
ಇಸ್ಲಾಮಾಬಾದ್ (ಪಾಕಿಸ್ತಾನ) – ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯವಾಗಿದೆ ಮತ್ತು ಒಂದು ಬಲಿಷ್ಠ ಅಮೆರಿಕ ಪಾಕಿಸ್ತಾನಕ್ಕೆ ಅಗತ್ಯವಾಗಿದೆ ಎಂದು ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ನಟಾಲಿ ಎ. ಬೇಕರ್ ಹೇಳಿಕೆ ನೀಡಿದ್ದಾರೆ. ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಅಂಗವಾಗಿ ಅಮೆರಿಕ ರಾಯಭಾರ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಬೇಕರ್ ಅವರು ಇರಾನ್ ಯುದ್ಧದಲ್ಲಿ ವಹಿಸಿದ ಪಾತ್ರಕ್ಕಾಗಿ ಪಾಕಿಸ್ತಾನವನ್ನು ಶ್ಲಾಘಿಸಿದರು. ಅವರು 1979 ರ ಇರಾನಿನ ಕ್ರಾಂತಿಯ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಅತ್ಯುನ್ನತ ಮಟ್ಟದ ಮಾತುಕತೆಗೆ ಏಪ್ರಿಲ್‌ನಲ್ಲಿ ಪಾಕಿಸ್ತಾನವು ಕೇಂದ್ರಬಿಂದುವಾಗಿತ್ತು ಎಂದು ಹೇಳಿದರು.
ಎರಡು ವಿರೋಧಿ ದೇಶಗಳ ನಡುವಿನ ಮಾತುಕತೆಯನ್ನು ಸುಗಮಗೊಳಿಸುವಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಿದೆ ಎಂದು ಬೇಕರ್ ಹೇಳಿದರು. ಇದು ಪಾಕಿಸ್ತಾನದ ಆಧುನಿಕ ಇತಿಹಾಸದಲ್ಲಿ ಅತ್ಯಂತ ಭವ್ಯವಾದ ಕ್ಷಣವಾಗಿದೆ. ಅಧ್ಯಕ್ಷ ಟ್ರಂಪ್ ಅವರು ಮೇ 2025 ರಲ್ಲಿ ನಡೆದ ಕದನ ವಿರಾಮದ ಶ್ರೇಯಸ್ಸನ್ನು ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ಅವರ ನಾಯಕತ್ವಕ್ಕೆ ನೀಡಿದ್ದಾರೆ. ಅವರು ಇದನ್ನು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯ ದೇಶಗಳ ನಡುವಿನ ಯುದ್ಧವನ್ನು ತಡೆಯುವಲ್ಲಿ ದೊಡ್ಡ ಕೊಡುಗೆ ಎಂದು ಕರೆದರು. ಪಾಕಿಸ್ತಾನದ ನಾಯಕರ ತಿಳುವಳಿಕೆ, ಅಂದರೆ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮತ್ತು ಅಪಾಯಕಾರಿ ಸಂಘರ್ಷವನ್ನು ಶಾಂತಗೊಳಿಸುವ ಇಚ್ಛೆಯನ್ನು ಅಮೆರಿಕ ಮರೆತಿಲ್ಲ. ಅದನ್ನು ಶ್ಲಾಘಿಸಲಾಗುತ್ತದೆ ಮತ್ತು ಇದರಿಂದ ಒಂದು ಹೊಸ ಅಧ್ಯಾಯ ಪ್ರಾರಂಭವಾಗಿದೆ. ಸೆಪ್ಟೆಂಬರ್‌ನಲ್ಲಿ ಈ ಸಂಬಂಧ ಇನ್ನಷ್ಟು ಗಟ್ಟಿಯಾಯಿತು, ಅಧ್ಯಕ್ಷ ಟ್ರಂಪ್ ಅವರು ಓವಲ್ ಕಚೇರಿಯಲ್ಲಿ ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ಅವರನ್ನು ಸ್ವಾಗತಿಸಿದಾಗ ಈ ಬಾಂಧವ್ಯ ಮತ್ತಷ್ಟು ದೃಢಪಟ್ಟಿತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation