ಕಾಶ್ಮೀರ ಕಣಿವೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಕರೆದಿರುವ ಕೇಂದ್ರ ಸರಕಾರ !

ಸೆಕ್ಷನ್ ೩೭೦ ತೆಗೆದ ನಂತರ ಮೊದಲ ಸಭೆ !

ಪಾಕ್‍ಪ್ರೇಮಿ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸುವುದರ ಮೂಲಕ ಏನನ್ನೂ ಸಾಧಿಸಲಾಗುವುದಿಲ್ಲ, ಇದು ಇತಿಹಾಸವೇ ಆಗಿದೆ ಹಾಗಾಗಿ, ಅಂತಹ ಸಭೆಗಳನ್ನು ನಡೆಸುವುದು ಅಂದರೆ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದಂತೆ ಆಗಿದೆ, ಎಂದು ದೇಶಪ್ರೇಮಿಗಳಿಗೆ ಅನಿಸುತ್ತದೆ !

ನವ ದೆಹಲಿ : ೨೦೧೯ ರ ಆಗಸ್ಟ್‍ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ ನೇ ವಿಧಿಯನ್ನು ಕೇಂದ್ರ ಸರಕಾರವು ರದ್ದುಪಡಿಸಿದ ನಂತರ ಮೊದಲ ಬಾರಿಗೆ ಕಾಶ್ಮೀರ ಕಣಿವೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಜೂನ್ ೨೪ ರಂದು ಕರೆಯಲಾಗಿದೆ. ಸಭೆಯು ದೆಹಲಿಯಲ್ಲಿ ನಡೆಯಲಿದೆ.

ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದಾಗಿನಿಂದ, ಇದನ್ನು ಆಡಳಿತವು ನಿಯಂತ್ರಿಸುತ್ತದೆ. ಅಲ್ಲಿ ಸರಕಾರವನ್ನು ರಚಿಸಲು ಇನ್ನೂ ಚುನಾವಣೆ ನಡೆದಿಲ್ಲ. ಆದ್ದರಿಂದ, ಅದರ ಬಗ್ಗೆ ಈ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ. ಕಾಶ್ಮೀರದ ‘ಗುಪಕಾರ ಗಟಾ’ದೊಂದಿಗೆ ಪಿಡಿಪಿಯ ಅಧ್ಯಕ್ಷ ಮೆಹಬೂಬಾ ಮುಫ್ತಿ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಜೂನ್ ೧೦ ರಂದು ‘ಗುಪಕಾರ್ ಗುಂಪಿ’ನ ಸಭೆಯ ನಂತರ, ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಸರ್ವೇಸರ್ವ ಫಾರೂಕ್ ಅಬ್ದುಲ್ಲಾ ಅವರು, ‘ನಾವು ಇನ್ನೂ ಚರ್ಚೆಯ ಬಾಗಿಲು ಮುಚ್ಚಿಲ್ಲ. ಕೇಂದ್ರವು ನಮ್ಮನ್ನು ಚರ್ಚೆಗೆ ಆಹ್ವಾನಿಸಿದರೆ, ನಾವು ಅದರ ಬಗ್ಗೆ ವಿಚಾರ ಮಾಡುವೆವು’, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.