ಸೂರ್ಯಗ್ರಹಣದಿಂದ ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಯಿದೆ ! – ಜ್ಯೋತಿಷ್ಯರ ಭವಿಷ್ಯವಾಣಿ

ನವ ದೆಹಲಿ – ಜೂನ್ ೧೦ ರಂದು ಈ ವರ್ಷದ ಮೊದಲ ಸೂರ್ಯಗ್ರಹಣ ಆಯಿತು. ಇದಕ್ಕೂ ಮೊದಲು ಮೇ ೨೬ ರಂದು ಚಂದ್ರಗ್ರಹಣ ಆಗಿತ್ತು. ಈ ಎರಡೂ ಗ್ರಹಣಗಳು ಭಾರತದಲ್ಲಿ ಕೇವಲ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದಿಂದ ಸ್ವಲ್ಪ ಮಟ್ಟಿಗೆ ಮಾತ್ರ ಕಂಡುಬಂತು. ಸೂರ್ಯಗ್ರಹಣವು ಜ್ಯೇಷ್ಠ ಅಮಾವಾಸ್ಯೆ ಮತ್ತು ಶನಿ ಜಯಂತಿ ಈ ದಿನದಂದು ಬಂದಿರುವುದರಿಂದ ಇದಕ್ಕೆ ವಿಶೇಷ ಮಹತ್ವವು ಪ್ರಾಪ್ತವಾಗಿದೆ. ಈ ಬಗ್ಗೆ ‘ಆಜ್ ತಕ್’ ಸುದ್ದಿ ಚಾನೆಲ್ ಪ್ರಕಟಿಸಿದ ಜ್ಯೋತಿಷಿ ಕಮಲ ನಂದಲಾಲ್ ಅವರ ಭವಿಷ್ಯವಾಣಿಯ ಪ್ರಕಾರ, ಇದು ಜಗತ್ತಿನಾದ್ಯಂತ ಅನಿಷ್ಟ ಪರಿಣಾಮ ಬೀರಲಿದೆ. ಜಗತ್ತಿನಲ್ಲಿ ಯುದ್ಧಗಳು ಮತ್ತು ಬೆಂಕಿ ಸಂಭವಿಸುವ ಸಾಧ್ಯತೆಯಿದೆ.

ಜ್ಯೋತಿಷಿ ಕಮಲ್ ನಂದಲಾಲ್ ಅವರ ಭವಿಷ್ಯವಾಣಿ

೧. ಮೇ ೨೬ ರಂದು ಭಾರತದ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದಲ್ಲಿ ಚಂದ್ರ ಗ್ರಹಣ ಕಂಡಿತು. ಈಗ ಸೂರ್ಯಗ್ರಹಣವೂ ಅಲ್ಲಿಯೇ ಕಂಡುಬಂದಿದೆ. ಆದ್ದರಿಂದ ಕಾಶ್ಮೀರ, ಪಂಜಾಬ್, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ನಾಗಾಲ್ಯಾಂಡ್ ಈ ಪ್ರದೇಶಗಳಲ್ಲಿ ಬಿಕ್ಕಟ್ಟಿನ ಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಮುಂದಿನ ೪೫ ರಿಂದ ೯೦ ದಿನಗಳಲ್ಲಿ ನುಸುಳುವಿಕೆಯ ಘಟನೆ ಅಥವಾ ಗಡಿಯಲ್ಲಿ ದೊಡ್ಡ ಬಿಕ್ಕಟ್ಟು ಉದ್ಭವಿಸಬಹುದು. ಜಗತ್ತಿನಲ್ಲಿ ಭೂಕಂಪಗಳು ಸಂಭವಿಸಬಹುದು.

೨. ಚೀನಾ ಮತ್ತು ಅಮೇರಿಕಾದಲ್ಲಿ ಚಂದ್ರ ಮತ್ತು ಸೂರ್ಯಗ್ರಹಣ ಇವೆರಡೂ ಕಂಡುಬಂದಿದ್ದವು. ಆದ್ದರಿಂದ ಮುಂದಿನ ೪೫ ರಿಂದ ೯೦ ದಿನಗಳಲ್ಲಿ ಉಭಯ ದೇಶಗಳ ನಡುವೆ ಯುದ್ಧದ ಸ್ಥಿತಿ ಉದ್ಭವಿಸಬಹುದು. ಯುದ್ಧದ ಸ್ಥಿತಿ ವಿಶ್ವದ ಮಧ್ಯದಲ್ಲಿ ಕಂಡುಬರಲಿದೆ. ಮಧ್ಯದಲ್ಲಿ ಇಸ್ರೈಲ್ ದೇಶವಿದೆ. ಅಲ್ಲಿಯೂ ಸಹ ಯುದ್ಧದಂತಹ ಪರಿಸ್ಥಿತಿ ಮತ್ತೆ ಉದ್ಭವಿಸಬಹುದು.