ಅಸ್ಸಾಂ ಸರಕಾರದಿಂದ ಕೊರೊನಾದಿಂದ ಮೃತಪಟ್ಟವರ ಪತ್ನಿಯರಿಗೆ ಎರಡುವರೆ ಲಕ್ಷ ರೂಪಾಯಿಯ ಸಹಾಯ !

ಅಸ್ಸಾಂ ಸರಕಾರವು ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಪತ್ನಿಯರಿಗೆ ಒಟ್ಟು ೨ ಲಕ್ಷ ೫೦ ಸಾವಿರ ಮೊತ್ತದಷ್ಟು ಸಹಾಯವನ್ನು ಏಕಗಂಟಿನಲ್ಲಿ ನೀಡುವ ಆಯೋಜನೆಯನ್ನು ಆರಂಭಿಸಿದರು. ಯಾವ ಕುಟುಂಬದ ವಾರ್ಷಿಕ ಆದಾಯ ೫ ಲಕ್ಷದ ಒಳಗಿದೆಯೋ, ಅಂತಹ ಕುಟುಂಬದವರಿಗೆ ಈ ಸಹಾಯ ಸಿಗಲಿದೆ.

ದೇವಾಲಯಗಳು, ಮಠಗಳು ಮುಂತಾದ ಸ್ಥಳಗಳಿಂದ ೫ ಕಿ.ಮೀ ಸುತ್ತಲಿನ ಪ್ರದೇಶದಲ್ಲಿ ಗೋಮಾಂಸ ಖರೀದಿ, ಮಾರಾಟವನ್ನು ನಿಷೇಧಿಸಲಾಗುವುದು !

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರ ಸರಕಾರವು ಹೊಸ ‘ಗೋ ಸಂರಕ್ಷಣಾ ಮಸೂದೆ’ಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಹಸುಗಳನ್ನು ರಕ್ಷಿಸುವ ಈ ಮಸೂದೆಯ ಪ್ರಕಾರ, ಹಿಂದೂಗಳು, ಜೈನರು, ಸಿಖ್ಖರು ಮತ್ತು ಗೋಮಾಂಸ ಸೇವಿಸದವರು

ಹೆಚ್ಚಿನ ಧರ್ಮದ ಜನರು ಹಿಂದೂ ವಂಶದವರು ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಹಿಂದುತ್ವವು ೫ ಸಾವಿರ ವರ್ಷಗಳ ಹಿಂದೆ ಆರಂಭವಾಗಿದೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಿಂದುತ್ವವು ಒಂದು ಜೀವನ ಪದ್ಧತಿಯಾಗಿದೆ. ಆದ್ದರಿಂದ ಇದನ್ನು ಯಾರು ಹೇಗೆ ತಡೆಯಬಲ್ಲರು ? ಹೆಚ್ಚಿನ ಎಲ್ಲಾ ಧರ್ಮದ ಜನರು ಹಿಂದು ವಂಶದವರಾಗಿದ್ದಾರೆ. ಆದ್ದರಿಂದ ಹಿಂದುತ್ವವನ್ನು ಅಳಿಸಲು ಸಾಧ್ಯವಿಲ್ಲ.

ಅಸ್ಸಾಂನಲ್ಲಿಯೂ ಬರಲಿದೆ ‘ಲವ್ ಜಿಹಾದ್’ ವಿರುದ್ಧ ಕಾನೂನು !

ಜಿಹಾದ್ ವಿರೋಧಿ ಕಾನೂನು ಜಾರಿಗೆ ತಂದ ದೇಶದಲ್ಲಿ ತಮಿಳುನಾಡು ರಾಜ್ಯ ಮೊದಲನೆಯದು; ಆದಾಗ್ಯೂ, ೨೦೦೩ ರಲ್ಲಿ ಅವರು ಅದನ್ನು ರದ್ದುಗೊಳಿಸಿದರು. ಪ್ರಸ್ತುತ, ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ರಾಜಸ್ಥಾನ, ಜಾರ್ಖಂಡ್, ಛತ್ತೀಸಗಡ, ಮಧ್ಯಪ್ರದೇಶ, ಗುಜರಾತ್ ಮತ್ತು ಒಡಿಶಾದಲ್ಲಿ ಜಿಹಾದ್ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗಿದೆ.

ಅತ್ಯಾಚಾರದ ಆರೋಪಿಯು ಪರಾರಿಯಾಗುತ್ತಿರುವಾಗ ಪೊಲೀಸರು ಗುಂಡುಹಾರಾಟ ಮಾಡಲೇ ಬೇಕಾಗುತ್ತದೆ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅತ್ಯಾಚಾರ ಅಪರಾಧವಿರುವ ಆರೋಪಿಯು ಪರಾರಿಯಾಗುತ್ತಿದ್ದರೆ ಮತ್ತು ಆತ ಪೊಲೀಸರಿಂದ ಶಸ್ತ್ರವನ್ನು ಕಸಿಯಲು ಪ್ರಯತ್ನಿಸುತ್ತಿದ್ದರೆ, ಪೊಲೀಸರು ಗುಂಡು ಹಾರಾಟ ಮಾಡಲೇ ಬೇಕಾಗುತ್ತದೆ; ಆದರೆ ಎದೆಯ ಮೇಲೆ ಅಲ್ಲ. ಕಾನೂನಿನ ಪ್ರಕಾರ ‘ನೀವು ಕಾಲಿಗೆ ಗುಂಡು ಹೊಡೆಯಬಹುದು’, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಪೊಲೀಸರ ಸಭೆಯಲ್ಲಿ ಹೇಳಿದರು.

ಅಸ್ಸಾಂನಲ್ಲಿ ಹೆಚ್ಚಾಗುತ್ತಿರುವ ಮುಸಲ್ಮಾನರ ಜನಸಂಖ್ಯೆಯನ್ನು ನಿಯಂತ್ರಿಸುವ ಪ್ರಯತ್ನ

ಮುಸಲ್ಮಾನರ ಜನಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳವು ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ಅಡಚಣೆಯಾಗಿದೆ ಎಂದು ಮುಸಲ್ಮಾನ ನೇತಾರರು ಈ ಸಭೆಯಲ್ಲಿ ಒಪ್ಪಿಕೊಂಡರು. ಮತ್ತು ಅದನ್ನು ದೂರಗೊಳಿಸಲು ಪರಿಹಾರವನ್ನು ಸೂಚಿಸಲು ೮ ಗುಂಪುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾಜ್ಯದ ಮುಸಲ್ಮಾನ ನಾಯಕರು ಸಹಭಾಗಿಯಾಗಲಿದ್ದಾರೆ.

ಅಸ್ಸಾಂನಲ್ಲಿ, ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ೨ ಮಕ್ಕಳ ಧೋರಣೆಯನ್ನು ಜಾರಿಗೆ ತರಲಾಗುವುದು ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅಸ್ಸಾಂ ರಾಜ್ಯ ಸರಕಾರದಿಂದ ನಡೆಸುತ್ತಿರುವ, ಅದೇರೀತಿ ಜನರಿಗೆ ಆರ್ಥಿಕ ಸಹಾಯ ಮಾಡುವ ದೃಷ್ಟಿಯಿಂದ ಜಾರಿಗೊಳಿಸಿದ್ದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಎರಡೇ ಮಕ್ಕಳನ್ನು ಹೊಂದುವ ಧೋರಣೆಯ ಅಗತ್ಯವೆಂದು ನಿರ್ಧರಿತವಾಗಲಿದೆ.

೨೦೩೮ ರ ವೇಳೆಗೆ ಅಸ್ಸಾಂನಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗುವರು !

ಅಸ್ಸಾಂನಲ್ಲಿ ಪ್ರಸ್ತುತ ಮುಸಲ್ಮಾನರ ಜನಸಂಖ್ಯೆಯ ಬೆಳವಣಿಗೆಯ ದರವು ಹೀಗೆಯೇ ಮಂದುವರಿದರೆ, ೨೦೩೮ ರ ಹೊತ್ತಿಗೆ ಅಸ್ಸಾಂನಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವರು, ಮುಸಲ್ಮಾನರು ಬಹುಸಂಖ್ಯಾತರಾಗುವರು ಎಂದು ಅಸ್ಸಾಂನಲ್ಲಿ ಬಿಜೆಪಿ ಶಾಸಕ ಮತ್ತು ಪ್ರದೇಶಾಧ್ಯಕ್ಷ ಜಯಂತ ಮಲ್ಲಾ ಬರುವಾ ಇವರು ಆತಂಕ ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆಯ ಸಮಯದಲ್ಲಿ ಕೊರೊನಾ ಪೀಡಿತನು ಸಾವನ್ನಪ್ಪಿದ್ದರಿಂದ ಮತಾಂಧ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ !

ಅಸ್ಸಾಂನ ಹೊಜೈ ಜಿಲ್ಲೆಯ ಒಂದು ಕೋವಿಡ್ ಆರೈಕೆ ಕೇಂದ್ರದಲ್ಲಿ ಕೊರೋನಾ ಪೀಡಿತ ರೋಗಿಯೊಬ್ಬರು ಮೃತನಾದಾಗ ಆತನ ಮತಾಂಧ ಕುಟುಂಬಸ್ಥರು ಅಲ್ಲಿಯ ಡಾ. ಸೆಜುಕುಮಾರ ಸೇನಾಪತಿಯವರ ಕೇಂದ್ರಕ್ಕೆ ನುಗ್ಗಿ ಥಳಿಸಿ ಕೇಂದ್ರವನ್ನು ಧ್ವಂಸಮಾಡಿದರು.

ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅಸ್ಸಾಂನ ೩ ಶಾಸಕರು !

ದೇವಭಾಷೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರಿಗೆ ಅಭಿನಂದನೆಗಳು ! ಇವರಿಂದ ದೇಶದಲ್ಲಿ ಹೊಸದಾಗಿ ಚುನಾಯಿತರಾದ ಇತರ ಶಾಸಕರು ಸಹ ಇವರ ಆದರ್ಶವನ್ನು ತೆಗೆದುಕೊಂಡು ಇಂತಹ ಪ್ರಯತ್ನಿಸಬೇಕು !