ಮುಸಲ್ಮಾನರು ಮಕ್ಕಳಿಗೆ ಕಲಿಯಲು ಮದರಸಾಗಳ ಬದಲು ಶಾಲೆಗೆ ಕಳಿಸಬೇಕು !

ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ ಬಿಸ್ವ ಸರಮಾ ಇವರಿಂದ ಕರೆ !

ಮುಖ್ಯಮಂತ್ರಿ ಹಿಮ್ಮತ ಬಿಸ್ವ ಸರಮಾ

ಗೋಹಾಟಿ (ಅಸ್ಸಾಂ) – ಅಸ್ಸಾಂನಲ್ಲಿನ ಮಿಯಾನ (ಬಂಗಾಲಿ ಭಾಷೆಯ ಮುಸಲ್ಮಾನರು) ಮಾನ್ಯತೆ ಬೇಕಿದ್ದರೆ ಅವರು ಬಾಲ್ಯ ವಿವಾಹ ಮತ್ತು ಬಹುಪತ್ನಿತ್ವ ದಂತಹ ಪದ್ಧತಿಗಳನ್ನು ತ್ಯಜಿಸಬೇಕು. ಈ ಜನರಿಗೆ ಅವರ ಮಕ್ಕಳಿಗೆ ಆಧುನಿಕ ವೈದ್ಯ (ಡಾಕ್ಟರ್), ಇಂಜಿನಿಯರ್ ಮಾಡಬೇಕಿದ್ದರೆ, ಅವರಿಗೆ ಮದರಸಾಗಳ ಬದಲು ಶಾಲೆಗೆ ಕಳಿಸಬೇಕು ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಹೇಳಿದರು. ‘ಎರಡಕ್ಕಿಂತ ಹೆಚ್ಚು ಮಕ್ಕಳು ಪಡೆಯಲು ಸಾಧ್ಯವಿಲ್ಲ ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳ ವಿವಾಹ ಕೂಡ ಮಾಡಲು ಸಾಧ್ಯವಿಲ್ಲ, ಎಂದು ಮುಖ್ಯಮಂತ್ರಿ ಸರಮಾ ಇವರು ಮುಸಲ್ಮಾನರಿಗೆ ಷರತ್ತು ವಿಧಿಸಿದರು. ‘ಮಿಯಾ’ ಇದು ಆಸ್ಸಾಂನಲ್ಲಿನ ಬಂಗಾಳಿ ಭಾಷೆಯ ಮುಸಲ್ಮಾನರಿಗಾಗಿ ಉಪಯೋಗಿಸುವ ಪದವಾಗಿದೆ. ಬಂಗಾಳಿ ಭಾಷೆ ಅಲ್ಲದವರನ್ನು ಬಾಂಗ್ಲಾದೇಶಿ ನಿರಾಶ್ರಿತರು ಎಂದು ಗುರುತಿಸುತ್ತಾರೆ.

೧. ಮುಖ್ಯಮಂತ್ರಿ ಸರಮಾ ಇವರು, ಅಸ್ಸಾಂ ಜನರ ಸಂಸ್ಕೃತಿ ಇದೆ, ಅದರಲ್ಲಿ ಅವರು ಹೆಣ್ಣು ಮಕ್ಕಳನ್ನು ಶಕ್ತಿಯ ಜೊತೆ (ದೇವಿ) ಹೋಲಿಸುತ್ತಾರೆ ಮತ್ತು ೨ -೩ ವಿವಾಹವಾಗುವುದು, ಇದು ಅಸ್ಸಾಂನ ಸಂಸ್ಕೃತಿ ಅಲ್ಲ. ಬಂಗಾಲಿ ಭಾಷೆಯ ಮುಸಲ್ಮಾನರಿಗೆ ಅಸ್ಸಾಂನ ಪರಂಪರೆ ಪಾಲಿಸುತ್ತಿದ್ದರೆ ಅವರನ್ನು ಕೂಡ ಸ್ವದೇಶಿಗಳೆಂದು ತಿಳಿಯಲಾಗುವುದು.

೨. ಅಸ್ಸಾಂ ಸರಕಾರದ ಮಂತ್ರಿ ಮಂಡಲವು ೨೦೨೨ ರಲ್ಲಿ ಸುಮಾರು ೪೦ ಲಕ್ಷ ಅಸ್ಸಾಮಿ ಭಾಷೆಯ ಮುಸಲ್ಮಾನರನ್ನು ಸ್ಥಿಳಿಯ ಅಸ್ಸಾಂ ಮುಸಲ್ಮಾನರೆಂದು ಮಾನ್ಯತೆ ನೀಡಿದೆ ಮತ್ತು ಅವರಿಗೆ ಬಾಂಗ್ಲಾದೇಶ ವಂಶದ ನಿರಾಶ್ರಿತರಿಂದ ಬೇರೆ ಮಾಡಲಾಯಿತು. ಅಸ್ಸಾಮಿ ಭಾಷೆಯ ಸ್ಥಳೀಯ ಮುಸಲ್ಮಾನರು ಒಟ್ಟು ಮುಸಲ್ಮಾನ ಜನಸಂಖ್ಯೆಯಲ್ಲಿ ಶೇಕಡ ೩೭ ರಷ್ಟು ಇದ್ದಾರೆ. ಉಳಿದಿರುವ ಶೇಕಡಾ ೬೩ ರಷ್ಟು ನಿರಾಶ್ರಿತ ಬಂಗಾಳಿ ಭಾಷೆಯ ಮುಸಲ್ಮಾನರಿದ್ದಾರೆ.