲು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಯತ್ನಿಸಿದಾಗ ಎನ್.ಸಿ.ಇ.ಆರ್.ಟಿ.ಯು ‘ನಮ್ಮ ಬಳಿ ಇದರ ಬಗ್ಗೆ ಯಾವುದೇ ಪುರಾವೆಗಳಿಲ್ಲ’ ಎಂದು ಉತ್ತರಿಸಿರುವುದು ಬಹಿರಂಗಗೊಂಡಿದೆ. ಸಾಮಾಜಿಕ ಕಾರ್ಯಕರ್ತ ವಿವೇಕ್ ಪಾಂಡೆ ಮಾಹಿತಿ ಹಕ್ಕು ಕಾಯ್ದೆಯಡಿ ಈ ಬಗ್ಗೆ ಮಾಹಿತಿ ಕೋರಿದ್ದರು.
೧. ಎನ್.ಸಿ.ಇ.ಆರ್.ಟಿ.ಯ ೮ ನೇ ತರಗತಿಯ, ‘ವುಮನ್ : ಕಾಸ್ಟ ಅಂಡ್ ರಿಫಾಮ್ರ್ಸ್’ ಈ ಪಾಠದಲ್ಲಿ ಸತಿ ಪದ್ಧತಿಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಇದರಲ್ಲಿ, ಭಾರತದ ಕೆಲವು ಭಾಗಗಳಲ್ಲಿ, ವಿಧವೆಯರು ತಮ್ಮ ಗಂಡಂದಿರ ಸಾವಿನ ನಂತರ ಚಿತೆಯಲ್ಲಿ ತನ್ನನ್ನು ಅರ್ಪಿಸುತ್ತಿದ್ದರೋ, ಅವರನ್ನು ಪ್ರಶಂಸಿಸಲಾಗುತ್ತಿತ್ತು. ವಿಧವೆಯರ ಸಂಪತ್ತಿನ ಅಧಿಕಾರಗಳ ಮೇಲೆಯೂ ನಿರ್ಬಂಧವಿತ್ತು. ಮಹಿಳೆಯರಿಗೆ ಶಿಕ್ಷಣ ಕೂಡ ಸಿಗುತ್ತಿರಲಿಲ್ಲ. ದೇಶದ ಕೆಲವು ಭಾಗಗಳಲ್ಲಿ, ಮಹಿಳೆಯರು ಶಿಕ್ಷಣ ಪಡೆದರೆ ಅವರು ವಿಧವೆಯರಾಗುತ್ತಾರೆ ಎಂದು ನಂಬಲಾಗಿತ್ತು. (ಹೀಗೆ, ಉದ್ದೇಶಪೂರ್ವಕವಾಗಿ ಹಿಂದೂಗಳ ಧರ್ಮಶಾಸ್ತ್ರದಲ್ಲಿಲ್ಲದ ಆಚರಣೆಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುವ ಮೂಲಕ ಹಿಂದೂ ಧರ್ಮವನ್ನು ದೂಷಿಸುವ ಪ್ರಯತ್ನ ಇದಾಗಿದೆ. ಇದನ್ನು ಹಿಂದುತ್ವನಿಷ್ಠರು ಮತ್ತು ಧಾರ್ಮಿಕ ಸಂಸ್ಥೆಗಳು ಕಾನೂನುಬದ್ಧವಾಗಿ ವಿರೋಧಿಸಬೇಕು ಮತ್ತು ಈ ಮಾಹಿತಿಯನ್ನು ತೆಗೆದುಹಾಕಲು ಪ್ರಯತ್ನಿಸಬೇಕು !
ಎನ್.ಸಿ.ಇ.ಆರ್.ಟಿ.ಯ ಪುಸ್ತಕದಿಂದ ಈ ಮೊದಲಿದ್ದ ಆಕ್ಷೇಪಾರ್ಹ ಪಾಠಗಳು ಮತ್ತು ವಿಷಯಗಳು !
೧. ಎನ್.ಸಿ.ಇ.ಆರ್.ಟಿ.ಯ ೧೨ ನೇ ತರಗತಿಯ ಇತಿಹಾಸದ ಪುಸ್ತಕದಲ್ಲಿ, ಮೊಘಲ್ ಬಾದಶಾಹ ಔರಂಗಜೇಬನು ಯುದ್ಧದ ಸಮಯದಲ್ಲಿ ಹಾನಿಗೊಳಗಾದ ಹಿಂದೂ ದೇವಾಲಯಗಳ ದುರಸ್ತಿಗೆ ಹಣಕಾಸಿನ ಸಹಾಯ ನೀಡಿದ್ದನೆಂದು ಹೇಳಲಾಗಿತ್ತು. ಈ ಬಗ್ಗೆ ಎನ್.ಸಿ.ಇ.ಆರ್.ಟಿ.ಯ ಬಳಿ ಪುರಾವೆ ಕೇಳಿದಾಗ, ಅದನ್ನು ನೀಡಲು ಅದಕ್ಕೆ ಆಗಿರಲಿಲ್ಲ.
೨. ಕುತುಬುದ್ದೀನ್ ಐಬಕ್ ಮತ್ತು ಇಲ್ತುತಮಿಶನು ದೆಹಲಿಯಲ್ಲಿರುವ ಕುತುಬ್ ಮಿನಾರ್ ನಿರ್ಮಿಸಿದ್ದರು ಎಂದು ಎನ್.ಸಿ.ಇ.ಆರ್.ಟಿ. ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಸಾಕ್ಷ್ಯ ಕೇಳಿದಾಗ, ಎನ್.ಸಿ.ಇ.ಆರ್.ಟಿ ಅದನ್ನು ನೀಡಲು ಸಹ ಸಾಧ್ಯವಾಗಲಿಲ್ಲ.
೩. ಮೊದಲ ಪುಸ್ತಕದಲ್ಲಿ ‘ಆಮ್ ಕಿ ಕಟೋರಿ’ ಎಂಬ ಹೆಸರಿನ ಕವನವಿದೆ. ‘ಈ ಕವಿತೆಯು ಅಸ್ಪಷ್ಟವಾಗಿದೆ ಮತ್ತು ಅಶ್ಲೀಲ ಅರ್ಥವನ್ನು ಹೊಂದಿದೆ’ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲಾಗಿತ್ತು, ಅದನ್ನು ಪುಸ್ತಕದಿಂದ ತೆಗೆದುಹಾಕುವ ಬೇಡಿಕೆಯೂ ಮಾಡಲಾಗಿತ್ತು.
೪. ಎನ್.ಸಿ.ಇ.ಆರ್.ಟಿ.ಯ ೨೦೦೭ ರಲ್ಲಿ ಪ್ರಕಟಿಸಿದ ಪುಸ್ತಕದಲ್ಲಿ. ‘ದಿ ಲಿಟಲ್ ಬುಲಿ’ ಈ ಅಧ್ಯಾಯದಲ್ಲಿ ಓರ್ವ ಹುಡುಗನಿಗೆ ‘ಹರಿ’ ಎಂದು ಹೆಸರಿಸಲಾಗಿದೆ. ಅವನು ಹುಡುಗಿಯರನ್ನು ಕೀಟಲೆ ಮಾಡುತ್ತಾನೆ, ಅವರಲ್ಲಿ ಭಯ ನಿರ್ಮಾಣ ಮಾಡುತ್ತಾನೆ ಮತ್ತು ಅವರನ್ನು ಹಿಂಸಿಸುತ್ತಾನೆ. ಆದ್ದರಿಂದ ಎಲ್ಲರೂ ಅವನಿಗೆ ಭಯಪಡುತ್ತಾರೆ ಮತ್ತು ದ್ವೇಷಿಸುತ್ತಾರೆ. ಕೊನೆಯಲ್ಲಿ ಒಂದು ಏಡಿ ಅವನನ್ನು ಕಚ್ಚಿ ಅವನಿಗೆ ಪಾಠ ಕಲಿಸುತ್ತದೆ ಎಂದು ಬರೆಯಲಾಗಿದೆ. ಇದರಿಂದ ಭಗವಂತ ವಿಷ್ಣುವಿನ ಹೆಸರನ್ನು ಕಳಂಕಿತಗೊಳಿಸುವ ಪ್ರಯತ್ನ ಮಾಡಲಾಗಿದೆ.